PM Kisan Yojana Benefits : ಈ ರೈತರಿಗೆ ಇನ್ಮುಂದೆ ಸಿಗಲ್ಲ ಪಿಎಂ ಕಿಸಾನ್‌ ಹಣ

ನವದೆಹಲಿ : ಕೇಂದ್ರ ಸರಕಾರ ರೈತರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ. ಪಿಎಂ ಕಿಸಾನ್ ಯೋಜನೆಯ 14 ನೇ ಕಂತು (PM Kisan Yojana Benefits)‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ದೇಶದ ಕೋಟಿಗಟ್ಟಲೆ ರೈತರು ಈ ಕಂತಿಗಾಗಿ ಕಾದು ಕುಳಿತಿದ್ದಾರೆ. ಹೌದು ಈ ಯೋಜನೆಯ 13 ಕಂತು ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದು, ರೈತರಿಗೆ ಮಾರ್ಚ್‌ ತಿಂಗಳಾರ್ಧದಲ್ಲಿ ದೊರಕಿದೆ. ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಇರುವ ರೈತರು ಕೃಷಿ ಚುಟುವಟಿಕೆ ಸಂಬಂಧಿಸಿದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಕಂತಿನಲ್ಲಿ ಸಿಗುವ ಹಣವು ಬಿತ್ತನೆ ಬೀಜದ ಖರೀದಿಗೆ ಸಹಾಯಕಾರಿ ಆಗಲಿದೆ. ಆದರಿಂದ ದೇಶದ ಹೆಚ್ಚಿನ ರೈತರು 14 ನೇ ಕಂತು ನಿರೀಕ್ಷೆಯಲ್ಲಿದ್ದಾರೆ. ಇದುವರೆಗೆ ಸರಕಾರ ರೈತರಿಗೆ 13 ಕಂತುಗಳನ್ನು ನೀಡಿದೆ. ಆದರೆ ಈಗ ಈ ಯೋಜನೆಗೆ ಸಂಬಂಧಿಸಿದಂತೆ ಒಂದು ದೊಡ್ಡ ಅಪ್‌ಡೇಟ್ ಬರುತ್ತಿದ್ದು, ಕೆಲವು ರಾಜ್ಯಗಳ ರೈತರು 14 ನೇ ಕಂತಿನಿಂದ ವಂಚಿತರಾಗಬಹುದು.

PM Kisan Yojana Benefits : ಏನಿದು ಪಿಎಂ ಕಿಸಾನ್ ಯೋಜನೆ ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ವರ್ಷದಲ್ಲಿ 6 ಸಾವಿರ ರೂ. ಈ ಮೊತ್ತವನ್ನು ಒಂದೇ ಬಾರಿಗೆ ನೀಡುವುದಿಲ್ಲ, ಬದಲಿಗೆ 3 ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ ರೈತರಿಗೆ ಒಂದು ಕಂತು ಬಿಡುಗಡೆಯಾಗುತ್ತದೆ. ರೈತರಿಗೆ ಪ್ರತಿ ಕಂತಿನಲ್ಲಿ 2 ಸಾವಿರ ರೂ. ಸಿಗುತ್ತದೆ.

ಬಿಹಾರದ ಈ ರೈತರಿಗೆ ಕಂತು ಏಕೆ ಸಿಗುವುದಿಲ್ಲ?
ಈ ಬಾರಿ ಬಿಹಾರ ರಾಜ್ಯದ ಹಲವು ರೈತರಿಗೆ 14ನೇ ಕಂತು ಸಿಗುವುದಿಲ್ಲ. ಬಿಹಾರದಲ್ಲಿ 14.60 ಲಕ್ಷ ರೈತರು ಇನ್ನೂ ಇ-ಕೆವೈಸಿ ಮಾಡಿಲ್ಲ. ರೈತರಿಗೆ ಜಿಲ್ಲಾವಾರು ಪಟ್ಟಿಯನ್ನು ಕಳುಹಿಸಿ ಇ-ಕೆವೈಸಿ ಮಾಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ. ಈ ಪಟ್ಟಿಯನ್ನು ಕೃಷಿ ಸಂಯೋಜಕರಿಗೆ ನೀಡಲಾಗುವುದು. ಇಲ್ಲಿ ಸಂಯೋಜಕರು ರೈತರ ಮನೆಗೆ ಹೋಗಿ ಇ-ಕೆವೈಸಿ ಮಾಡುತ್ತಾರೆ. ಈ ಇ-ಕೆವೈಸಿ ಇತ್ತೀಚೆಗೆ ಬಿಡುಗಡೆಯಾದ ಮೊಬೈಲ್ ಅಪ್ಲಿಕೇಶನ್ ಮೂಲಕ ಮಾಡಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯ 14 ನೇ ಕಂತು ಜೂನ್ ಮೊದಲ ವಾರದಲ್ಲಿ ಬಿಡುಗಡೆಯಾಗಬಹುದು ಎಂದು ನಂಬಲಾಗಿದೆ. ಈ ಬಾರಿ ಇ-ಕೆವೈಸಿ ಮೂಲಕ ತಮ್ಮ ಭೂಮಿಯನ್ನು ಪರಿಶೀಲಿಸಿದ ರೈತರಿಗೆ ಮಾತ್ರ ಕಂತು ಸಿಗಲಿದೆ.

ಇದನ್ನೂ ಓದಿ : ರೈತರು ಬೇರೆಯರ ಹೊಲದಲ್ಲಿ ಕೃಷಿ ಮಾಡುತ್ತಿದ್ದರೆ, ಪಿಎಂ ಕಿಸಾನ್ ಯೋಜನೆಯ ಪ್ರಯೊಜನ ಪಡೆಯಬಹುದೇ ?

ಇದನ್ನೂ ಓದಿ : PM Kisan Yojana : ಪಿಎಂ ಕಿಸಾನ್‌ ಯೋಜನೆಯಡಿ ಪತಿ, ಪತ್ನಿ ಇಬ್ಬರೂ ಲಾಭವನ್ನು ಪಡೆಯಬಹುದೇ ?

ಇ-ಕೆವೈಸಿ ಮಾಡುವುದು ಹೇಗೆ?

  • ನೀವು ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.
  • ಇಲ್ಲಿ ಹೋಮ್ ಸ್ಕ್ರೀನ್‌ನಲ್ಲಿ ಇರುವ ಇ-ಕೆವೈಸಿ ಆಯ್ಕೆಯನ್ನು ಆರಿಸಬೇಕಾಗುತ್ತದೆ.
  • ಇದರ ನಂತರ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಬೇಕು.
  • ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು OTP ಅನ್ನು ಪಡೆಯುತ್ತೀರಿ. Get OTP ಕ್ಲಿಕ್ ಮಾಡಿ ಮತ್ತು OTP ನಮೂದಿಸಿದ ನಂತರ Enter ಬಟನ್‌ ಒತ್ತಬೇಕು
  • ನಿಮ್ಮ ಇ-ಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

PM Kisan Yojana Benefits: These farmers will not get the 14th installment of PM Kisan Yojana, here is the complete information

Comments are closed.