Cars Launching March: ಟೊಯೊಟಾ, ಮಾರುತಿ ಎರ್ಟಿಗಾ ಸೇರಿ ಇನ್ನೂ ಹಲವು; ಮಾರ್ಚ್‌ನಲ್ಲಿ ಧೂಳೆಬ್ಬಿಸಲಿರುವ ಕಾರುಗಳಿವು!

ಮಾರ್ಚ್ 2022 ರಲ್ಲಿ ಭಾರತದಲ್ಲಿ ಕೆಲವು ಅತ್ಯಾಕರ್ಷಕ ಕಾರುಗಳು (Cars Release in March 2022) ಬಿಡುಗಡೆಯಾಗಲಿವೆ. ಈ ಕಾರುಗಳ ಪಟ್ಟಿಯಲ್ಲಿ ಹ್ಯಾಚ್‌ಬ್ಯಾಕ್, ಸೆಡಾನ್, SUV ಮತ್ತು ಎಲೆಕ್ಟ್ರಿಕ್ ವಾಹನಗಳನ್ನು (Electric Vehicle in March 2022) ಸೇರಿದೆ. ನಿಮ್ಮ ಆಯ್ಕೆ ಮತ್ತು ನಿಮ್ಮ ಬೆಲೆ ಶ್ರೇಣಿಗೆ (Car Rate)ಅನುಗುಣವಾಗಿ ನೀವು ಕಾರನ್ನು ಖರೀದಿಸಲು ಆಯ್ಕೆ ಮಾಡಬಹುದು. ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ (Cars Launching March) ಕಾರುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

ಟೊಯೋಟಾ ಗ್ಲಾನ್ಜಾ (Toyota Glanza)
ಟೊಯೊಟಾ ಗ್ಲಾನ್ಜಾ ರಿಬ್ಯಾಡ್ಜ್ ಮಾಡಲಾದ ಮಾರುತಿ ಸುಜುಕಿ ಬಲೆನೊ ಆಗಿದೆ. ಹೊಸ ಟೊಯೋಟಾ ಗ್ಲಾನ್ಜಾ ಮಾರ್ಚ್ 2022 ರಲ್ಲಿ ನವೀಕರಣಗಳೊಂಡಿಗೆ ಬಿಡುಗಡೆಯಾಗಲಿದೆ. ಆಂತರಿಕ ಮತ್ತು ಹೊರಭಾಗದ ನವೀಕರಣಗಳು ನವೀಕರಿಸಲಾಗಿದ್ದು ಮಾರುತಿ ಸುಜುಕಿ ಬಲೆನೊದಂತೆಯೇ ಇರುತ್ತವೆ. ಹುಡ್ ಅಡಿಯಲ್ಲಿ ಟೊಯೋಟಾ ಗ್ಲಾನ್ಜಾ 1.2-ಲೀಟರ್, ನಾಲ್ಕು ಸಿಲಿಂಡರ್ ಡ್ಯುಯಲ್ಜೆಟ್ K12N ಪೆಟ್ರೋಲ್ ಎಂಜಿನ್ ಇರುವ ನಿರೀಕ್ಷೆಯಿದೆ. ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಸ್ವಯಂಚಾಲಿತ ಗೇರ್‌ಬಾಕ್ಸ್‌ ಸಹ ಇರುವ ನಿರೀಕ್ಷೆಯಿದೆ. ಟೊಯೊಟಾ ಗ್ಲಾನ್ಜಾ ಬೆಲೆ 7.8 ಲಕ್ಷದಿಂದ 9.8 ಲಕ್ಷ ರೂಪಾಯಿಗಳವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.

ಮಾರುತಿ ಸುಜುಕಿ ಎರ್ಟಿಗಾ
ಮಾರುತಿ ಎರ್ಟಿಗಾ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಾರು ಹೊಸ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಹೊಸ 6-ಸ್ಪೀಡ್ ಎಟಿ ಗೇರ್‌ಬಾಕ್ಸ್ ಅನ್ನು ಹೊಂದಿರುತ್ತದೆ. ಎಂಜಿನ್ ಪರಿಭಾಷೆಯಲ್ಲಿ ಈ ಕಾರು 105hp, 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ, ಇದು DualJet ತಂತ್ರಜ್ಞಾನವನ್ನು ಹೊಂದಿದೆ.

ಇದನ್ನೂ ಓದಿ: Mahindra Bolero Luxury Camper: ಮಹೀಂದ್ರಾ ಜೀಪ್‌ನಲ್ಲೇ ಅಡಿಗೆ, ಊಟ, ಸ್ನಾನ, ನಿದ್ದೆ, ಶೌಚ! ಐಷಾರಾಮಿ ಕಾರು ಭಾರತದಲ್ಲೂ ಬಿಡುಗಡೆ

MG ZS EV facelift
MG ಮೋಟಾರ್ ಭಾರತದಲ್ಲಿ 2022 MG ZS EV ಫೇಸ್‌ಲಿಫ್ಟ್ ಅನ್ನು ಶೀಘ್ರದಲ್ಲೇ ಪರಿಚಯಿಸಲು ಸಿದ್ಧವಾಗಿದೆ. ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರು ಮಾರ್ಚ್ 7, 2022 ರಂದು ಬಿಡುಗಡೆಯಾಗಲಿದೆ. ಈ ಕಾರು ಕಳೆದ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ MG ZS EV ಯಂತೆಯೇ ಅದೇ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬ ನಿರೀಕ್ಷೆಯಿದೆ. 2022 MG ZS EV ಫೇಸ್‌ಲಿಫ್ಟ್ ಗುಜರಾತ್‌ನ ಹಲೋಲ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಾಗಿದೆ.

2022 MG ZS EV 51kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಲಿದ್ದು, ಇದು ಒಂದೇ ಚಾರ್ಜ್‌ನಲ್ಲಿ 450 ಕಿಲೋಮೀಟರ್‌ಗಿಂತ ಹೆಚ್ಚು ಪ್ರಯಾಣ ಮಾಡಬಹುದಾಗಿದೆ. MG ZS EV ಯ ಪ್ರಸ್ತುತ ಮಾದರಿಯು 141 hp ಶಕ್ತಿಯನ್ನು ಮತ್ತು 353 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. MG ZS EV ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್‌ನಿಂದ (PMSM) ಚಾಲಿತವಾಗಿದೆ. 2022 MG ZS EV ಫೇಸ್‌ಲಿಫ್ಟ್ 22 ಲಕ್ಷದಿಂದ 25 ಲಕ್ಷದವರೆಗೆ ದೊರೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: Hero Electric Scooter Vida: ಹೀರೋ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್! ನಿಮ್ಮ ಬ್ಯುಸಿನೆಸ್‌ಗೂ ಹೀರೋ ಫಂಡ್ ಪಡೆಯಲು ಅವಕಾಶ

(Cars Launching March 2022 Toyota Glanza facelift Maruti Ertiga and many more)

Comments are closed.