Abhimanyu Mithun : ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಅಭಿಮನ್ಯ ಮಿಥುನ್‌

ಬೆಂಗಳೂರು : ಭಾರತ ತಂಡ ವೇಗದ ಬೌಲರ್ ಕನ್ನಡಿಗ ಅಭಿಮನ್ಯು ಮಿಥುನ್ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದರು. ಕ್ರಿಕೆಟ್‌ ಸಾರ್ವತ್ರಿಕ ಆಟ, ನಾನು ಉತ್ತುಂಗದಲ್ಲಿದ್ದಾಗಲೇ ಕ್ರಿಕೆಟ್‌ನಿಂದ ದೂರ ಉಳಿಯಲು ಬಯಸುತ್ತಿದ್ದೇನೆ. ನನ್ನ ಹಾಗೂ ಕುಟುಂಬಕ್ಕೆ ಉತ್ತಮ ಅವಕಾಶಗಳನ್ನು ಹುಡುಕುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದಿದ್ದಾರೆ ಮಿಥುನ್.‌ ಇದೀಗ ಮಿಥುನ್‌ ನಿವೃತ್ತಿಯ ಬೆನ್ನಲ್ಲೇ ಕರ್ನಾಟಕದ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ 20 ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ 50 ಓವರ್ ಸಂಭಾವ್ಯ ಪಟ್ಟಿಗಳಿಂದ ಹಿಂಪಡೆಯಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸ್ಪಷ್ಟಪಡಿಸಿದೆ.

ಕರ್ನಾಟಕ ರಣಜಿ ತಂಡ ಪ್ರಧಾನ ಬೌಲರ್‌ ಆಗಿದ್ದ ಅಭಿಮನ್ಯು ಮಿಥುನ್‌ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಭಾರತ ಪರ ಮಿಥುನ್‌ ನಾಲ್ಕು ಟೆಸ್ಟ್‌ ಹಾಗೂ ಐದು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2010 ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ತನ್ನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 105 ಕ್ಕೆ 4 ವಿಕೆಟ್ ಪಡೆದಿದ್ದರು. ಆರಂಭಿಕ ಅಂತರಾಷ್ಟ್ರೀಯ ಯಶಸ್ಸಿನ ಹೊರತಾಗಿಯೂ, ಮಿಥುನ್ ಗೆ ಭಾರತ ತಂಡದಲ್ಲಿ ಶಾಶ್ವತ ಸ್ಥಾನ ಸಿಗಲಿಲ್ಲ. 2011 ರಲ್ಲಿ ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊನೆಯದಾಗಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ವಿನಯ್‌ ಕುಮಾರ್‌, ಎಸ್.ಅರವಿಂದ ಜೊತೆಯಲ್ಲಿ ಚೆಂಡು ಹಂಚಿಕೊಳ್ಳುತ್ತಿದ್ದ ಅಭಿಮನ್ಯು ಮಿಥುನ್‌ ತನ್ನ ವೇತ ಹಾಗೂ ಪುಟಿಯುವಿಕೆಯಿಂದ ಬೌಲ್‌ನ್ನು ಎಸೆಯುವ ಮೂಲಕ ಆಟಗಾರರಿಗೆ ಸಿಂಹಸ್ವಪ್ನವಾಗಿದ್ದರು. ಒಟ್ಟು 103 ಪ್ರಥಮ ದರ್ಜೆ ಪಂದ್ಯಗಳಲ್ಲಿ 338 ವಿಕೆಟ್ ಗಳನ್ನುಪಡೆದಿದ್ದಾರೆ. 12 ಬಾರಿ ಐದು ವಿಕೆಟ್ ಮತ್ತು ಎರಡು ಬಾರಿ 10 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ.

ಇದನ್ನೂ ಓದಿ : ಕ್ರೀಡಾಂಗಣದಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ದೀಪಕ್‌ ಚಹರ್‌ : ವಿಡಿಯೋ ವೈರಲ್‌

ಇದನ್ನೂ ಓದಿ : ಭಾರತಕ್ಕೊಬ್ಬ ವೇಗದ ಬೌಲರ್ : ತರಕಾರಿ ವ್ಯಾಪಾರಿಯ ಮಗನ ವೇಗಕ್ಕೆ ಬೆರಗಾಯ್ತು ಕ್ರಿಕೆಟ್‌ ಜಗತ್ತು

( Abhimanyu Mithun announces retirement from all forms of cricket )

Comments are closed.