Team India for Asia Cup 2022 : ಏಷ್ಯಾ ಕಪ್‌ಗೆ ನಾಳೆ ಟೀಮ್ ಇಂಡಿಯಾ ಪ್ರಕಟ; ರಾಹುಲ್, ಕೊಹ್ಲಿ ಕಂಬ್ಯಾಕ್, ಹೀಗಿರಲಿದೆ ಭಾರತದ ಸಂಭಾವ್ಯ ತಂಡ

ಬೆಂಗಳೂರು: (Team India for Asia Cup 2022 ) ಆಗಸ್ಟ್ 27ರಿಂದ ದುಬೈನಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಟಿ20 ಟೂರ್ನಿಗೆ ಸೋಮವಾರ ಟೀಮ್ ಇಂಡಿಯಾ ಪ್ರಕಟವಾಗುವ ಸಾಧ್ಯತೆಯಿದೆ. ಸ್ಟಾರ್ ಆಟಗಾರರಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ (Rahul, Kohli comeback) ಏಷ್ಯಾ ಕಪ್ ಟೂರ್ನಿಯ ಮೂಲಕ ಟೀಮ್ ಇಂಡಿಯಾದೆ ಕಂಬ್ಯಾಕ್ ಮಾಡಲಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಫ್ಲೋರಿಡಾದಲ್ಲಿ ನಡೆಯಲಿರುವ 5ನೇ ಟಿ20 ಪಂದ್ಯದ ಮುಗಿದ ಬೆನ್ನಲ್ಲೇ ಏಷ್ಯಾ ಕಪ್ ಟೂರ್ನಿಗೆ ತಂಡ ಪ್ರಕಟವಾಗಲಿದೆ. ವಿಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ವಿಶ್ರಾಂತಿ ಪಡೆದಿದ್ದ ಅನುಭವೀ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ ಪಕ್ಕೆಲುಬಿನ ಗಾಯಕ್ಕೊಳಗಾಗಿರುವ ಬಲಗೈ ಮಧ್ಯಮ ವೇಗಿ ಹರ್ಷಲ್ ಪಟೇಲ್ ಏಷ್ಯಾ ಕಪ್’ಗೆ ಅಲಭ್ಯರಾಗಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಹರ್ಷಲ್ ಪಟೇಲ್ ಸ್ಥಾನ ಪಡೆದಿದ್ದರೂ, ಸರಣಿಯಲ್ಲಿ ಈವರೆಗೆ ಒಂದೇ ಒಂದು ಪಂದ್ಯವಾಡಿಲ್ಲ. ಪಕ್ಕೆಲುಬು ಗಾಯದ ಕಾರಣ 5ನೇ ಪಂದ್ಯಕ್ಕೂ ಅಲಭ್ಯರಾಗಿರುವ ಹರ್ಷಲ್ ಪಟೇಲ್, ಏಷ್ಯಾ ಕಪ್ ಟೂರ್ನಿಯಿಂದಲೂ ಹೊರಗುಳಿಯಲಿದ್ದಾರೆ.

ಏಷ್ಯಾ ಕಪ್ ಟಿ20 ಟೂರ್ನಿಗೆ (Team India for Asia Cup 2022) ಭಾರತದ ಸಂಭಾವ್ಯ ತಂಡ

  1. ರೋಹಿತ್ ಶರ್ಮಾ (ನಾಯಕ)
  2. ಕೆ.ಎಲ್ ರಾಹುಲ್
  3. ವಿರಾಟ್ ಕೊಹ್ಲಿ
  4. ಸೂರ್ಯಕುಮಾರ್ ಯಾದವ್
  5. ಹಾರ್ದಿಕ್ ಪಾಂಡ್ಯ
  6. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
  7. ರವೀಂದ್ರ ಜಡೇಜ
  8. ಯುಜ್ವೇಂದ್ರ ಚಹಲ್
  9. ಭುವನೇಶ್ವರ್ ಕುಮಾರ್
  10. ಜಸ್ಪ್ರೀತ್ ಬುಮ್ರಾ
  11. ಅರ್ಷದೀಪ್ ಸಿಂಗ್
  12. ರಿಷಭ್ ಪಂತ್ (ವಿಕೆಟ್ ಕೀಪರ್)
  13. ದೀಪಕ್ ಹೂಡ
  14. ಆರ್.ಅಶ್ವಿನ್
  15. ಆವೇಶ್ ಖಾನ್

ಏಷ್ಯಾ ಕಪ್ ಟಿ20 ಟೂರ್ನಿ ಆಗಸ್ಟ್ 27ರಂದು ಆರಂಭವಾಗಲಿದ್ದು, ಆಗಸ್ಟ್ 28ರಂದು ದುಬೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ

Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಇದನ್ನೂ ಓದಿ : Rahul Dravid Son : ದ್ರಾವಿಡ್ ಹೆಮ್ಮೆಯಿಂದ ಆಡಿದ್ದು BUCC ಕ್ಲಬ್‌ಗೆ ; ಮಗನಿಗೇಕೆ ವಲ್ಟರ್ಸ್ ಕ್ಲಬ್ ? ಪುತ್ರನ ಭವಿಷ್ಯಕ್ಕಾಗಿ ಈ ಅಚ್ಚರಿಯ ನಿರ್ಧಾರ

ಇದನ್ನೂ ಓದಿ : Pro Kabaddi League Auction ಪ್ರೊ ಕಬಡ್ಡಿ ಲೀಗ್: 2.26 ಕೋಟಿಗೆ ಸೇಲ್ ಆಗಿ ದಾಖಲೆ ಬರೆದ ಬೆಂಗಳೂರಿನ “ಮಾಜಿ ಬುಲ್” ಪವನ್ ಸೆಹ್ರಾವತ್

Team India for Asia Cup 2022 tomorrow Rahul, Kohli comeback this is the possible Indian team

Comments are closed.