Honda Shine 100 Vs Hero Splendor Plus : ಹೊಂಡಾ ಶೈನ್‌ 100 Vs ಹೀರೋ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಹೋಲಿಕೆ

ಹೋಂಡಾ (Honda) ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಇತ್ತೀಚೆಗೆ ತನ್ನ ಶೈನ್ 100 ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 64,900 ರೂ. ಆಗಿದೆ. ಈ ವಿಭಾಗದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಹೀರೋ (Hero) ಸ್ಪ್ಲೆಂಡರ್ ಪ್ಲಸ್ ನೊಂದಿಗೆ ಇದು ಸ್ಪರ್ಧಿಸುತ್ತದೆ. ಈ ಎರಡೂ ಬೈಕುಗಳು (Honda Shine 100 Vs Hero Splendor Plus) ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಉತ್ತಮ ಮೈಲೇಜ್‌ ನೀಡುವ ಬೈಕುಗಳಂದೇ ಇವುಗಳು ಹೆಸರುವಾಸಿಯಾಗಿದೆ. ಜೊತೆಗೆ ಬಜೆಟ್‌ ಬೆಲೆಯಲ್ಲೂ ಖರೀದಿಸಬಹುದಾಗಿದೆ.

Honda Shine 100 Vs Hero Splendor Plus : ವಿನ್ಯಾಸ ಮತ್ತು ಬಣ್ಣ

ಇವೆಲ್ಲವೂ ಪ್ರಯಾಣಿಕ ಮೋಟಾರ್‌ಸೈಕಲ್‌ಗಳಾಗಿದ್ದು, ಅವುಗಳು ಜನಸಾಮಾನ್ಯರಿಗಾಗಿ ತಯಾರಿಸಲ್ಪಟ್ಟಿರುವುದರಿಂದ ಸರಳ ವಿನ್ಯಾಸವನ್ನು ಹೊಂದಿವೆ. ಹೊಸ ಹೋಂಡಾ ಶೈನ್ 100 ಐದು, ಮತ್ತು ಹೀರೋ ಸ್ಪ್ಲೆಂಡರ್ ಪ್ಲಸ್ ಹನ್ನೆರಡು ಬಣ್ಣಗಳ ರೂಪಾಂತರಗಳಲ್ಲಿ ಲಭ್ಯವಿದೆ.

ಇಂಜಿನ್‌ :
ಹೊಂಡಾ ಶೈನ್‌ 100, ಇದು 98.8cc ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಪಡೆದುಕೊಂಡಿದೆ. ಇದು 7.2 Bhp ಪವರ್ ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 4 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ. ಇದು ಪ್ರತಿ ಲೀಟರ್‌ಗೆ 60-70 ಕಿಮೀ ಮೈಲೇಜ್ ನೀಡುತ್ತದೆ.

ಸ್ಪ್ಲೆಂಡರ್ ಪ್ಲಸ್, 97.2cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಪಡೆದುಕೊಂಡಿದೆ. ಇದು 7.9 bhp ಪವರ್ ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲೂ ಸಹ 4 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಇದು ಪ್ತಿ ಲೀಟರ್‌ಗೆ 60-70 ಕಿಮೀ ಮೈಲೇಜ್ ಪಡೆಯುತ್ತದೆ.

ವೈಶಿಷ್ಟ್ಯಗಳು :
ಎಲ್ಲಾ ಎರಡು ಪ್ರಯಾಣಿಕ ಮೋಟಾರ್‌ಸೈಕಲ್‌ಗಳು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಸ್ಪ್ರಿಂಗ್-ಲೋಡೆಡ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಇದು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಎರಡೂ ಚಕ್ರಗಳಲ್ಲಿ ಡ್ರಮ್ ಬ್ರೇಕ್ಗಳನ್ನು ಪಡೆದುಕೊಂಡಿದೆ. ಶೈನ್ 100 ಬೇಸಿಕ್‌ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದರೆ, ಸ್ಪ್ಲೆಂಡರ್ ಪ್ಲಸ್‌ನ XTEC ರೂಪಾಂತರವು ಡಿಜಿಟಲ್ ಕನ್ಸೋಲ್ ಅನ್ನು ಪಡೆದುಕೊಂಡಿದೆ.

ಬೆಲೆ ಹೋಲಿಕೆ :
ಹೋಂಡಾ ಶೈನ್ 100 ಒಂದೇ ವೆರಿಯಂಟ್‌ನಲ್ಲಿ 64,900 ರೂ.ಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಹೀರೋ ಸ್ಪ್ಲೆಂಡರ್ ಪ್ಲಸ್ ಹಲವಾರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋ ರೂಂ ಬೆಲೆ 73,481 ರಿಂದ 77,745 ರೂ. ಆಗಿದೆ.

ಇದನ್ನೂ ಓದಿ : ಆಭರಣ ಪ್ರಿಯರೇ : ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡ ಚಿನ್ನಾಭರಣ

ಇದನ್ನೂ ಓದಿ : JEE Mains Result 2023 : ನೂರಕ್ಕೆ ನೂರರಷ್ಟು ಅಂಕ ಗಳಿಸಿದ ಕರ್ನಾಟಕ ಮೂರು ವಿದ್ಯಾರ್ಥಿಗಳು

(Bike Comparison between Honda Shine 100 Vs Hero Splendor Plus. Know the specifications and price)

Comments are closed.