BMTC Electric Bus : ಬೆಂಗಳೂರಿನಲ್ಲಿ ರಸ್ತೆ ಇಳಿದ ಎಲೆಕ್ಟ್ರಿಕ್‌ ಬಸ್‌ : ವಿಶಿಷ್ಟ ಬಸ್ಸಿನಲ್ಲಿ ಸಂಚರಿಸಿ ಸಂಭ್ರಮಿಸಿದ ಪ್ರಯಾಣಿಕರು

ಬೆಂಗಳೂರು : ವಾಲಿನ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲ ಬಿಎಂಟಿಸಿ ಇದೀಗ ‘ಎಲೆಕ್ಟ್ರಿಕ್ ಬಸ್’ ಸಂಚಾರಕ್ಕೆ ಮುಂದಾಗಿದ್ದು, ಇಂದಿನಿಂದ ಸಿಲಿಕಾನ್‌ ಸಿಟಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭವಾಗಿದೆ. ಗುತ್ತಿಗೆ ಆಧಾರದಲ್ಲಿ 300 ಎಲೆಕ್ಟ್ರಿಕ್‌ ಬಸ್‌ ಸಂಚಾರ ನಡೆಸಲಿವೆ. ಅಶೋಕ ಲೇಲ್ಯಾಂಡ್‌ ಕಂಪೆನಿ ಸಿದ್ದ ಪಡಿಸಿರುವ ಬಸ್‌ಗಳು ಇದೀಗ ರಸ್ತೆ ಇಳಿದಿವೆ.

ಈ ಎಲೆಕ್ಟ್ರಿಕ್‌ ಬಸ್‌ ಒಂದು ಬಾರಿ ಚಾರ್ಜ್‌ಗೆ 120 ಕಿಮೀ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, 45 ನಿಮಿಷಗಳ ಚಾರ್ಜಿಂಗ್ ಅವಕಾಶ ಒದಗಿಸಲಾಗುತ್ತದೆ. ಇಂತಹ ಬಸ್ ಗಳ ಟಿಕೆಟ್ ದರ ಸ್ಟೇಜ್ ಅನುಸಾರವಾಗಿ ನಿಗದಿ ಪಡಿಸಲಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ‘ಫೇಮ್‌ ಯೋಜನೆ’ ರೂಪಿಸಿದೆ. ಬಿಎಂಟಿಸಿ ಗುತ್ತಿಗೆ ಮಾದರಿಯಡಿ ಪಡೆಯುವ 300 ಎಲೆಕ್ಟ್ರಿಕ್‌ ಬಸ್‌ಗೆ ಫೇಮ್‌-2 ಯೋಜನೆಯಡಿ ಪ್ರತಿ ಬಸ್‌ಗೆ .55 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿ ಬಸ್‌ಗೆ .33 ಲಕ್ಷ ಸೇರಿದಂತೆ ಒಟ್ಟು 88 ಲಕ್ಷ ಅನುದಾನ ಸಿಗಲಿದೆ.

ಇದನ್ನೂ ಓದಿ: ಭಾರತಕ್ಕೆ ಬರಲಿದೆ Hyundai Ioniq 5 ಮತ್ತು Kia EV6 ಎಲೆಕ್ಟ್ರಿಕ್ ಕಾರುಗಳು

12 ಮೀಟರ್‌ ಉದ್ದದ 43 ಆಸನ ಸಾಮರ್ಥ್ಯದ ಹೊಂದಿದೆ. ಈ ಎಲೆಕ್ಟ್ರಿಕ್‌ ಬಸ್‌ಗಳು ದಿನಕ್ಕೆ 250 ಕಿ.ಮೀ. ದೂರ ಸಂಚರಿಸುತ್ತವೆ. ಅಂದರೆ, 45 ನಿಮಿಷಗಳ ಕಾಲ ಚಾಜ್‌ರ್‍ ಮಾಡಿದರೆ 225 ಕಿ.ಮೀ. ಸಂಚರಿಸಲಿದೆ. ಈ ಬಸ್ಸುಗಳಿಗೆ ಟೆಂಡರ್‌ ಪಡೆದಿರುವ ಅಶೋಕ ಲೇಲ್ಯಾಂಡ್‌ ಕಂಪನಿಯೇ ಚಾಲಕರನ್ನು ನೀಡಲಿದೆ. ಬಿಎಂಟಿಸಿ ಚಾರ್ಜಿಂಗ್‌ ಘಟಕ ಸ್ಥಾಪನೆಗೆ ಜಾಗ ಹಾಗೂ ನಿರ್ವಾಹಕರನ್ನು ಮಾತ್ರ ನೀಡಲಿದೆ. 10 ವರ್ಷಗಳ ಕಾಲ ಗುತ್ತಿಗೆ ಅವಧಿ ಇದ್ದು, ವಿದ್ಯುತ್‌ ದರವನ್ನು ಕಂಪನಿಯೇ ಭರಿಸಲಿದೆ. ಬಿಎಂಟಿಸಿ ಪ್ರತಿ ಕಿ.ಮೀ.ಗೆ .48.95 ಮಾತ್ರ ಕಂಪನಿಗೆ ಪಾವತಿಸಲಿದೆ.

ಬಸ್ಸಿನಲ್ಲಿ ಸಿಸಿಟಿವಿ ಕ್ಯಾಮರಾ, ಪ್ಯಾಸೆಂಜರ್‌ ಡಿಸ್‌ಪ್ಲೇ ಬೋರ್ಡ್‌, ಅಂಗವಿಕಲರ ಪ್ರವೇಶಕ್ಕೆ ರಾರ‍ಯಂಪ್‌, ಪ್ಯಾನಿಕ್‌ ಬಟನ್‌ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳು ಇರಲಿವೆ. ಬಿಎಂಟಿಸಿಯು ಈ ಎಲೆಕ್ಟ್ರಿಕ್‌ ಬಸ್‌ಗಳಿಗಾಗಿಯೇ ಮೂರು ಪ್ರತ್ಯೇಕ ಡಿಪೋ ಮೀಸಲಿರಿಸಲು ಚಿಂತಿಸಿದೆ. ಯಶವಂತಪುರ, ಕೆ.ಆರ್‌.ಪುರ ಹಾಗೂ ಕೆಂಗೇರಿ ಡಿಪೋಗಳನ್ನು ಎಲೆಕ್ಟ್ರಿಕ್‌ ಬಸ್‌ಗಳಿಗೆ ಮೀಸಲಿರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಬಿಎಂಟಿಸಿಯ ಸೇವೆಗೆ ಮೊದಲ ಮಿನಿ ಎಲೆಕ್ಟ್ರಿಕ್‌ ಬಸ್‌ ನಗರದ ಕೆಂಗೇರಿಗೆ ಆಗಮಿಸಿದ್ದು ಸಾರಿಗೆ ಸಚಿವ ಬಿ.ಶ್ರೀರಾಮುಲು ಇಂದು(ಗುರುವಾರ) ವೀಕ್ಷಣೆ ಮಾಡಲಿದ್ದಾರೆ. ಈ ಬಸ್‌ಗೆ ಸಾರಿಗೆ ಇಲಾಖೆಯಿಂದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ರಸ್ತೆಗೆ ಪಾಧಾರ್ಪಣೆ ಮಾಡಲಿದೆ.

ಇದನ್ನೂ ಓದಿ: ವರ್ಷಾಂತ್ಯಕ್ಕೆ ಬೆಂಗಳೂರಲ್ಲಿ ರಸ್ತೆಗೆ ಇಳಿಯಲಿವೆ 90 ಮಿನಿ ಎಲೆಕ್ಟ್ರಿಕ್ ಬಸ್

(Electric bus landing in Bangalore: Passengers traveling in a special bus)

Comments are closed.