PM Matsya Sampada Yojana : ಏನಿದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ? ಇದರ ಲಾಭ ಪಡೆಯುವುದು ಹೇಗೆ…

ಕಳೆದ ಕೆಲ ವರ್ಷಗಳಿಂದೀಚೆಗೆ ಪಶುಪಾಲನೆಯ (Animal Husbandry) ತರಹ ಮೀನು ಸಾಕಣಿಕೆ (Fisheries) ಕೂಡಾ, ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವ ಪೂರ್ಣ ಪಾತ್ರವಹಿಸಿದೆ. ಇದು ರೈತರಿಗೆ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ನೆರವು ನೀಡಿದೆ. ಅಲ್ಲಲ್ಲಿ ರೈತರು, ಯುವಕರು ಮೀನು ಸಾಕಣಿಕೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮೀನು ಸಾಕಣಿಕೆಯನ್ನು ಉತ್ತೇಜಿಸುವ ಸಲುವಾಗಿ 2020ರಲ್ಲಿ ಪ್ರಾರಂಭಿಸಿರುವ ಯೋಜನೆಯೇ ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ (PM Matsya Sampada Yojana). ಈ ಯೋಜನೆ (PMMSY) ಯ ಅಡಿಯಲ್ಲಿ ಮೀನು ಸಾಕಣಿಕೆದಾರರು ಸಬ್ಸಿಡಿ ಪಡೆದುಕೊಳ್ಳಬಹುದಾಗಿದೆ. ನಿನ್ನೆ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಮುದ್ರಾಹಾರ ಉದ್ಯಮವನ್ನು ಉತ್ತೇಜಿಸಲು, ಮೀನುಗಾರರು, ಮೀನು ಮಾರಾಟಗಾರರಿಗೆ ಮಾರುಕಟ್ಟೆಗಳನ್ನು ವಿಸ್ತರಿಸಲು ಮತ್ತು ಸಹಾಯ ಮಾಡಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಹೊಸ ಉಪ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಪ್ರಧಾನ ಮಂತ್ರಿ ಮತ್ಸ ಸಂಪದ ಯೊಜನೆ ಅಡಿಯಲ್ಲಿ ಏರಿಯೇಟರ್‌ ಅಳವಡಿಕೆಗೆ ಸುಮಾರು 40 ಸಾವಿರ ರೂ. ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರಿಗೆ ಮೀನು ಸಾಕಣಿಕೆ ಉದ್ಯಮವನ್ನು ಆರಂಭಿಸಲು ಶೇಕಡಾ 60 ರಷ್ಟು ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇಕಡಾ 40 ರಷ್ಟು ಸಬ್ಸಿಡಿ ನೀಡಲಾಗುತ್ತದೆ.

ಇದನ್ನೂ ಓದಿ : Union budget 2023: ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ?

ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ (PMMSY) ಯಲ್ಲಿರುವುದು ಏನು?

  • ಮೀನು ಕೃಷಿ ಘಟಕ ನಿರ್ಮಾಣಕ್ಕೆ ಸಾಲ ಮತ್ತು ತರಬೇತಿ ನೀಡಲಾಗುತ್ತದೆ.
  • ಮೀನು ಸಾಕಣಿಕೆ ಕೊಳಗಳನ್ನು ಸ್ಥಾಪಿಸಿದ ಸ್ಥಳಗಳಲ್ಲಿ ಮಣ್ಣು ಮತ್ತು ನೀರನ್ನು ಪರೀಕ್ಷಿಸಲಾಗುತ್ತದೆ.
  • ಕೊಳಗಳನ್ನು ನಿರ್ಮಿಸಲು ತಗಲುವ ವೆಚ್ಚವನ್ನು ಅಂದಾಜು ಮಾಡಲಾಗುತ್ತದೆ.
  • ಉತ್ತಮ ಗುಣಮಟ್ಟದ ಮೀನು ಬೀಜ ಮತ್ತು ಆಹಾರದ ಲಭ್ಯತೆಯನ್ನು ರೈತರಿಗೆ ಮತ್ತು ಮೀನುಗಾರರಿಗೆ ನೀಡಲಾಗುತ್ತದೆ.
  • ಮೀನಿನ ಬೆಳವಣಿಗೆಗೆ ಅಡ್ಡಿಯಾಗುವ ರೋಗಗಳ ತನಿಖೆ ಮತ್ತು ಚಿಕಿತ್ಸೆಗಾಗಿ ಸಹಾಯವನ್ನು ಒದಗಿಸಲಾಗುತ್ತದೆ.

ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ?
ಪ್ರಧಾನ ಮಂತ್ರಿ ಮತ್ಸ ಸಂಪದ ಯೋಜನೆ ಅಡಿಯಲ್ಲಿ ಮೀನು ಸಾಕಣಿಕೆ ಮಾಡಲು ಅಗತ್ಯ ವಸ್ತುಗಳಿಗಾಗಿ ಅನುದಾನದ ಲಾಭ ಪಡೆಯಲು dof.gov.in/pmmsy ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ರಾಜ್ಯ ಮೀನುಗಾರಿಕೆ ಇಲಾಖೆಯ ವೆಬ್‌ಸೈಟ್‌ ಅಥವಾ ಮೀನುಗಾರಿಕೆ ಇಲಾಖೆ ಕಛೇರಿಗೆ ಭೇಟಿ ನೀಡುವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ : Onion Tea : ಅಧಿಕ ಕೊಲೆಸ್ಟ್ರಾಲ್ ಪರಿಹಾರಕ್ಕೆ ಈರುಳ್ಳಿ ಟೀ ರಾಮಬಾಣ

(PM Matsya Sampada Yojana. What is this government scheme and how to get the benefit of this scheme)

Comments are closed.