Sushmita sen mango : ಮಾರುಕಟ್ಟೆಗೆ ಬರುತ್ತೆ ಸುಶ್ಮಿತಾ ಮಾವಿನಹಣ್ಣು: ಇದಂತೆ ಸ್ಪೆಷಲ್ ಹಣ್ಣು ! ಇಲ್ಲಿದೆ ಡಿಟೇಲ್ಸ್

Sushmita sen mango : ವಿಶ್ವ ಸುಂದರಿ ಸುಶ್ಮಿತಾ ಸೇನ್ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಮದುವೆಯಾಗದೇ ಮಕ್ಕಳನ್ನು ದತ್ತು ಪಡೆದ ಸುಶ್ಮಿತಾ ಸೇನ್‌ಮೊನ್ನೆ ಮೊನ್ನೆ ಬಾಯ್ ಪ್ರೆಂಡ್ ಬದಲಾಯಿಸುವ ಮೂಲಕ ಸದ್ದು ಮಾಡಿದ್ದರು. ಆದರೆ ಈಗ ಮತ್ತೊಮ್ಮೆ ಮಾವಿನಹಣ್ಣಿನ ವಿಚಾರಕ್ಕೆ ಸುಶ್ಮಿತಾ ಸೇನ್ ಗಮನ ಸೆಳೆದಿದ್ದಾರೆ. ಅಯ್ಯೋ ಮಾವಿನ ಹಣ್ಣಿನ ಸೀಸನ್ ಮುಗಿದ ಮೇಲೆ ಇದ್ಯಾಕೆ ಸುಶ್ಮಿತಾ ಸೇನ್ ನೆನಪಿಸ್ಕೋತಿದ್ದೀರಾ ಅಂತ ಕೇಳ್ತಿದ್ದೀರಾ ಈ ಸ್ಟೋರಿ ಓದಿ.

ಉತ್ತರ ಪ್ರದೇಶದ ಲಕ್ನೋ ಮೂಲದ ರೈತ ಹಾಗೂ ತೋಟಗಾರಿಕಾ ತಜ್ಞ ಹಾಜಿ ಕಲಿಮುಲ್ಲಾ ಖಾನ್ ಜಗತ್ತಿಗೆ ಎರಡು ಹೊಸ ಮಾವಿನ‌ತಳಿಗಳನ್ನು ನೀಡಿದ್ದರು. ಈ ಮಾವಿನ ತಳಿಗಳಿಗೆ ಐಶ್ವರ್ಯ ಮತ್ತು ಸಚಿನ್ ಎಂದು ಹೆಸರಿಟ್ಟಿದ್ದರು. ಈಗ ಮತ್ತೆರಡು ಮಾವಿನ ಹಣ್ಣಿನ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಅಲ್ಲದೇ ಈ ಮಿಶ್ರ ಮಾವಿನ ತಳಿಗಳಿಗೆ ಒಬ್ಬ ರಾಜಕೀಯ ನಾಯಕರು ಹಾಗೂ ಸಿನಿಮಾ ನಟಿಯ ಹೆಸರಿಟ್ಟಿದ್ದಾರೆ.

ಈಗ ಹಾಜಿ ಕಲೀಮುಲ್ಲಾ ಖಾನ್ ಅಭಿವೃದ್ಧಿ ಪಡಿಸಿರುವ ಎರಡು ವಿಶಿಷ್ಟ ತಳಿಗಳಿಗೆ ಸುಶ್ಮಿತಾ ಆಮ್ ಮತ್ತು ಅಮಿತಾ ಶಾ ಆಮ್ ಎಂದು ನಾಮಕರಣ ಮಾಡಿದ್ದಾರೆ. ಉತ್ತರ ಪ್ರದೇಶದ ಮಲಿಹಾಬಾದ್ ನಲ್ಲಿನ ತಮ್ಮ ತೋಟದಲ್ಲಿ ಈ ತಳಿಯನ್ನು ಅಭಿವೃದ್ಧಿಯನ್ನು ಬೆಳೆದಿದ್ದಾರೆ. ಅಲ್ಲದೇ ಈ ತಳಿಯಿಂದ ಉತ್ತಮ ಫಲಗಳನ್ನು ಪಡೆದಿರೋದಾಗಿಯೂ ಹೇಳಿದ್ದಾರೆ.

ಇನ್ನು ಸುಶ್ಮಿತಾ ಆಮ್ ಮತ್ತು ಅಮಿತ್ ಶಾ ಆಮ್ ಎಂದು ಹೆಸರಿಡಲು ಕಾರಣ ಏನೆಂಬುದನ್ನು ಹಾಜಿ ಕಲೀಮುಲ್ಲಾ ವಿವರಿಸಿದ್ದಾರೆ. ವಿಶ್ವಸುಂದರಿಯಾದ ಸುಶ್ಮಿತಾ ಸೇನ್ ತಮ್ಮ ದೇಹ ಸೌಂದರ್ಯದ ಮೂಲಕವೇ ಹೆಸರಾದವರು. ಆದರೆ ಅವರ ಮನಸ್ಸು ಕೂಡ ಅಷ್ಟೇ ಸುಂದರವಾಗಿದೆ. ಅವರು ಇಬ್ಬರು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಹೀಗೆ ಆಂತರಿಕ ಹಾಗೂ ಬಾಹ್ಯವಾಗಿಯೂ ಸುಂದರವಾಗಿರುವ ಸುಶ್ಮಿತಾ ಸೇನ್ ಒಳ ಮತ್ತು ಹೊರಗೆ ರುಚಿಯಾಗಿರುವ ಈ ಹಣ್ಣು ಸರಿ ಹೊಂದುತ್ತದೆ ಎಂದು ಹಾಜಿ ಹೇಳಿದ್ದಾರೆ.

ಮೊದಲ ತಳಿಗೆ ಐಶ್ವರ್ಯಾ ಹೆಸರಿಟ್ಟಾಗಲೇ ಸುಶ್ಮಿತಾ ಹೆಸರನ್ನು ಇಡಲು ಸೂಚಿಸಲಾಗಿತ್ತಂತೆ. ಈಗ ಅಭಿಮಾನಿಗಳ ಬೇಡಿಕೆಯಂತೆ ಸುಶ್ಮಿತಾ ಆಮ್ ಸಿದ್ಧವಾಗಿದೆ. ಅಭಿವೃದ್ಧಿ ಪಡಿಸಿದ ಇನ್ನೊಂದು ಮಾವು ಕೂಡ ಸ್ವಾದಿಷ್ಟವಾಗಿರೋದರಿಂದ ಹಾಜಿ ಅದಕ್ಕೆ ಅಮಿತ್ ಶಾ ಮಾವು ಎಂದು ಹೆಸರಿಟ್ಟಿದ್ದಾರಂತೆ. ಇನ್ನು ಸದ್ಯದಲ್ಲೇ ಈ ಸುಶ್ಮಿತಾ ಮಾವಿನ‌ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆಯಂತೆ.

ಇದನ್ನೂ ಓದಿ : Chamarajpet Idgah : ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತು: ಬಿಬಿಎಂಪಿ ಆದೇಶ

ಇದನ್ನೂ ಓದಿ : Ganeshotsav New Rules : ಬಿಜೆಪಿ ಸರ್ಕಾರವಿದ್ದರೂ ಗಣೇಶೋತ್ಸವಕ್ಕೆ ನೊರೆಂಟು ರೂಲ್ಸ್: ಹಿಂದೂಪರ ಸಂಘಟನೆಗಳ ಆಕ್ರೋಶ

Sushmita sen mango comes to the market, It is like a special fruit

Comments are closed.