Citroen C3 Shine : ಸಿಟ್ರೋಯಿನ್‌ C3 ಶೈನ್‌, ಮಾರುತಿ ಸ್ವಿಫ್ಟ್‌ ಮತ್ತು ಟಾಟಾ ಪಂಚ್‌ ಹೋಲಿಕೆ; ಯಾವುದು ಖರೀದಿಗೆ ಬೆಸ್ಟ್‌…

ವಾಹನ ತಯಾರಿಕಾ ಕಂಪನಿ ಸಿಟ್ರೋಯನ್‌ (Citroen) ಇಂಡಿಯಾ ಟಾಪ್‌ ಎಂಡ್‌ ಹ್ಯಾಚ್‌ಬ್ಯಾಕ್‌ ಕಾರು C3 ಶೈನ್‌ ಆವೃತ್ತಿಯನ್ನು ಪರಿಚಯಿಸಿದೆ. ಇದರಲ್ಲಿ (Citroen C3 Shine ) ಕೆಲವು ಹೊಸ ವೈಶಿಷ್ಟ್ಯಗಳನ್ನು ಅಳವಡಿಸಿದೆ. ಈ ಕಾರಿನ ಎಕ್ಸ್‌ ಶೋ ರೂಂ ಬೆಲೆಯನ್ನು 7.60 ಲಕ್ಷ ರೂಪಾಯಿ ಆಗಿದೆ. ಈ ಕಾರು ಮಾರುತಿ ಸುಜುಕಿ ಸ್ವಿಫ್ಟ್‌ ಮತ್ತು ಟಾಟಾ ಪಂಚ್‌ ಕಾರುಗಳಿಗೆ ಪ್ರತಿಸ್ಪರ್ಧೆ ನೀಡಲಿದೆ. ಈ ಲೇಖನದಲ್ಲಿ ಮೂರು ಕಾರುಗಳನ್ನು ಹೋಲಿಕೆ ಮಾಡಿ ಕೊಡಲಾಗಿದೆ.

ವೈಶಿಷ್ಟ್ಯಗಳ ಹೋಲಿಕೆ :

ಸಿಟ್ರೋಯನ್‌ ಸಿ3 ಯಲ್ಲಿ 10 ಇಂಚಿನ ಟಚ್‌ಸ್ಕ್ರೀನ–ಇನ್ಫೋಟೆನ್‌ಮೆಂಟ್‌ ಸಿಸ್ಟಮ್‌ ಅದರಲ್ಲಿದೆ. ಆದರೆ ಮಾರುತಿ ಸುಜುಕಿ ಮತ್ತು ಟಾಟಾ ಪಂಚ್‌ 7.0 ಇಂಚಿನ ಇನ್ಫೋಟೈನ್‌ಮೆಂಟ್‌ ಸಿಸ್ಟಮ್‌ ಅನ್ನು ಹೊಂದಿದೆ. ಮೂರು ಕಾರುಗಳಲ್ಲಿ ಸಂಪರ್ಕಕ್ಕಾಗಿ ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ಪ್ಲೇಯನ್ನು ಅಳವಡಿಸಲಾಗಿದೆ. ಎಲ್ಲಾ ಕಾರುಗಳಲ್ಲಿ ಮೂಲಭೂತ ವೈಶಿಷ್ಟ್ಯಗಳು ಲಭ್ಯವಿರುತ್ತದೆ. ಇವುಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ.

ಇದನ್ನೂ ಓದಿ: KTM 390 Adventure X: KTM ಟೂರರ್ ಬೈಕ್‌ನ ಬಜೆಟ್‌ ಎಡಿಷನ್‌; ಬೈಕ್‌ ಖರೀದಿಸಲು ಸಕಾಲ

ಎಂಜಿನ್ ಹೋಲಿಕೆ:
Citroën C3 ಕಾರು 1.2-ಲೀಟರ್ NA ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ. ಇದು 82 Bhp/115 Nm ಮತ್ತು 110 Bhp/190 Nm ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಮತ್ತು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದುಕೊಂಡಿದೆ

ಮಾರುತಿ ಸ್ವಿಫ್ಟ್ 1.2-ಲೀಟರ್ NA ಪೆಟ್ರೋಲ್ ಎಂಜಿನ್ ಅನ್ನು 88 Bhp/113 Nm ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT ಟ್ರಾನ್ಸ್‌ಮಿಷನ್‌ಗೆ
ಜೋಡಿಸಲಾಗಿದೆ.

ಟಾಟಾ ಪಂಚ್ 84 Bhp/113 Nm ಉತ್ಪಾದಿಸುವ 1.2-ಲೀಟರ್ NA ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಬೆಲೆ ಹೋಲಿಕೆ:
ಹೊಸ ಸಿಟ್ರೋಯಿನ್‌ C3 ಕಾರಿನ ಬೆಲೆ 6.16 ಲಕ್ಷದಿಂದ 8.25 ಲಕ್ಷದವರೆಗೆ ಎಕ್ಸ್ ಶೋ ರೂಂ ಬೆಲೆ ಹೊಂದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಎಕ್ಸ್ ಶೋ ರೂಂ ಬೆಲೆ 5.99 ಲಕ್ಷದಿಂದ 9.03 ಲಕ್ಷ ರೂ. ದವರೆಗೆ ಇದ್ದರೆ, ಟಾಟಾ ಪಂಚ್ ನ ಎಕ್ಸ್ ಶೋ ರೂಂ ಬೆಲೆ 5.99 ಲಕ್ಷದಿಂದ 9.47 ಲಕ್ ರೂ.ದವರೆಗೆ ಇದೆ.

ಇದನ್ನೂ ಓದಿ: How to Download Aadhar Card: ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

(Car comparison between Citroen c3 shine, Maruti Suzuki swift and Tata punch)

Comments are closed.