Airbags in Car : ಬಜೆಟ್‌ ಬೆಲೆಯ ಸುರಕ್ಷಿತ ಕಾರುಗಳು; ಇವುಗಳಲ್ಲಿದೆ ಜೀವರಕ್ಷಕ 6 ಏರ್‌ಬ್ಯಾಗ್‌ಗಳು

ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ (Automobile Market) ಅನೇಕ ಮಾದರಿಯ ಹಾಗೂ ಕಂಪನಿಯ ಕಾರು (Car) ಗಳನ್ನು ಕಾಣಬಹುದು. ಕೆಲವು ಬಜೆಟ್‌ ಬೆಲೆಯ ಕಾರುಗಳಾದರೆ ಇನ್ನು ಕೆಲವು ದುಬಾರಿಯವುಗಳು. ತಮ್ಮ ಅನುಕೂಲಕ್ಕೆ ತಕ್ಕಂತೆ ಕಾರುಗಳನ್ನು ಖರೀದಿಸುತ್ತಾರೆ. ಖರೀದಿಗೂ ಮುಂಚೆ ಬಹಷ್ಟು ವಿಷಯಗಳನ್ನು ಚರ್ಚಿಸುತ್ತಾರೆ. ಬೆಲೆ, ವೈಶಿಷ್ಟ್ಯಗಳನ್ನು ಪರೀಕ್ಷಿಸುತ್ತಾರೆ. ಜೊತೆಗೆ ಸುರಕ್ಷತೆಗೂ (Airbags in Car) ಆದ್ಯತೆ ನೀಡುತ್ತಾರೆ. ಹಾಗಾಗಿ ಕಾರು ತಯಾರಕರು ಸಹ ಹೆಚ್ಚಿನ ಸುರಕ್ಷತೆಯನ್ನು ಅಳವಡಿಸುತ್ತಿದ್ದಾರೆ. ಕಾರಿನಲ್ಲಿಏರ್‌ಬ್ಯಾಗ್‌ಗಳು, ಹಿಲ್‌–ಹೋಲ್ಡ್‌ ಅಸಿಸ್ಟ, ABS, ESC, ಪಾರ್ಕಿಂಗ್‌ ಸೆನ್ಸಾರ್‌ ಮುಂತಾದವುಗಳನ್ನು ನೀಡುತ್ತಿದ್ದಾರೆ. ಕಾರಿನಲ್ಲಿ ಏರ್‌ಬ್ಯಾಗ್‌ಗಳು ಕಡ್ಡಾಯವಾಗಿದೆ. ಅವು ಅಪಘಾತದ ಸಮಯದಲ್ಲಿ ಜೀವ ರಕ್ಷಿಸುತ್ತವೆ. ಕೆಲವು ಕಾರುಗಳಲ್ಲಿ 2, 4, 6 ಏರ್‌ಬ್ಯಾಗ್‌ಗಳನ್ನು ಕಾಣಬಹುದು. ಅವು ಹೆಚ್ಚು ಸುರಕ್ಷತೆಯನ್ನು ನೀಡುತ್ತವೆ.

6 ಏರ್‌ಬ್ಯಾಗ್‌ ಹೊಂದಿರುವ ಕಾರುಗಳು :

ಚಿತ್ರ ಕೃಪೆ : ಹುಂಡೈ

6 ಏರ್‌ಬ್ಯಾಗ್‌ಗಳೊಂದಿಗೆ ಬರುವ ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಹ್ಯುಂಡೈನ ಹ್ಯಾಚ್‌ಬ್ಯಾಕ್ ಕಾರು i20 ಸೇರಿದೆ. ಈ ಹುಂಡೈನ ಈ ಕಾರನ್ನು 8.23 ​​ಲಕ್ಷದಿಂದ 13.49 ಲಕ್ಷದವರೆಗೆ ಖರೀದಿಸಬಹುದು. ಈ ಕಾರು ಮ್ಯಾಗ್ನಾ, ಸ್ಪೋರ್ಟ್ಜ್, ಆಸ್ತಾ ಮತ್ತು ಆಸ್ತಾ (O) ನಂತಹ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ.

ಚಿತ್ರ ಕೃಪೆ : ಮಾರುತಿ ಸುಜುಕಿ

ಕಾರು ತಯಾರಿಕೆಯಲ್ಲಿ ಮಂಚೂಣಿಯಲ್ಲಿರುವ ಮಾರುತಿ ಸುಜುಕಿಯ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಕಾರು ಬ್ರೆಜ್ಜಾ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ ಕಾರಾಗಿದೆ. ಕಂಪನಿಯು ಈ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಹೋಲ್ಡ್ ಅಸಿಸ್ಟ್, EBD ಜೊತೆಗೆ ABS ಮತ್ತು 6 ಏರ್‌ಬ್ಯಾಗ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಸಂವೇದಕಗಳನ್ನು ಸಹ ನೀಡುತ್ತದೆ. ಈ ಕಾರನ್ನು 8.19 ಲಕ್ಷದಿಂದ 14.04 ಲಕ್ಷದವರೆಗೆ (ಎಕ್ಸ್‌ ಶೋ ರೂಂ ಬೆಲೆ) ಖರೀದಿಸಬಹುದು.

ಚಿತ್ರ ಕೃಪೆ : ಮಾರುತಿ ಸುಜುಕಿ

ಮಾರುತಿಯ ಎರಡನೇ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರುತಿ ಬಲೆನೊ ಕೂಡಾ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ ಕಾರು. ಇದನ್ನು 7.53 ಲಕ್ಷದಿಂದ 11.21 ಲಕ್ಷದವರೆಗೆ (ಎಕ್ಸ್‌ ಶೋ ರೂಂ ಬೆಲೆ) ಖರೀದಿಸಬಹುದು. ಈ ಕಾರು ಸಿಗ್ಮಾ, ಡೆಲ್ಟಾ, ಡೆಲ್ಟಾ CNG, Zeta, Zeta CNG ಮತ್ತು ಆಲ್ಫಾದಂತಹ 6 ರೂಪಾಂತರಗಳಲ್ಲಿ ಲಭ್ಯವಿದೆ. ಮಾರುತಿ ಈ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳ ಸೌಲಭ್ಯವನ್ನು ನೀಡುತ್ತದೆ.

ಚಿತ್ರ ಕೃಪೆ : ಹುಂಡೈ

ಹುಂಡೈನ ಇನ್ನೊಂದು ಸೆಡಾನ್ ಮಾದರಿಯ ಕಾರು ಹೆಚ್ಚು ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಹುಂಡೈನ ಈ ಕಾರು 7.24 ಲಕ್ಷದಿಂದ 10.14 ಲಕ್ಷದವರೆಗೆ (ಎಕ್ಸ್‌ ಶೋ ರೂಂ ಬೆಲೆ) ಲಭ್ಯವಿರುತ್ತದೆ. ಇದನ್ನು E, S, SX ಮತ್ತು SX (O) ನಾಲ್ಕು ರೂಪಾಂತರಗಳಲ್ಲಿ ಖರೀದಿಸಬಹುದು. ಇದು EMC, VSM, ಹಿಲ್-ಹೋಲ್ಡ್ ಅಸಿಸ್ಟ್ ಸಿಸ್ಟಮ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ರಿಯರ್ ಡಿಫಾಗರ್ ಜೊತೆಗೆ ಕರ್ಟನ್ ಏರ್‌ಬ್ಯಾಗ್‌ಗಳನ್ನು ಸುರಕ್ಷತೆ ವೈಶಿಷ್ಟ್ಯಗಳಾಗಿ ಪಡೆದುಕೊಂಡಿದೆ.

ಚಿತ್ರ ಕೃಪೆ : ಮಹೀಂದ್ರಾ

ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ದ XUV300 ಅನ್ನು ಸಹ ಒಂದಾಗಿದೆ. ಈ ಕಾರನ್ನು 8.41 ಲಕ್ಷದಿಂದ 14.07 ಲಕ್ಷದವರೆಗೆ (ಎಕ್ಸ್‌ ಶೋ ರೂಂ ಬೆಲೆ) ಖರೀದಿಸಬಹುದಾಗಿದೆ. ಮಹೀಂದ್ರಾ ಈ ಕಾರನ್ನು W4, W6, W8 ಮತ್ತು W8(O) ನಂತಹ 4 ರೂಪಾಂತರಗಳಲ್ಲಿ ಮಾರಾಟ ಮಾಡುತ್ತದೆ. ಈ ಕಾರಿನಲ್ಲಿ, ಕಂಪನಿಯು ಏಳು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು (4WD), ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ರೈನ್-ಸೆನ್ಸಿಂಗ್ ವೈಪರ್‌ಗಳು, ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳನ್ನು ನೀಡುತ್ತದೆ.

ಇದನ್ನೂ ಓದಿ : Best Ground Clearance Cars : ಈ ಬಜೆಟ್‌ ಕಾರುಗಳನ್ನೊಮ್ಮೆ ನೋಡಿ; ಇವು ಉತ್ತಮ ಗ್ರೌಂಡ್ ಕ್ಲಿಯರೆನ್ಸ್‌ ಕಾರುಗಳು

ಇದನ್ನೂ ಓದಿ : Bike Under 1Lakh : ಒಂದು ಲಕ್ಷದೊಳಗೆ ಖರೀದಿಸಬಹುದಾದ ಆಕರ್ಷಕ ಬೈಕ್‌ಗಳು

(Airbags in Car. These cars come with multiple safety features)

Comments are closed.