Ganeshotsav New Rules : ಬಿಜೆಪಿ ಸರ್ಕಾರವಿದ್ದರೂ ಗಣೇಶೋತ್ಸವಕ್ಕೆ ನೊರೆಂಟು ರೂಲ್ಸ್: ಹಿಂದೂಪರ ಸಂಘಟನೆಗಳ ಆಕ್ರೋಶ

ಬೆಂಗಳೂರು : (Ganeshotsav New Rules) ದೇಶ ಹಾಗೂ ರಾಜ್ಯದಲ್ಲಿ ಗಣೇಶ ಚತುರ್ಥಿಯನ್ನು ಧಾರ್ಮಿಕ ಶೃದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ.‌ಗಲ್ಲಿ ಗಲ್ಲಿಯಲ್ಲೂ ಗಣೇಶ್ ನನ್ನು ಕೂರಿಸಿ ಅರಾಧಿಸೋದು ಈ ಹಬ್ಬದ ವೈಶಿಷ್ಠ್ಯ. ಆದರೆ ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣಕ್ಕೆ ಹಬ್ಬ ಕಳೆಗುಂದಿತ್ತು. ಆದರೆ ಕಳೆದ ವರ್ಷ ನಿಯಮಗಳಲ್ಲಿ ಕೊಂಚ ಸಡಿಲಿಕೆ‌‌ ಮಾಡಲಾಗಿತ್ತು. ಆದರೆ ಈ ಭಾರಿಯೂ ಅದೇ ನಿಯಮಗಳು ಮುಂದುವರಿಯಲಿದ್ದು ಏರಿಯಾಗೇ ಅಂದ್ರೇ ವಾರ್ಡಗೊಂದೇ ಗಣಪತಿ ಎಂದು ಘೋಷಿಸುವ ಮೂಲಕ ಜನರಿಗೆ ಬಿಬಿಎಂಪಿ ಶಾಕ್ ನೀಡಿದೆ.

ಹೌದು ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿ, ಏರಿಯಾಗಳಲ್ಲಿ 8-10 ಗಣೇಶನನ್ನು ಕೂಡಿಸಿ ಆರಾಧಿಸೋದು ವಾಡಿಕೆ. ಆದರೆ ಹಿಂದಿನ ವರ್ಷ ಕೊರೋನಾ ಹಿನ್ನೆಲೆಯಲ್ಲಿ ವಾರ್ಡ್ ಗೆ ಒಂದೇ ಒಂದು ಗಣಪತಿ ಸ್ಥಾಪನೆಗೆ ಅವಕಾಶ ನೀಡಲಾಗಿತ್ತು. ಬಿಬಿಎಂಪಿ ಈ ನಿಯಮಕ್ಕೆ ಅಸಮಧಾನ ವ್ಯಕ್ತವಾಗಿದ್ದರೂ ಕೊರೋನಾ ಕಾರಣಗಳನ್ನು ಮುಂದಿಟ್ಟುಕೊಂಡು ಬಿಬಿಎಂಪಿ ಜನರ ಬಾಯಿ ಮುಚ್ಚಿಸಿತ್ತು. ಆದರೆ ಈಗ ಈ ವರ್ಷವೂ ಬಿಬಿಎಂಪಿ ವಾರ್ಡ್ ಗೆ ಒಂದೇ ಗಣಪತಿ ಸ್ಥಾಪನೆಗೆ ಅನುಮತಿ ನೀಡಲಾಗುತ್ತದೆ. ಹಿಂದಿನ ವರ್ಷದ ಆದೇಶವನ್ನು ಮುಂದುವರೆಸುವುದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಘೋಷಿಸಿದ್ದಾರೆ.

ಅಲ್ಲದೇ ಈಗಾಗಲೇ ಪರಿಸರ ರಕ್ಷಣೆಯ ಕಾರಣಕ್ಕೆ ಬಹಿಷ್ಕರಿಸಲಾದ ಪಿಓಪಿ ಗಣೇಶ ಮೂರ್ತಿಗಳನ್ನು ಬಳಸುವಂತಿಲ್ಲ ಎಂದು ಸೂಚಿಸಿದೆ. ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಮೂರ್ತಿಗಳ ಸ್ಥಾಪನೆಯನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಆದೇಶ ಮೀರಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿದ್ರೇ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತರು ಎಚ್ಚರಿಸಿದ್ದಾರೆ.

ಇನ್ನೊಂದೆಡೆ ಬಿಬಿಎಂಪಿ ವಾರ್ಡ್ ಗೊಂದೇ ಗಣಪತಿ ಸ್ಥಾಪನೆಗೆ ಅವಕಾಶ ಎಂದು ಹೇಳಿರೋದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಾರಿಗೂ ಇಲ್ಲದ ನಿಯಮಗಳು ಹಿಂದೂ ಹಬ್ಬಗಳಿಗೆ ಯಾಕೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ರೂಪಿಸಿರುವ ನಿಯಮಕ್ಕೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರೋ ಪ್ರಮೋದ್ ಮುತಾಲಿಕ್ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದ್ದು, ಗಣೇಶೋತ್ಸವಕ್ಕೆ ನೊರೆಂಟು ನಿಯಮ ಹಾಗೂ ಅನುಮತಿ ಪಡೆಯಲು ಸೂಚಿಸಿರೋದು ನಿಜಕ್ಕೂ ಅವಮಾನಕರ ಸಂಗತಿ ಎಂದು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಸದ್ಯ ಗಣೇಶೋತ್ಸವ ಕ್ಕೆ ಬಿಬಿಎಂಪಿ ಹಾಗೂ ಸರ್ಕಾರ ರೂಪಿಸಿರುವ ನಿಯಮ ಈಗ
ಹೊಸ ವಿವಾದ ಸೃಷ್ಟಿಸಿದೆ.

ಇದನ್ನೂ ಓದಿ : Vice President Jagdeep Dhankhar : ವಕೀಲ ವೃತ್ತಿಯಿಂದ ಉಪರಾಷ್ಟ್ರಪತಿ : ಜಗದೀಪ್ ಧಂಕರ್ ಹಿನ್ನೆಲೆ ನಿಮಗೆ ಗೊತ್ತಾ ?

ಇದನ್ನೂ ಓದಿ : Chamarajpet Idgah : ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆ ಸ್ವತ್ತು: ಬಿಬಿಎಂಪಿ ಆದೇಶ

Ganeshotsav New Rules BJP government Outrage of Hindu organizations

Comments are closed.