PM Kisan Samman Nidhi : ಪತಿ ಮತ್ತು ಪತ್ನಿ ಇಬ್ಬರೂ ವರ್ಷಕ್ಕೆ 6,000 ರೂ. ಕ್ಲೈಮ್ ಮಾಡಿಕೊಳ್ಳಬಹುದಾ; ಪಿಎಂ ಕಿಸಾನ್ ಯೋಜನೆಯ ನಿಯಮ ಹೇಳುವುದಾದರೂ ಏನು…

ಇತ್ತೀಚೆಗೆ ಅಂದರೆ ಅಕ್ಟೋಬರ್ 17 ರಂದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭೂಮಿ ಹೊಂದಿರುವ ಎಲ್ಲಾ ರೈತ ಕುಟುಂಬಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) (PM Kisan Samman Nidhi) ಯೋಜನೆಯಡಿ 12 ನೇ ಕಂತು 2,000 ರೂ. ಬಿಡುಗಡೆ ಮಾಡಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಕೇಂದ್ರ ಸರ್ಕಾರದಿಂದ ಶೇಕಡಾ 100 ರಷ್ಟು ಹಣವನ್ನು ಹೊಂದಿರುವ ಕೇಂದ್ರದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, 2 ಹೆಕ್ಟೇರ್‌ವರೆಗಿನ ಜಮೀನು/ಮಾಲೀಕತ್ವವನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6,000 ರೂ.ಗಳ ಬೆಂಬಲವನ್ನು ಒದಗಿಸಲಾಗುತ್ತದೆ.

ಆದರೆ, ಈಗ ಪತಿ-ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ, ಅವರಿಗೆ ಈ ಪ್ರಯೋಜನಗಳು ಸಿಗುತ್ತವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳುವ ಮೊದಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನಿಯಮಗಳೇನು ಎಂಬುದನ್ನು ತಿಳಿಯುವುದು ಅವಶ್ಯಕವಾಗಿದೆ.

  1. ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಯಾರು ಅರ್ಹರು?
    ತಮ್ಮದೇ ಹೆಸರಿನಲ್ಲಿ ಕೃಷಿಯೋಗ್ಯ ಭೂಮಿ ಹೊಂದಿರುವ ಎಲ್ಲಾ ಭೂಹಿಡುವಳಿ ರೈತರ ಕುಟುಂಬಗಳು ಈ ಯೋಜನೆಯಡಿಯಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
  2. ಎರಡು ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿಯೋಗ್ಯ ಭೂಮಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಅಥವಾ ರೈತ ಕುಟುಂಬವು ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಬಹುದೇ?
    ಹೌದು. ಪಿಎಂ ಕಿಸಾನ್‌ ಯೋಜನೆಯ ವ್ಯಾಪ್ತಿಯನ್ನು ಎಲ್ಲಾ ರೈತ ಕುಟುಂಬಗಳಿಗೆ ಅವರ ಜಮೀನು ಹಿಡುವಳಿಗಳ ಗಾತ್ರವನ್ನು ಲೆಕ್ಕಿಸದೆ ವಿಸ್ತರಿಸಲಾಗಿದೆ.

ಇದನ್ನೂ ಓದಿ : Accident News:ಕ್ರೂಸರ್ – ಟ್ರ್ಯಾಕ್ಟರ್ ಭೀಕರ ಅಪಘಾತ : ದಂಪತಿ ಸಾವು, 9 ಮಂದಿಗೆ ಗಾಯ

  1. ಒಂದು ಕುಟುಂಬದಲ್ಲಿ ಎಷ್ಟು ಸದಸ್ಯರು ಪಿಎಂ ಕಿಸಾನ್ ಪ್ರಯೋಜನವನ್ನು ಪಡೆಯಬಹುದಾಗಿದೆ?
    ಈ ಯೋಜನೆಯ ನಿಯಮದ ಪ್ರಕಾರ, ಕುಟುಂಬದ ಒಬ್ಬ ಸದಸ್ಯ ಮಾತ್ರ ಅದರ ಪ್ರಯೋಜನವನ್ನು ಪಡೆಯಬಹುದಾಗಿದೆ.
  2. ಪತಿ, ಪತ್ನಿ ಇಬ್ಬರೂ ಒಟ್ಟಿಗೆ ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಬಹುದೇ?
    ಇಲ್ಲ. ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್‌ಗೆ ಅರ್ಜಿ ಸಲ್ಲಿಸಿದರೆ ಇಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಾಗುವುದಿಲ್ಲ. ಏಕೆಂದರೆ, 6,000 ರೂ.ಗಳ ಆರ್ಥಿಕ ನೆರವು ಇಡೀ ಕುಟುಂಬಕ್ಕೆ ನೀಡಲಾಗುತ್ತದೆ.
  3. ಆದಾಯ ತೆರಿಗೆ ಪಾವತಿಸುವ ರೈತ ಕುಟುಂಬ ಅಥವಾ ಸಂಗಾತಿ (ಪತಿ/ಪತ್ನಿ) ಪಿಎಂ ಕಿಸಾನ್‌ ಯೋಜನೆಯಡಿ ಲಾಭ ಪಡೆಯಲು ಅರ್ಹರೇ?
    ಇಲ್ಲ. ಕುಟುಂಬದ ಸದಸ್ಯರು ಕಳೆದ ಅಸೆಸ್ಮೆಂಟ್ ವರ್ಷದಲ್ಲಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಆ ಕುಟುಂಬವು ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯಲು ಅರ್ಹರಾಗಿರುವುದಿಲ್ಲ.
  4. ಯಾರು ಅರ್ಹ ಫಲಾನುಭವಿಗಳು?
    ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, 5 ಎಕರೆ ಕೃಷಿಯೋಗ್ಯ ಸಾಗುವಳಿ ಹೊಂದಿರುವ ರೈತರಿಗೆ ಮಾತ್ರ ಅದರ ಲಾಭ ಸಿಗುತ್ತದೆ. ವ್ಯಕ್ತಿಯ ಅವನ/ಆಕೆಯ ಹೆಸರಿನಲ್ಲಿ ಕೃಷಿಭೂಮಿ ನೋಂದಣಿಯಾಗಿರದಿದ್ದರೆ ಆ ವ್ಯಕ್ತಿಯು ಪಿಎಂ ಕಿಸಾನ್‌ ಯೋಜನೆಗೆ ಅನರ್ಹನಾಗಿರುತ್ತಾನೆ. ಒಂದು ವೇಳೆ ಭೂಮಿಯನ್ನು ವ್ಯಕ್ತಿಯ ತಂದೆ ಅಥವಾ ಅಜ್ಜನ ಹೆಸರಿನಲ್ಲಿ ನೋಂದಾಯಿಸಿದ್ದರೆ ಯೋಜನೆಯ ಪ್ರಯೋಜನವನ್ನು ಪಡೆಯಲಾಗುವುದಿಲ್ಲ. ಸರ್ಕಾರಿ ನೌಕರರಾಗಿರುವ ಕೃಷಿ ಜಮೀನುಗಳ ಮಾಲೀಕರಿಗೆ ಈ ಯೋಜನೆಯನ್ನು ಅಸಿಂಧುಗೊಳಿಸಲಾಗಿದೆ. ಮತ್ತು ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಯೋಜನೆಗೆ ಅನರ್ಹರಾಗಿರುತ್ತಾರೆ.

ಇದನ್ನೂ ಓದಿ : Mangaluru Airport : ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ ಟಿಸಿ ಬಸ್‌ ಸಂಚಾರ ಪುನರಾರಂಭ

(PM Kisan Samman Nidhi new rules. Can both husband and wife claim rs 6,000)

Comments are closed.