Mercedes Benz ಇಂದ ʼಮೇಡ್ ಇನ್ ಇಂಡಿಯಾ 2021 S Classʼ ಹೊಸ ಕಾರು ಬಿಡುಗಡೆ

ಮರ್ಸೆಡೀಸ್‌ ಬೆನ್ಜ್‌ ( Mercedes Benz) ಐಷಾರಾಮಿ ಕಾರು ತಯಾರಕ ಕಂಪನಿ ಅಂತಾನೇ ಫೇಮಸ್. ಮರ್ಸೆಡೀಸ್‌ ಬೆನ್ಜ್‌ ಇದೀಗ ತನ್ನ ಹೊಸ ಮೇಡ್ ಇನ್ ಇಂಡಿಯಾ 2021 Mercedes Benz S Class ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಮರ್ಸೆಡೀಸ್‌ ಬೆನ್ಜ್‌ ಕಂಪನಿಯು ಈ ಐಷಾರಾಮಿ ಸೆಡಾನ್ ಕಾರ್ ಅನ್ನು S Class 350 D ಹಾಗೂ S Class S 450 ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಿದೆ. S Class 350 D ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.57 ಕೋಟಿಗಳಾದರೆ, Mercedes Benz S Class S 450 ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.62 ಕೋಟಿಗಳಾಗಿದೆ.

ಮರ್ಸೆಡೀಸ್‌ ಬೆನ್ಜ್‌ ಇಂಡಿಯಾ ಕಂಪನಿಯು ಸದ್ಯಕ್ಕೆ ಮರ್ಸೆಡೀಸ್‌ ಬೆನ್ಜ್‌ ಎಸ್‌ ಕ್ಲಾಸ್‌ ( 2021 Mercedes Benz S Class) ಕಾರ್ ಅನ್ನು S 400 D 4 ಮ್ಯಾಟಿಕ್ ಹಾಗೂ S 450 4 ಮ್ಯಾಟಿಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡುತ್ತದೆ. S 400 D 4 ಮ್ಯಾಟಿಕ್ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 2.17 ಕೋಟಿಗಳಾದರೆ, S 450 4 ಮ್ಯಾಟಿಕ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 2.19 ಕೋಟಿಗಳಾಗಿದೆ. ಹೊಸ ಮರ್ಸೆಡೀಸ್‌ ಬೆನ್ಜ್‌ ಎಸ್‌ ಕ್ಲಾಸ್‌ ಕಾರು ಆಕರ್ಷವಾಗಿದ್ದು, ಹೆಚ್ಚು ಫೀಚರ್ ಗಳನ್ನು ಹೊಂದಿದೆ. ಜೊತೆಗೆ ಹಳೆಯ ಮಾದರಿಗಿಂತ ಹೆಚ್ಚು ಸುರಕ್ಷಿತವಾಗಿದೆ. ವಿನ್ಯಾಸ ಹಾಗೂ ಸ್ಟೈಲಿಂಗ್ ಬಗ್ಗೆ ಹೇಳುವುದಾದರೆ ಈ ಕಾರಿನ ಮುಂಭಾಗದ ಗ್ರಿಲ್ ಕಪ್ಪು ಬಣ್ಣವನ್ನು ಹೊಂದಿದ್ದು, ಹಲವು ಭಾಗಗಳಲ್ಲಿ ನಯವಾದ ರೇಖೆ ಹಾಗೂ ಕ್ರೋಮ್ ಅಂಶಗಳನ್ನು ನೀಡಲಾಗಿದೆ.

ಇದನ್ನೂ ಓದಿ: 2021 Maruti Suzuki Celerio : ಶೀಘ್ರದಲ್ಲೇ ಬಿಡುಗಡೆಯಾಗುತ್ತೆ ಮಾರುತಿ ಸೆಲೆರಿಯೋ ಹೊಸ ಕಾರ್‌

ಮರ್ಸೆಡೀಸ್‌ ಬೆನ್ಜ್‌ ಎಸ್‌ ಕ್ಲಾಸ್‌ ಕಾರು ( 2021 Mercedes Benz S Class) ಹೊಸ ಡಿಜಿಟಲ್ ಎಲ್‌ಇಡಿ ಹೆಡ್‌ಲೈಟ್‌ ಹಾಗೂ 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಈ ಕಾರಿನಲ್ಲಿರುವ ಫ್ಲಶ್ ಅಳವಡಿಸಿದ ಡೋರ್ ಹ್ಯಾಂಡಲ್‌, ಕಾರಿನ ಬಳಿ ಕೀಲಿಯನ್ನು ಚಲಿಸಿದ ನಂತರವೇ ಹೊರ ಬರುತ್ತದೆ. ಇದರ ಜೊತೆಗೆ ಈ ಫೀಚರ್ ಕಾರಿನ ಏರೋ ಡೈನಾಮಿಕ್ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇನ್ನು ಈ ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ – ವೈಟ್, ಸಿಯೆನ್ನಾ ಬ್ರೌನ್ ಹಾಗೂ ಬ್ಲಾಕ್ ಎಂಬ ಮೂರು ಅಪ್ ಹೊಲೆಸ್ಟರಿ ಆಯ್ಕೆಗಳನ್ನು ನೀಡಲಾಗಿದೆ. ಈ ಹೊಸ ಕಾರಿನಲ್ಲಿ 12.8-ಇಂಚಿನ ಒಎಲ್‌ಇಡಿ ಟಚ್‌ಸ್ಕ್ರೀನ್, 12.3 ಇಂಚಿನ ಡಿಜಿಟಲ್ ಎಂಐ‌ಡಿ ಹಾಗೂ ಎರಡನೇ ತಲೆಮಾರಿನ MBUX ವಾಯ್ಸ್ ಕಂಟ್ರೋಲ್ ಗಳನ್ನು ನೀಡಲಾಗಿದೆ.

ಇದರ ಜೊತೆಗೆ ಮರ್ಸೆಡೀಸ್‌ ಬೆನ್ಜ್‌ ಎಸ್‌ ಕ್ಲಾಸ್‌ ಕಾರಿನಲ್ಲಿ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಶನ್, ಎರಡನೇ ಸಾಲಿನಲ್ಲಿ ವೆಂಟಿಲೇಟೆಡ್ ಸೀಟ್, ಮಸಾಜ್ ಫಂಕ್ಷನ್, ಸೆಂಟ್ರಲ್ ಆರ್ಮ್ ರೆಸ್ಟ್ ಮೇಲೆ ಟ್ಯಾಬ್ಲೆಟ್, 64 ಕಲರ್ ಆಂಬಿಯೆಂಟ್ ಲೈಟಿಂಗ್ ಹಾಗೂ ಬರ್ಮಿಸ್ಟರ್ 4 ಡಿ ಸರೌಂಡ್ ಸೌಂಡ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ. Mercedes Benz ಕಂಪನಿಯು ಹೊಸ 2021 S Class ಕಾರ್ ಅನ್ನು ಹಲವು ಸುರಕ್ಷತಾ ಫೀಚರ್ ಗಳೊಂದಿಗೆ ಬಿಡುಗಡೆಗೊಳಿಸಿದೆ. ಇವುಗಳಲ್ಲಿ 10 ಏರ್‌ಬ್ಯಾಗ್‌ಗಳು, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್‌, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಸೈಡ್ ಡಿಕ್ಕಿಂಗ್ ಮಾನಿಟರಿಂಗ್ ಹಾಗೂ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಹಲವಾರು ಫೀಚರ್ ಗಳು ಸೇರಿವೆ.

ಇದನ್ನೂ ಓದಿ: Rapid Matte Edition ಭಾರತದಲ್ಲಿ ಬಿಡುಗಡೆ ಮಾಡಿದ Skoda India

ಈ ಕಾರನ್ನು 3.0 ಲೀಟರ್ ಪೆಟ್ರೋಲ್ ಹಾಗೂ 3.0 ಲೀಟರ್ ಡೀಸೆಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ಎಂಜಿನ್ 367 ಬಿಹೆಚ್‌ಪಿ ಪವರ್ ಹಾಗೂ 500 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಡೀಸೆಲ್ ಎಂಜಿನ್ 286 ಬಿಹೆಚ್‌ಪಿ ಪವರ್ ಹಾಗೂ 600 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪೆಟ್ರೋಲ್ ಎಂಜಿನ್‌ನೊಂದಿಗೆ 48 ವೋಲ್ಟ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ನೀಡಲಾಗಿದೆ.

(Mercedes Benz unveils new car in India 2021 S Classʼ)

Comments are closed.