2022 Hero Xtreme 160R : ಅಪ್ಡೆಟ್‌ ಆಗಿ ಬೈಕ್‌ ಪ್ರಿಯರ ಎದುರಿಗೆ ಬಂದ ಹೀರೋ ಎಕ್ಸ್‌ಟ್ರೀಮ್‌ 160 R. ‌

ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕಾ ಕಂಪನಿ ಹೀರೋ ಮೋಟೋಕಾರ್ಪ್‌ ಅನೇಕ ಬೈಕ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಹೀರೋ ತನ್ನ 2022 Hero Xtreme ಅನ್ನು ಮೂರು ವಿಭಿನ್ನ ರೂಪಗಳಲ್ಲಿ ಬಿಡುಗಡೆ ಮಾಡಿದೆ. ಮೊದಲನೆಯದಾಗಿ Xtreme 160R ಸಿಂಗಲ್ ಡಿಸ್ಕ್ ರೂಪಾಂತರದ ಬೆಲೆ 1,17,148 ರೂ. ಗಳಾದರೆ, ಎಕ್ಸ್‌ಟ್ರೀಮ್ 160ಆರ್ ಡ್ಯುಯಲ್ ಡಿಸ್ಕ್ ಬೆಲೆ 1,20,498 ರೂ. ಆಗಿದೆ. ಮೂರನೆಯದಾಗಿ ಟಾಪ್-ಸ್ಪೆಕ್ ಎಕ್ಸ್‌ಟ್ರೀಮ್ 160ಆರ್ ಸ್ಟೆಲ್ತ್ ಬೆಲೆ 1,22,338 ರೂ. ಆಗಿದೆ. (ಇಲ್ಲಿ ಹೇಳಿರುವ ಬೆಲೆಗಳು ಎಕ್ಸ್ ಶೋ ರೂಂ ಬೆಲೆ ಆಗಿದೆ).

ಪರಿಷ್ಕೃತ ಸೀಟ್ ವಿನ್ಯಾಸ ಮತ್ತು ಹೊಸ ಸ್ಪ್ಲಿಟ್ ಗ್ರಾಬ್ ರೈಲ್‌ನೊಂದಿಗೆ 2022 ಕ್ಕೆ ಹೀರೋ ಎಕ್ಸ್‌ಟ್ರೀಮ್ 160ಆರ್ ಅನ್ನು ನವೀಕರಿಸಿದೆ. ಮತ್ತೊಂದು ಬದಲಾವಣೆಯು ಡ್ಯಾಶ್‌ಬೋರ್ಡ್‌ನಲ್ಲಿ ಗೇರ್ ಸ್ಥಾನವು ಸೂಚಕದ ರೂಪದಲ್ಲಿಯೇ ಅಳವಡಿಸಲಾಗಿದೆ. ಊಳಿದ ವೈಶಿಷ್ಟ್ಯಗಳನ್ನು ಹಾಗೇ ಮುಂದುವರಿಸಿಕೊಂಡು ಬಂದಿದೆ.

2022 Hero Xtreme 160R ವೈಶಿಷ್ಟ್ಯತೆಗಳು :

Hero Xtreme 160R 163cc ಸಿಂಗಲ್ ಸಿಲಿಂಡರ್, ಇಂಧನ ಇಂಜೆಕ್ಟೆಡ್, ಏರ್ ಕೂಲ್ಡ್ ಎಂಜಿನ್‌ನಿಂದ ಪವರ್‌ ಪಡೆದುಕೊಳ್ಳುತ್ತದೆ. Hero Xtreme 160R ಎಂಜಿನ್ 8,500rpm ನಲ್ಲಿ 15bhp ಮತ್ತು 6,500rpm ನಲ್ಲಿ 14Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಚೈನ್ ಡ್ರೈವ್ ಮತ್ತು 1-ಅಪ್, 4-ಡೌನ್ ಶಿಫ್ಟ್ ಮಾದರಿಯೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ ಹಿಂದಿನ ಚಕ್ರಕ್ಕೆ ಶಕ್ತಿಯನ್ನು ಕಳುಹಿಸಲಾಗುತ್ತದೆ.

ಇದರ ಬ್ರೆಕಿಂಗ್‌ ಸಿಸ್ಟಮ್‌ ಹೀಗಿದೆ : ಮುಂಭಾಗದಲ್ಲಿ 276 mmನ ಒಂದೇ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಅಥವಾ ಎರಡೂ ತುದಿಗಳಲ್ಲಿ ಡಿಸ್ಕ್ ಬ್ರೇಕ್‌ಗಳಿಂದ ಅಂದರೆ ಹಿಂಭಾಗದಲ್ಲಿ 220 ಮೀ ಡಿಸ್ಕ್ ಬ್ರೆಕ್‌ಗಳಿಂದ ನಿರ್ವಹಿಸಲ್ಪಡುತ್ತದೆ. ಬ್ರೇಕ್‌ಗಳು ಸಿಂಗಲ್ ಚಾನೆಲ್ ಆಟೊಮೆಟಿಕ್‌ ಬ್ರೆಕ್‌ ಸಿಸ್ಟಮ್‌ನಿಂದ ಮಾಡಲ್ಪಟ್ಟಿದೆ.

ಹೊಸದಾಗಿ ನವೀಕರಣಗೊಂಡ Hero Xtreme 160R ನ ಉದ್ದ 2,029mm, ಅಗಲ 793mm ಮತ್ತು 1,052mm ಎತ್ತರವಾಗಿದೆ. Hero Xtreme 160R ನ ವ್ಹೀಲ್‌ಬೇಸ್ 1,327mm ಉದ್ದವಿದ್ದರೆ ಗ್ರೌಂಡ್ ಕ್ಲಿಯರೆನ್ಸ್ 167mm ಆಗಿದೆ. ಹೀರೋ ಎಕ್ಸ್‌ಟ್ರೀಮ್ 160ಆರ್ ತೂಕವು 138.5 ಕಿಲೋಗ್ರಾಂ. ಆದರೆ ಇಂಧನ ಟ್ಯಾಂಕ್ 12 ಲೀಟರ್ ಪೆಟ್ರೋಲ್ ಮತ್ತು 1.9-ಲೀಟರ್ ಮೀಸಲು ಇರಿಸಬಹುದು.

Hero Xtreme 160R ವಿನ್ಯಾಸ: Hero Xtreme 160R LED ಟರ್ನ್ ಸಿಗ್ನಲ್‌ಗಳ ಜೊತೆಗೆ ಡ್ರಾಯಿಡ್ ಫುಲ್-LED ಹೆಡ್‌ಲ್ಯಾಂಪ್ ಅನ್ನೇ ಇದೂ ಸಹ ಹೊಂದಿದೆ. ರಹಸ್ಯವಾದ H-ಆಕಾರದ LED ಟೈಲ್‌ಲೈಟ್, ಸೈಡ್-ಸ್ಲಂಗ್ ಎಕ್ಸಾಸ್ಟ್ ಮುಂತಾದವುಗಳನ್ನು ಒಳಗೊಂಡಿವೆ. 5-ವೇ ಹೊಂದಾಣಿಕೆಯ ಬ್ರೈಟ್‌ನೆಸ್‌ ಕಂಟ್ರೋಲ್‌, ಇನ್ವರ್ಟೆಡ್‌ LCD ಕನ್ಸೋಲ್, ಹಜಾರ್ಡ್ಸ್‌ ದೀಪಗಳು ಮತ್ತು ಫೋನ್‌ಗಳಿಗಾಗಿ USB ಚಾರ್ಜರ್ ಅನ್ನು ಒಳಗೊಂಡಿವೆ. Hero Xtreme 160R ಅನ್ನು 4 ಬಣ್ಣಗಳ ಬಣ್ಣಗಳಲ್ಲಿ ಪರಿಚಯಿಸಲಾಗಿದೆ. – ಪರ್ಲ್ ಸಿಲ್ವರ್ ವೈಟ್, ವೈಬ್ರೆಂಟ್ ಬ್ಲೂ ಮತ್ತು ಎಕ್ಸ್‌ಟ್ರೀಮ್ ಸ್ಟೆಲ್ತ್ (ಸ್ಟೆಲ್ತ್ ಆವೃತ್ತಿಗೆ ಮಾತ್ರ).

ಇದನ್ನೂ ಓದಿ : Grand Vitara : ಭಾರತದ ಹೊಸದಾದ ಕೊಂಪ್ಯಾಕ್ಟ್‌ SUV! 6 ಏರ್‌ಬ್ಯಾಗ್‌ ನಿಂದ ಹೆಚ್ಚಿನ ಸುರಕ್ಷತೆ ನೀಡುವ ಗ್ರಾಂಡ್‌ ವಿಟಾರಾ!!

ಇದನ್ನೂ ಓದಿ : Citroen C3 : 5.70 ಲಕ್ಷಕ್ಕೆ ಸಬ್‌–ಕಾಂಪ್ಯಾಕ್ಟ್‌ SUV ಬಿಡುಗಡೆ ಮಾಡಿದ ಸಿಟ್ರೊಯ್ನ್‌! ಸಿಟ್ರೊಯ್ನ್‌ C3 ಯ ಹಲವಾರು ವೈಶಿಷ್ಟ್ಯಗಳು ಹೀಗಿವೆ…

(2022 Hero Xtreme 160R Bike launched know specifications and features)

Comments are closed.