Border-Gavaskar Test series 2023 : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತವೇ ಕಿಂಗ್, ಹೇಗಿದೆ ಗೊತ್ತಾ ಕಾಂಗರೂ ವಿರುದ್ಧ ಟೀಮ್ ಇಂಡಿಯಾ ದಾಖಲೆ?

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ (Border-Gavaskar Test series 2023) ಆರಂಭಕ್ಕೆ ಇನ್ನು48 ಗಂಟೆಗಳಷ್ಟೇ ಬಾಕಿ. ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾಗಲಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ ಕನಿಷ್ಠ 2-0 ಅಂತರದಲ್ಲಿ ಗೆದ್ದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಲಿದೆ.ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಎಂಬ ಹೆಸರು ಬಂದ ನಂತರ ನಡೆದ 15 ಸರಣಿಗಳಲ್ಲಿ ಭಾರತ 9 ಬಾರಿ ಸರಣಿ ಗೆದ್ದಿದೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತದ ಸಾಧನೆ :
1996-97: ಭಾರತಕ್ಕೆ 1-0 ಅಂತರದಲ್ಲಿ ಸರಣಿ ಜಯ
1997-98: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ
1999-00: ಭಾರತಕ್ಕೆ 0-3 ಅಂತರದಲ್ಲಿ ಸರಣಿ ಸೋಲು
2000-01: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ
2003-04: 1-1 ಅಂತರದಲ್ಲಿ ಸರಣಿ ಸಮಬಲ
2004-05: ಭಾರತಕ್ಕೆ 1-2 ಅಂತರದಲ್ಲಿ ಸರಣಿ ಸೋಲು
2007-08: ಭಾರತಕ್ಕೆ 1-2 ಅಂತರದಲ್ಲಿ ಸರಣಿ ಸೋಲು
2008-09: ಭಾರತಕ್ಕೆ 2-0 ಅಂತರದಲ್ಲಿ ಸರಣಿ ಜಯ
2010-11: ಭಾರತಕ್ಕೆ 2-0 ಅಂತರದಲ್ಲಿ ಸರಣಿ ಜಯ
2011-12: ಭಾರತಕ್ಕೆ 0-4 ಅಂತರದಲ್ಲಿ ಸರಣಿ ಸೋಲು
2012-13: ಭಾರತಕ್ಕೆ 4-0 ಅಂತರದಲ್ಲಿ ಸರಣಿ ಜಯ
2014-15: ಭಾರತಕ್ಕೆ 0-2 ಅಂತರದಲ್ಲಿ ಸರಣಿ ಸೋಲು
2016-17: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ
2018-19: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ
2020-21: ಭಾರತಕ್ಕೆ 2-1 ಅಂತರದಲ್ಲಿ ಸರಣಿ ಜಯ

2016ರಿಂದ ನಡೆದ 3 ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಳನ್ನೂ ಭಾರತ ಗೆದ್ದುಕೊಂಡಿದೆ. 2016-17ರಲ್ಲಿ ಭಾರತದಲ್ಲಿ ನಡೆದ ಸರಣಿಯನ್ನು 2-1ರ ಅಂತರದಲ್ಲಿ ಗೆದ್ದುಕೊಂಡಿದ್ದ ಭಾರತ, 2018-19 ಹಾಗೂ 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯನ್ನು ಭಾರತ 2-1ರ ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 2023ರ ವೇಳಾಪಟ್ಟಿ (India Vs Australia (Border-Gavaskar Trophy test series):
ಪ್ರಥಮ ಟೆಸ್ಟ್: ಫೆಬ್ರವರಿ 9-13 (ವಿಸಿಎ ಕ್ರೀಡಾಂಗಣ, ಜಮ್ತಾ; ನಾಗ್ಪುರ)
2ನೇ ಟೆಸ್ಟ್: ಫೆಬ್ರವರಿ 17-21 (ಫಿರೋಜ್ ಶಾ ಕ್ರೀಡಾಂಗಣ, ದೆಹಲಿ)
3ನೇ ಟೆಸ್ಟ್: ಮಾರ್ಚ್ 1-5 (HPCA ಕ್ರೀಡಾಂಗಣ, ಧರ್ಮಶಾಲಾ)
4ನೇ ಟೆಸ್ಟ್: ಮಾರ್ಚ್ 9-13 (ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್)

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಶುಭಮನ್ ಗಿಲ್, ಉಮೇಶ್ ಯಾದವ್, ಜೈದೇವ್ ಉನಾದ್ಕಟ್, ಶ್ರೇಯಸ್ ಅಯ್ಯರ್ (2ನೇ ಟೆಸ್ಟ್ ಪಂದ್ಯಕ್ಕೆ ಲಭ್ಯ).

ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆರನ್ ಪಿಂಚ್

ಇದನ್ನೂ ಓದಿ : Ranji Semi final: ನಾಳೆಯಿಂದ ಚಿನ್ನಸ್ವಾಮಿಯಲ್ಲಿ ರಣಜಿ ಸೆಮಿಫೈನಲ್: ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಸೇಡಿನ ಸಮರ

ಇದನ್ನೂ ಓದಿ : Shikhar Dhawan Aesha Mukerji : ಮಾಜಿ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗಬ್ಬರ್, ಶಿಖರ್ ಮಾಜಿ ಪತ್ನಿಗೆ ದೆಹಲಿ ಕೋರ್ಟ್ ಖಡಕ್ ವಾರ್ನಿಂಗ್

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡ:
ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವನ್ ಸ್ಮಿತ್ (ಉಪನಾಯಕ), ಡೇವಿಡ್ ವಾರ್ನರ್, ಮ್ಯಾಟ್ ರೆನ್’ಶಾ, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಸ್ಕಾಟ್ ಬೊಲಾಂಡ್, ಕ್ಯಾಮರೂನ್ ಗ್ರೀನ್, ಪೀಟರ್ ಹ್ಯಾಂಡ್ಸ್’ಕಾಂಬ್, ಜೋಶ್ ಹೇಜಲ್’ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ, ನೇಥನ್ ಲಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್.

Border-Gavaskar Test series 2023 : India is the king in the Border-Gavaskar Test series, what is the record of Team India against Kangaroos?

Comments are closed.