ರೋಡ್ ಶೋ ವೇದಿಕೆಯಲ್ಲೇ ಕೋಟ ಶ್ರೀನಿವಾಸ ಪೂಜಾರಿಗೆ ಗದರಿಸಿದ ಅಮಿತ್ ಶಾ

ಬೆಂಗಳೂರು : ರಾಜ್ಯದಾದ್ಯಂತ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸಿನಿಂದ (Karnataka election road show) ಸಾಗಿದೆ. ಈ ಭಾರೀ ಎಲ್ಲ ಪಕ್ಷಗಳಿಂದಲೂ ಭರ್ಜರಿ ಮತ ಭೇಟೆ ನಡೆಯುತ್ತಿದೆ. ಅದರಲ್ಲೂ ಬಿಜೆಪಿ ಪಕ್ಷದ ಪರವಾಗಿ ಕೇಂದ್ರ ಸರಕಾರದಿಂದ ಪ್ರಧಾನಿ ಮೋದಿ, ಅಮಿತ್‌ ಶಾ ಅಂತಹ ನಾಯಕರು ಕಣಕ್ಕಿಳಿದ್ದಾರೆ. ಚುನಾವಣೆ ಪ್ರಚಾರದ ಸಂದರ್ಭದಲ್ಲಿ, ಅಮಿತ್‌ ಶಾ (Amit Shah)ಅವರು ಕೋಟ ಶ್ರೀನಿವಾಸ ಪೂಜಾರಿಯವರನ್ನು (Kota Srinivasa Pujari ) ವೇದಿಕೆಯಲ್ಲೇ ಗದರಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ವಿಫಲವಾಗಿದ್ದಾರೆಂದು ಕೋಟ ಶ್ರೀನಿವಾಸ ಪೂಜಾರಿಗೆ ಗದರಿಸಿದ್ದಾರೆ ಎಂದು ವೈರಲ್‌ ವಿಡಿಯೋದಲ್ಲಿ ಇರುವ ಬರಹದಲ್ಲಿ ಹೇಳಲಾಗಿದೆ. ಈ ಬಗ್ಗೆ ಕಾಂಗ್ರೆಸ್‌ ಟ್ವೀಟ್‌ ಮಾಡಿದ್ದು, ” ಬಿಜೆಪಿ ನಾಯಕರನ್ನು ಸೃಷ್ಟಿಸುವುದಿಲ್ಲ, ಅಮಿತ್‌ ಶಾ ಕಾಲಿನಡಿ ಕೂರುವ ಗುಲಾಮರನ್ನು ಸೃಷ್ಟಿಸುತ್ತದೆ” ಎಂದು ಟೀಕಿಸಿದ್ದಾರೆ. “ಬಿಜೆಪಿಯಲ್ಲಿ ಮೋದಿ ಅಮಿತ್‌ ಶಾ ಮುಂದೆ ಯಾರಿಗೂ ಸ್ವತಂತ್ರವಿಲ್ಲ. “ಶಾ”ಭಿಮಾನ ಇರಬೇಕೆ ಹೊರತು ಸ್ವಾಭಿಮಾನ ಇರಕೂಡದು!” ಎಂದು ಕಾಂಗ್ರೆಸ್‌ ತಮಾಷೆ ಮಾಡಿದೆ.

ಇದನ್ನೂ ಓದಿ : ಕರ್ನಾಟಕ ಚುನಾವಣೆಯಿಂದ ರಾಜ್ಯದ ಭವಿಷ್ಯ ನಿರ್ಧಾರ ಎಂದ ಪ್ರಧಾನಿ ಮೋದಿ

ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ : ಇಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಸಂಪೂರ್ಣ ವಿವರ ಇಲ್ಲಿದೆ

“ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಚಿಕ್ಕ ಮಕ್ಕಳನ್ನು ಗದುರುವಂತೆ ಗದರಿದ ಅಮಿತ್‌ ಶಾ ಕನ್ನಡಿಗರನ್ನು, ಹಿಂದುಳಿದ ವರ್ಗವನ್ನು ನಿಸ್ಕೃಷ್ಠವಾಗಿ ಕಂಡಿದ್ದಾರೆ. ಬಿಜೆಪಿ ನಾಯಕರನ್ನು ಸೃಷ್ಟಿಸುವುದಿಲ್ಲ, ಅಮಿತ್‌ ಶಾ ಕಾಲಿನಡಿ ಕೂರುವ ಗುಲಾಮರನ್ನು ಸೃಷ್ಟೆಇಸುತ್ತದೆ ಎಂಬುದಕ್ಕೆ ಉದಾಹರಣೆ ಇದು” ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಾಯಕತ್ವದ ಕಿತ್ತಾಟ : ಯಾರಾಗ್ತಾರೆ ಮುಂದಿನ ಸಿಎಂ ?

Karnataka election road show : Amit Shah scolded Kota Srinivasa Pujari on the stage of the road show.

Comments are closed.