Crime News : ಬಂಟ್ವಾಳದಲ್ಲಿ ಮನೆಯ ಮೇಲೆ ಭೂ ಕುಸಿತ ಮಹಿಳೆ ಸಾವು

ಬಂಟ್ವಾಳ : Crime News : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ವಾರದಿಂದ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದ್ದು, ಎಲ್ಲೆಡೆ ಪ್ರದೇಶಗಳು ಜಲಾವೃತಗೊಂಡಿದೆ. ಮಳೆರಾಯನ ಆರ್ಭಟದಿಂದ ಕೆಲವೆಡೆ ಬೆಟ್ಟಗುಡ್ಡಗಳು ಕುಸಿತಗೊಂಡಿದೆ. ಹೀಗಾಗಿ ಭೂಕುಸಿತದಿಂದ ಮಹಿಳೆಯೊಬ್ಬರ ಮನೆ ಮೇಲೆ ಮಣ್ಣು ಬಿದ್ದು ಪರಿಣಾಮವಾಗಿ ಸಾವನ್ನಪ್ಪಿದ್ದಾರೆ. ಮಣ್ಣಿನೊಳಗೆ ಸಿಲುಕಿದ ಮತ್ತುಳಿದವರನ್ನು ರಕ್ಷಣೆ ಮಾಡಲಾಗಿದೆ.

ಈ ಆಘಾತಕಾರಿ ಘಟನೆಯು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದವಾರ ಎಂಬಲ್ಲಿ ಭೂಕುಸಿತದಿಂದ ಮನೆಯೊಳಗೆ ಮಣ್ಣು ಬಿದ್ದ ಪರಿಣಾವಾಗಿ ಮನೆ ಸಂಪೂರ್ಣವಾಗಿ ಹಾನಿಯಾಗಿದ್ದು, ಮನೆಯೊಳಗೆ ಸಿಲುಕಿಕೊಂಡ ಝರೀನಾ (49 ವರ್ಷ) ಎನ್ನುವರನ್ನು ರಕ್ಷಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಬಂಟ್ವಾಳ ತಹಸೀಲ್ದಾರ್‌ ಎಸ್‌.ಬಿ.ಕೂಡಲಗಿ ತಿಳಿಸಿದ್ದಾರೆ.

ಇದನ್ನೂ ಓದಿ : Vijayapur earthquake : ವಿಜಯಪುರದಲ್ಲಿ ಕಂಪಿಸಿದ ಭೂಮಿ, ಆತಂಕದಲ್ಲಿ ಜನರು

ಇದನ್ನೂ ಓದಿ : Tirupati Tirumala Temple : ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅನಾಹುತ : ಮಹಾದ್ವಾರದಲ್ಲೇ ಉರುಳಿಬಿತ್ತು ತಿಮ್ಮಪ್ಪನ ಕಾಣಿಕೆ ಹುಂಡಿ

ಮುಂಜಾನೆ 6 ಗಂಟೆ ಹೊತ್ತಿಗೆ ದಕ್ಷಿಣಕನ್ನಡ ಜಿಲ್ಲೆಯ ಸಜುಪಮುನ್ನೂರು ಗ್ರಾಮದ ನಂದಾವರ ಗುಂಪುಮನೆಯಲ್ಲಿ ವಾಸ ಮಾಡಿಕೊಂಡಿರುವ ಮಹಮ್ಮದ್‌ ಎನ್ನುವರ ಮನೆಗೆ ಗುಡ್ಡ ಕುಸಿದು ಬಿದ್ದಿದೆ. ಆಗ ಮಣ್ಣಿನಡಿ ಮಹಮ್ಮದ್‌ ಪತ್ನಿ ಝರೀನಾ ಮತ್ತು ಮಗಳು ಸಫಾ ಸಿಲುಕಿಕೊಂಡಿದ್ದಾರೆ. ಕೂಡಲೇ ಅಕ್ಕಪಕ್ಕದ ಮನೆಯವರು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಎನ್‌.ಡಿ.ಆರ್‌.ಎಫ್‌, ಪೊಲೀಸ್‌ ಅಧಿಖಾರಿಗಳು, ಸಿ.ಆರ್‌.ಎಫ್‌, ಅಗ್ನಿಶಾಮಕ ತಂಡ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಇದರಲ್ಲಿ ಮಹಮ್ಮದ್‌ ಹಾಗೂ ಅವರ ಮಗಳು ಸಫಾ ಮಾತ್ರ ಬದುಕಿ ಉಳಿದಿದ್ದಾರೆ. ಆದರೆ ಅವರ ಪತ್ನಿ ಮಣ್ಣಿನಡಿ ಸಿಲುಕಿಕೊಂದಗಾಲೇ ಹಸುನೀಗಿದ್ದಾರೆ ಎಂದು ತಿಳಿಸಿದ್ದಾರೆ.

Crime News : Landslide on house in Bantwala, woman dies

Comments are closed.