Ghee Avalakki Recipe : ಮಳೆಗಾಲದ ಸಂಜೆ ಸ್ನಾಕ್‌ಗೆ ಟ್ರೈ ಮಾಡಿ ತುಪ್ಪದ ಅವಲಕ್ಕಿ

Ghee Avalakki Recipe : ಮಳೆಗಾಲ ಶುರುವಾಗುತ್ತಿದ್ದಂತೆ ಸಂಜೆ ಟೀ ವೇಳೆಗೆ ಮನೆಯಲ್ಲಿ ಏನಾದರೂ ತಿನ್ನಬೇಕು ಎನ್ನುವ ಬಯಕೆ ಎಲ್ಲರಲ್ಲೂ ಇರುತ್ತದೆ. ಇನ್ನು ಅಂಗಡಿ, ಬೇಕರಿಗಳಲ್ಲಿ ಸಿಗುವ ಸ್ನಾಕ್ಸ್‌ಗಳನ್ನು (Ghee Avalakki Recipe) ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲೇ ತಯಾರಿಸಿ ಸ್ನಾಕ್ಸ್‌ ಆರೋಗ್ಯಕ್ಕೂ ಉತ್ತಮ. ಅಷ್ಟೇ ಅಲ್ಲದೇ ತಿನ್ನುವುದಕ್ಕೂ ರುಚಿಯಾಗಿರುತ್ತದೆ. ಮನೆಯಲ್ಲೇ ಮಾಡುವ ಸ್ನಾಕ್ಸ್‌ ತಿನ್ನುವುದರಿಂದ ಬೇಗ ಜೀರ್ಣಿಸಿಕೊಳ್ಳಬಹುದು.

ಹಾಗೆಯೇ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಬಹುದಾಗಿದೆ. ಇನ್ನು ಸಂಜೆ ವೇಳೆ ಸ್ನಾಕ್ಸ್‌ ಯಾವಗಲೂ ಹಿತ ಮಿತವಾಗಿದ್ದರೆ ಆಗೋಗ್ಯಕ್ಕೆ ಉತ್ತಮವಾಗಿರುತ್ತದೆ. ಹಾಗಾಗಿ ಮನೆಯಲ್ಲೇ ಸುಲಭವಾಗಿ ತಯಾರಿಸ ತುಪ್ಪದ ಅವಲಕ್ಕಿ. ಈ ತುಪ್ಪದ ಅವಲಕ್ಕಿಯನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಯಾಕೆಂದರೆ ಅಷ್ಟೊಂದು ರುಚಿಯಾಗಿರುತ್ತದೆ. ಹಾಗಾದರೆ ಬನ್ನಿ ಈ ತುಪ್ಪದ ಅವಲಕ್ಕಿಯನ್ನು ತಯಾರಿಸಲು ಏನಲ್ಲಾ ಬೇಕಾಗುತ್ತದೇ ? ಹೇಗೆ ತಯಾರಿಸುವುದು ಅನ್ನುವುದನ್ನು ತಿಳಿಯೋಣ.

Ghee Avalakki Recipe : ಬೇಕಾಗುವ ಸಾಮಾಗ್ರಿ

  • ಪೇಪರ್‌/ತೆಳು ಅವಲಕ್ಕಿ
  • ಹಸಿ ನೆಲಗಡಲೆ ಬೀಜ
  • ತುಪ್ಪ
  • ಗೊಂಡಬಿ
  • ಸಾಸಿವೆ
  • ಜೀರಿಗೆ
  • ಕರಿಬೇವಿನ ಸೊಪ್ಪು
  • ಈರುಳ್ಳಿ
  • ಹಸಿ ಮೆಣಸು
  • ಸಕ್ಕರೆ
  • ಉಪ್ಪು
  • ತೆಂಗಿನ ತುರಿ
  • ನಿಂಬೆ ಹಣ್ಣಿನ ರಸ ಅರ್ಧ
  • ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :

ಮೊದಲಿಗೆ ಗ್ಯಾಸ್‌ ಸ್ಟವ್‌ ಆನ್‌ ಮಾಡಿ ಅದರ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಳ್ಳಬೇಕು. ಅದಕ್ಕೆ ಒಂದು ಚಮಚ ತುಪ್ಪವನ್ನು ಹಾಕಿಕೊಂಡು ಅದಕ್ಕೆ ನಾಲ್ಕು ಚಮಚದಷ್ಟು ನೆಲಗಡಲೆ ಹಾಕಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಒಂದು ಚಮಚದಷ್ಟು ಗೋಡಂಬಿ ಹಾಕಿ ಹೊಂಬಣ್ಣ ಬರುವವರೆಗೂ ಹುರಿದುಕೊಂಡು ಒಂದು ಪಾತ್ರೆಗೆ ತೆಗೆದು ಇಟ್ಟುಕೊಳ್ಳಬೇಕು. ಆಮೇಲೆ ಅದಕ್ಕೆ ಮತ್ತೆ ಎರಡರಿಂದ ಮೂರು ಚಮಚದಷ್ಟು ತುಪ್ಪವನ್ನು ಹಾಕಿಕೊಳ್ಳಬೇಕು.

ಆಮೇಲೆ ಅದಕ್ಕೆ ಅರ್ಧ ಚಮಚದಷ್ಟು ಸಾಸಿವೆ, ಜೀರಿಗೆ ಹಾಕಿಕೊಳ್ಳಬೇಕು. ನಂತರ ಸಣ್ಣಕ್ಕೆ ಕಟ್‌ ಮಾಡಿ ಇಟ್ಟುಕೊಂಡಿರುವ ಕರಿಬೇವಿನ ಸೊಪ್ಪು, ಒಂದು ಸಣ್ಣಕ್ಕೆ ಹಚ್ಚಿ ಇಟ್ಟುಕೊಂಡ ಈರುಳ್ಳಿ ಹಾಗೂ ಖಾರಕ್ಕೆ ಬೇಕಾದಷ್ಟಿ ಇಲ್ಲದಿದ್ದರೆ ಸಣ್ಣಕ್ಕೆ ಹಚ್ಚಿಕೊಂಡ ಎರಡು ಹಸಿ ಮೆಣಸನ್ನು ಹಾಕಿಕೊಂಡು ಹಸಿ ವಾಸನೆ ಹೋಗುವರೆಗೂ ಹುರಿದುಕೊಳ್ಳಬೇಕು. ಆಮೇಲೆ ಅದಕ್ಕೆ ಒಂದೂವರೆ ಚಮಚದಷ್ಟು ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಶ್ರಣ ಮಾಡಿಕೊಂಡು ಸ್ಟವ್‌ ಆಫ್‌ ಮಾಡಿಕೊಳ್ಳಬೇಕು.

ಇದನ್ನೂ ಓದಿ : Pineapple Recipe : ಹುಳಿ ಸಿಹಿ ಮಿಶ್ರಣದ ಅನಾನಸ್‌ ಫಿರ್ನಿ; ಮಹಿಳಾ ದಿನಾಚರಣೆಗೊಂದು ವಿಶೇಷ ಪಾಕವಿಧಾನ

ಇದನ್ನೂ ಓದಿ : Breakfast Recipe : ಬೆಳಗ್ಗಿನ ಉಪಾಹಾರಕ್ಕೆ ಡಿಫರೆಂಟ್‌ ಆಗಿ ಪೌಷ್ಠಿಕವಾದ ಸೋರೆಕಾಯಿ ಚಿಲ್ಲಾ ಪ್ರಯತ್ನಿಸಿ

ಈ ಮಿಶ್ರಣ ತಣ್ಣಗೆ ಆದ ಮೇಲೆ ಎರಡು ಕಪ್‌ ಆಗುವಷ್ಟು ಪೇಪರ್‌ ಅಥವಾ ತೆಳು ಅವಲಕ್ಕಿ, ಹಾಗೂ ಅರ್ಧ ಕಪ್‌ ಆಗುವಷ್ಟು ತೆಂಗಿನ ತುರಿ ಹಾಗೂ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಸಣ್ಣಕ್ಕೆ ಹಚ್ಚಿಕೊಂಡ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಕೊಳ್ಳಬೇಕು. ನಂತರ ಮೊದಲು ತುಪ್ಪದಲ್ಲಿ ಹುರಿದು ಇಟ್ಟುಕೊಂಡ ನೆಲಗಡಲೆ ಬೀಜ ಹಾಗೂ ಗೋಡಂಬಿ ಹಾಕಿ ಮಿಶ್ರಣ ಮಾಡಿಕೊಂಡರೆ ರುಚಿಯಾದ ತುಪ್ಪದ ಅವಲಕ್ಕಿ ಸವಿಯಲು ಸಿದ್ದವಾಗಿರುತ್ತದೆ. ಇದು ತಕ್ಷಣಕ್ಕೆ ಮಾಡಿಕೊಳ್ಳವಂತಹ ಸ್ನಾಕ್ಸ್‌ ಆಗಿರುತ್ತದೆ.

Ghee Avalakki Recipe : Try ghee avalakki for a rainy evening snack

Comments are closed.