Doddapatre Gojju Recipe:ಮನೆಯ ಹಿತ್ತಲಲ್ಲಿ ಬೆಳೆಯುವ ದೊಡ್ಡ ಪತ್ರೆಯ ಗೊಜ್ಜು ಮಾಡುವುದು ಹೇಗೆ?

(Doddapatre Gojju Recipe)ದೊಡ್ಡ ಪತ್ರೆಯಲ್ಲಿ ವಿಟಮಿನ್‌ ಸಿ, ಫೈಬರ್‌, ಕ್ಯಾಲ್ಸಿಯಂ ಅಂಶ ಹೇರಳವಾಗಿ ಇರುವುದರಿಂದ ಇದನ್ನು ಸೇವನೆ ಮಾಡಿದರೆ ದೇಹದಲ್ಲಿ ರೋಗ ನೀರೋಧಕ ಶಕ್ತಿ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ದೊಡ್ಡಪತ್ರೆ ಎಲ್ಲರ ಮನೆಯ ಹಿತ್ತಿಲಲ್ಲಿ ಮತ್ತು ಪಾಟ್‌ ನಲ್ಲಿ ಕಂಡುಬರುತ್ತದೆ. ಈ ಎಲೆಯನ್ನು ನೀರಲ್ಲಿ ಚೆನ್ನಾಗಿ ತೊಳೆದು ಪ್ರತಿದಿನ ತಿನ್ನುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ದೊಡ್ಡ ಪತ್ರೆಯ ಬರಿ ಎಲೆಯನ್ನು ತಿನ್ನಲು ಇಷ್ಟವಾಗದವರು ಇದರಿಂದ ಗೊಜ್ಜು ಮಾಡಿ ತಿಂದರೆ ರುಚಿಯ ಜೊತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ.

(Doddapatre Gojju Recipe)ಬೇಕಾಗುವ ಸಾಮಾಗ್ರಿಗಳು:

  • ದೊಡ್ಡ ಪತ್ರೆ
  • ಕೊಬ್ಬರಿ ಎಣ್ಣೆ
  • ಕಡ್ಲೆ ಬೆಳೆ
  • ಉದ್ದಿನ ಬೆಳೆ
  • ಜೀರಿಗೆ
  • ಮೆಂತ್ಯೆ
  • ಒಣಮೆಣಸು
  • ಎಳ್ಳು
  • ಬೆಲ್ಲ
  • ಹುಣಸೆ ಹಣ್ಣು
  • ಅರಿಶಿಣ
  • ಸಾಸಿವೆ
  • ಇಂಗು
  • ಕರಿಬೇವು
  • ಉಪ್ಪು
  • ಕಾಯಿತುರಿ

ಮಾಡುವ ವಿಧಾನ
ಬಾಣಲೆಯಲ್ಲಿ ಅರ್ಧ ಚಮಚ ಕೊಬ್ಬರಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಬೇಕು ಎಣ್ಣೆ ಬಿಸಿ ಆಗುತ್ತಿದ್ದ ಹಾಗೆ ಒಂದು ಚಮಚ ಕಡ್ಲೆ ಬೆಳೆ, ಒಂದು ಚಮಚ ಉದ್ದಿನ ಬೆಳೆ ಹಾಕಿ ಸೌಟನ್ನು ಆಡಿಸುತ್ತಾ ಅರ್ಧ ಚಮಚ ಮೆಂತ್ಯ , ಅರ್ಧ ಚಮಚ ಜೀರಿಗೆ, ಐದು ಒಣ ಮೆಣಸು, ಎರಡು ಚಮಚ ಎಳ್ಳು, ಅರಿಶಿಣ ಹಾಕಿ ಸೌಟು ಆಡಿಸಬೇಕು ಬೆಳೆ ಕಂದು ಬಣ್ಣಕ್ಕೆ ಬರುತ್ತಿದ್ದ ಹಾಗೆ ಇಪ್ಪತೈದು ದೊಡ್ಡ ಪತ್ರೆ ಹಾಕಿ ಹುರಿದುಕೊಳ್ಳಬೇಕು. ನಂತರ ಕಾಲು ಕಪ್‌ ಕಾಯಿ ತುರಿ, ಎರಡು ಚಮಚ ಬೆಲ್ಲ ಹಾಕಿ ಸೌಟನ್ನು ಆಡಿಸಬೇಕು. ಮಿಕ್ಸಿ ಜಾರಿಯಲ್ಲಿ ಹುರಿದುಕೊಂಡ ಪದಾರ್ಥವನ್ನು ಹಾಕಿಕೊಂಡು ನೆನಸಿಟ್ಟ ಹುಣಸೆ ಹಣ್ಣು ಮತ್ತು ನೀರು ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಪದಾರ್ಥವನ್ನು ಬಾಣಲೆಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಬೇಕು ನಂತರ ಉಪ್ಪು ಸೇರಿಸಿ ಸೌಟನ್ನು ಆಡಿಸಿ ಕುದಿ ಬರುವಾಗ ನಾಲ್ಕು ಕರಿಬೇವು ಹಾಕಿ ಗ್ಯಾಸ ಆಫ್‌ ಮಾಡಿಕೊಳ್ಳಬೇಕು. ಅನಂತರ ಸೌಟ್‌ ನಲ್ಲಿ ಎಣ್ಣೆ ಹಾಕಿಕೊಂಡು ಇಂಗು, ಸಾಸಿವೆ,ಕರಿಬೇವು ಹಾಕಿ ಒಗ್ಗರಣೆ ಮಾಡಿ ಗೊಜ್ಜಿಗೆ ಹಾಕಿದರೆ ರುಚಿಯಾಗಿ ದೊಸೆ, ಚಪಾತಿ, ಇಡ್ಲಿ ಜೊತೆ ಸವಿಯಲು ದೊಡ್ಡ್‌ ಪತ್ರೆ ಗೊಜ್ಜು ರೆಡಿ.

ಇದನ್ನೂ ಓದಿ:Mango Candy Recipe : ಹುಳಿ ಮಾವಿನ ಕಾಯಿಯ ಮ್ಯಾಂಗೋ ಕ್ಯಾಂಡಿ ಮನೆಯಲ್ಲೇ ತಯಾರಿಸಿಕೊಳ್ಳಿ

ಇದನ್ನೂ ಓದಿ:Knee Pain Tips:ವಿಪರೀತ ಮಂಡಿ ನೋವಿದ್ದರೆ ಈ ಪಾನಿಯಾ ಟ್ರೈ ಮಾಡಿ

ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಮೂರು ದೊಡ್ಡ ಪತ್ರೆ ಎಲೆಯನ್ನು ಹಾಕಿ ಕಾಯಿಸಿ ಈ ನೀರನ್ನು ಲೊಟಕ್ಕೆ ಸೊಸಿಕೊಳ್ಳಬೇಕು . ದಿನದಲ್ಲಿ ಎರಡು ಮೂರು ಬಾರಿ ಈ ನೀರನ್ನ ಕುಡಿಯುವುದರಿಂದ ಶೀತ , ನೆಗಡಿ ಕಡಿಮೆ ಆಗುತ್ತದೆ. ಮತ್ತು ಅಲರ್ಜಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಮಕ್ಕಳಿಗೆ ಶೀತ ಆದಾಗ ಎರಡು ದೊಡ್ಡ ಪತ್ರೆಯ ಎಲೆಯನ್ನು ತೆಗೆದುಕೊಂಡು ಕುಟ್ಟಣಿಗೆಯಲ್ಲಿ ಜಜ್ಜಿಕೊಂಡು ಸಣ್ಣ ಬೌಲ್‌ ನಲ್ಲಿ ರಸವನ್ನು ಹಿಂಡಿಕೊಳ್ಳಬೇಕು. ಅದಕ್ಕೆ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ಕೊಟ್ಟರೆ ಕಫ ಕಡಿಮೆ ಆಗುತ್ತದೆ. ದೊಡ್ಡವರು ಕೂಡ ಇದನ್ನು ಸೇವನೆ ಮಾಡಬಹುದು ಇದಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿಕೊಂಡು ಸೇವನೆ ಮಾಡಬೇಕು.

Doddapatre Gojju Recipe How to make doddapatre gojju that grow in the backyard

Comments are closed.