West Indies out of T20 World Cup 2022: ಎರಡು ಬಾರಿಯ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಅರ್ಹತಾ ಸುತ್ತಿನಲ್ಲೇ ಔಟ್

ಹೊಬಾರ್ಟ್: West Indies out : ಎರಡು ಬಾರಿಯ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡಕ್ಕೆ ಟಿ20 ವಿಶ್ವಕಪ್ 2022 (T20 World Cup 2022) ಟೂರ್ನಿಯಲ್ಲಿ ಬಿಗ್ ಶಾಕ್ ಎದುರಾಗಿದೆ. 2012 ಹಾಗೂ 2016ರ ಚಾಂಪಿಯನ್ಸ್ ವಿಂಡೀಸ್ ತಂಡ ಅರ್ಹತಾ ಸುತ್ತಿನಲ್ಲೇ ಹೋರಾಟ ಕೊನೆಗೊಳಿಸಿ ಟೂರ್ನಿಯಿಂದ ಹೊರ ಬಿದ್ದಿದೆ. ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಟ್ ವಿರುದ್ಧ 42 ರನ್’ಗಳಿಂದ ಸೋತಿದ್ದ ವಿಂಡೀಸ್ (West Indies), 2ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 31 ರನ್’ಗಳ ಗೆಲುವು ದಾಖಲಿಸಿತ್ತು, ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಧಾನ ಸುತ್ತು ಪ್ರವೇಶಿಸಬೇಕಾದರೆ ಹೊಬಾರ್ಟ್’ನಲ್ಲಿ ನಡೆದ ಐರ್ಲೆಂಡ್ (Ireland) ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ವೆಸ್ಟ್ ಇಂಡೀಸ್ ಸಿಲುಕಿತ್ತು.

ಆದರೆ ಮಾಡು ಇಲ್ಲ ಮಡಿ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ವಿಂಡೀಸ್ ಪಡೆ 9 ರನ್’ಗಳ ಹೀನಾಯ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿತು. ಗೆಲ್ಲಬೇಕಾಗಿದ್ದ ಪಂದ್ಯದಲ್ಲಿ ಕೆರಿಬಿಯನ್ನರನ್ನರನ್ನು ಮಟ್ಟ ಹಾಕಿದ ಐರ್ಲೆಂಡ್ ‘ಬಿ’ ಗುಂಪಿನಿಂದ ಮೊದಲ ತಂಡವಾಗಿ ಅರ್ಹತಾ ಸುತ್ತಿಗೆ (Super 12) ಎಂಟ್ರಿ ಕೊಟ್ಟಿತು.

ನಾಕೌಟ್ ಮಹತ್ವ ಪಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಐರ್ಲೆಂಡ್ ತಂಡದ ಸಂಘಟಿತ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್’ಗಳನ್ನಷ್ಟೇ ಕಲೆ ಹಾಕಿತು. ವಿಂಡೀಸ್ ಪರ ಏಕಾಂಗಿ ಹೋರಾಟ ನಡೆಸಿದ ಬ್ರೆಂಡನ್ ಕಿಂಗ್ 48 ಎಸೆತಗಳಲ್ಲಿ 62 ರನ್ ಬಾರಿಸಿದರು. ಐರ್ಲೆಂಡ್ ಪರ ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ಗ್ಯಾರೆತ್ ಡೆಲಾನಿ 4 ಓವರ್’ಗಳಲ್ಲಿ ಕೇವಲ 16 ರನ್ನಿತ್ತು 3 ವಿಕೆಟ್ ಕಬಳಿಸಿದರು.

ನಂತರ ಗುರಿ ಬೆನ್ನಟ್ಟಿದ ಐರ್ಲೆಂಡ್ 17.3 ಓವರ್’ಗಳಲ್ಲಿ ಕೇವಲ ಒಂದು ವಿಕೆಟ್ ಒಪ್ಪಿಸಿ ಭರ್ಜರಿ ಜಯ ದಾಖಲಿಸಿತು. ಅಬ್ಬರದ ಆಟವಾಡಿದ ಮಾಜಿ ನಾಯಕ ಪಾಲ್ ಸ್ಟಿರ್ಲಿಂಗ್ 48 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದ್ರೆ, ನಾಯಕ ಬಾಲ್’ಬ್ರೈನ್ 37 ಹಾಗೂ ವಿಕೆಟ್ ಕೀಪರ್ ಲಾರ್ಕನ್ ಟಕರ್ ಅಜೇಯ 45 ರನ್’ಗಳ ಕಾಣಿಕೆಯಿತ್ತರು.

ಸ್ಟಿರ್ಲಿಂಗ್-ಬಾಲ್’ಬ್ರೈನ್ ಜೋಡಿ ಮೊದಲ ವಿಕೆಟ್’ಗೆ 73 ರನ್’ಗಳ ಜೊತೆಯಾಟವಾಡಿದ್ರೆ, ಮುರಿಯದ 2ನೇ ವಿಕೆಟ್’ಗೆ 77 ರನ್ ಸೇರಿಸಿದ ಸ್ಟಿರ್ಮಿಂಗ್-ಟಕರ್ ಜೋಡಿ ಐರ್ಲೆಂಡ್’ಗೆ 9 ವಿಕೆಟ್’ಗಳ ಭರ್ಜರಿ ಗೆಲುವು ತಂದೊಕೊಟ್ಟು ತಂಡವನ್ನು ವಿಶ್ವಕಪ್ ಪ್ರಧಾನ ಸುತ್ತಿಗೆ ಮುನ್ನಡೆಸಿದರು.

ಇದನ್ನೂ ಓದಿ : T20 World cup 2022 : ಟಿ20 ವಿಶ್ವಕಪ್ : ಭಾರತ ಪರ ಟಾಪ್ ಸ್ಕೋರರ್, ಬೆಸ್ಟ್ ಸ್ಟ್ರೈಕ್‌ರೇಟ್, ಟಾಪ್ ವಿಕೆಟ್ ಟೇಕರ್ ಯಾರು? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : Rohit Sharma: ಲೆಫ್ಟ್-ರೈಟ್ ಥ್ರೋಡೌನ್, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಹಿಟ್ ಮ್ಯಾನ್ ಸ್ಪೆಷಲ್ ಪ್ರಾಕ್ಟೀಸ್

West Indies out of T20 World Cup 2022 Ireland Qualify to Super 12

Comments are closed.