2023 BMW S1000RR ಭಾರತದಲ್ಲಿ ಬಿಡುಗಡೆ; ಈ ಸ್ಪೋರ್ಟ್ಸ್‌ ಬೈಕ್‌ನ ಬೆಲೆ ಎಷ್ಟು ಗೊತ್ತಾ…

BMW ಮೋಟಾರ್ಡ್‌ ಇಂಡಿಯಾ ಹೊಸ 2023 BMW S1000RR ಸ್ಪೋರ್ಟ್ಸ್‌ ಬೈಕ್‌ ಅನ್ನು ಬಿಡುಗಡೆಮಾಡಿದೆ. ಇದರ ಬೆಲೆ 20.25 ಲಕ್ಷ (ಎಕ್ಸ್‌ ಶೋ ರೂಂ) ದಿಂದ ಪ್ರಾರಂಭವಾಗಲಿದೆ. ಇದು ಮೂರು ಆವೃತ್ತಿಗಳಲ್ಲಿ ಸ್ಟಾಂಡರ್ಡ್‌, ಸ್ಪೋರ್ಟ್‌ ಮತ್ತು M ಗಳಲ್ಲಿ ದೊರೆಯಲಿದೆ. ಇದರ ಬುಕ್ಕಿಂಗ್‌ ಪ್ರಾರಂಭವಾಗಿದ್ದು ಗ್ರಾಹಕರು ಆನ್‌ಲೈನ್‌ ಮತ್ತು ಕಂಪನಿ ಡೀಲರ್‌ಶಿಪ್‌ಗಳ ಮೂಲಕ ಬುಕಿಂಗ್‌ ಮಾಡಬಹುದಾಗಿದೆ. ಈ ಬೈಕ್‌ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿ ಒಂದು ತಿಂಗಳಿನ ನಂತರ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

BMW ಹೊಸ 2023 S1000RR ಬೈಕ್‌ನಲ್ಲಿ ಹೊಸ ನವೀಕರಣಗಳನ್ನು ಮಾಡಲಾಗಿದೆ. ಏರೋ ಸ್ಟ್ಯಾಂಡರ್ಡ್ ಫಿಟ್‌ಮೆಂಟ್‌ನ ಭಾಗವಾಗಿ ವಿಂಗ್‌ಲೆಟ್‌ಗಳನ್ನು ಬಳಸಿರುವುದರಿಂದ ಇದರ ಅಂದವನ್ನು ಹೆಚ್ಚಿಸಿದೆ. ಇದರಲ್ಲಿ 10 ಕೆಜಿ ಡೌನ್‌ಫೋರ್ಸ್‌ ಅನ್ನು ಸೇರಿಸುವುದರ ಮೂಲಕ ಏರೋಡೈನಮಿಕ್‌ನ ಕ್ಷಮತೆಯನ್ನು ಹೆಚ್ಚಿಸದೆ. ಇದರಲ್ಲಿ ಸುಧಾರಿತ ವಿಂಡ್ ಡಿಫ್ಲೆಕ್ಷನ್‌ನೊಂದಿಗೆ ಉದ್ದವಾದ ವಿಂಡ್‌ಸ್ಕ್ರೀನ್ ಅನ್ನು ಸಹ ಕಾಣಬಹುದಾಗಿದೆ.

999cc ಬೈಕ್‌, ನಾಲ್ಕು ಇನ್‌ಲೈನ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. ಇದು 206bhp ಅನ್ನು ಉತ್ಪಾದಿಸಲಿದೆ. ಈ ಮೋಟಾರ್‌ಸೈಕಲ್‌ ದೊಡ್ಡ ಇನ್‌ಟೇಕ್‌ ಪೋರ್ಟ್‌ಗಳನ್ನು ಬಳಸಿಕೊಂಡು ಹೆಚ್ಚಿನ ಶಕ್ತಿಯನ್ನು ಹೊರಹಾಕುತ್ತದೆ. ಈ ಮೋಟಾರ್‌ಸೈಕಲ್‌ನಲ್ಲಿರುವ ಪ್ರಮುಖ ವೈಶಿಷ್ಟ್ಯಗಳೆಂದರೆ ಸ್ಲೈಡ್‌ ಕಂಟ್ರೋಲ್‌ಗಳು, ರೇನ್‌, ರೋಡ್‌, ಡೈನಾಮಿಕ್‌ ಮತ್ತು ರೇಸ್‌ ಸೇರಿದಂತೆ ಒಟ್ಟು ನಾಲ್ಕು ರೈಡಿಂಗ್‌ ಮೋಡ್‌ಗಳು, ಟ್ರಾಕ್ಷನ್‌ ಕಂಟ್ರೋಲ್‌, ಕ್ವಿಕ್‌ ಶಿಫ್ಟರ್‌ ಮತ್ತು ಪಿಟ್‌ಲೇನ್‌ ಲಿಮಿಟರ್‌ಗಳು. ಇದಲ್ಲದೇ ಈ ಬೈಕು ಹಿಲ್‌ ಹೋಲ್ಡ್‌ ಅಸಿಸ್ಟ್‌ ಮತ್ತು USB ಚಾರ್ಜಿಂಗ್‌ ಪೋರ್ಟ್‌ಗಳನ್ನು ಹೊಂದಿದೆ. ಬೈಕು ಸ್ಟಾಂಡರ್ಡ್‌, ಸ್ಪೋರ್ಟ್‌ ಮತ್ತು ಎಂ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ : Hyundai December Discounts : ಡಿಸೆಂಬರ್‌ ತಿಂಗಳಿನಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡಿದ ಹುಂಡೈ

ಇದನ್ನೂ ಓದಿ : Ola Electric Scooter Offer | ಮನೆಗೆ ತನ್ನಿ ಈ ಎಲೆಕ್ಟ್ರಿಕ್ ಸ್ಕೂಟರ್ ಪಡೆಯಿರಿ 10000 ಡಿಸ್ಕೌಂಟ್ : ಏನಿದು ಸ್ಕ್ಕೀಮ್ ?

ಇದನ್ನೂ ಓದಿ : Volkswagen Tiguan : ಫೋಕ್ಸ್‌ವ್ಯಾಗನ್‌ ಎಕ್ಸ್‌ಕ್ಲೂಸಿವ್‌ ಎಡಿಷನ್‌ ಟಿಗಾನ್‌ ಅನಾವರಣ

(2023 BMW S1000RR launched in India. Know the price and specifications)

Comments are closed.