Google Darker Dark Mode: ಗೂಗಲ್ ಡಾರ್ಕ್ ಮೋಡ್‌ನಲ್ಲಿ ಇನ್ನೊಂದು ಡಾರ್ಕ್ ಮೋಡ್ ಬರಲಿದೆ!

ಟೆಕ್ ದೈತ್ಯ ಗೂಗಲ್ ಆಂಡ್ರಾಯ್ಡ್ (Android Devices) ಸಾಧನಗಳಲ್ಲಿನ ಹುಡುಕಾಟಕ್ಕೆ ಬಳಸುವ ಅಪ್ಲಿಕೇಶನ್ ಆದ ಗೂಗಲ್ ಕ್ರೋಮ್‌ನಲ್ಲಿನ ಡಾರ್ಕ್ ಮೋಡ್‌ನಲ್ಲಿ (Google Dark Mode) ಇನ್ನೊಂದು ಡಾರ್ಕ್ ಮೋಡ್ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಲು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು ಡೆಸ್ಕ್‌ಟಾಪ್‌ಗಳಲ್ಲಿ ಗೂಗಲ್‌ನ ಪ್ರಸ್ತುತಪಡಿಸಿದ ಪಿಚ್-ಬ್ಲಾಕ್ ಡಾರ್ಕ್ ಮೋಡ್‌ನ ಹೊಸ ಫೀಚರ್‌ಗಿಂತ ಡಾರ್ಕ್ ಮೋಡ್‌ನ ಡಾರ್ಕ್ ಮೋಡ್ ಫೀಚರ್ (Google Darker Dark Mode)ವಿಭಿನ್ನವಾಗಿರಲಿದೆ ಎಂದು ಗೂಗಲ್ ತಿಳಿಸಿದೆ.

ಮೊಬೈಲ್ ಅಪ್ಲಿಕೇಶನ್‌ನಲ್ಲಿ ಗುರುತಿಸಲಾದ ಒಂದು ಸಾಮಾನ್ಯ ಕಡು ಬೂದು ಬಣ್ಣಕ್ಕಿಂತ ಗಾಢವಾಗಿರುತ್ತದೆ. ಆದರೆ ಕಪ್ಪು ಬಣ್ಣವು ಅಷ್ಟು ಗಾಢವಾಗಿರುವುದಿಲ್ಲ ಎಂದು ವರದಿಗಳು ತಿಳಿಸಿವೆ.

Google ನ ಮೊಬೈಲ್ ಅಪ್ಲಿಕೇಶನ್‌ನಲ್ಲಿನ ಹೊಸ ಡಾರ್ಕ್ ಮೋಡ್ ಬ್ಯಾಟರಿ ಬ್ಯಾಕಪ್ ಅವಧಿಯನ್ನು ಉಳಿಸಲು ಬಯಸುವ OLED ಡಿಸ್‌ಪ್ಲೇಗಳನ್ನು ಹೊಂದಿರುವ ಸಾಧನಗಳಿಗೆ ಹೆಚ್ಚು ಆಕರ್ಷಕವಾಗಿರುತ್ತದೆ. ಇಂತಹ ಸಾಧನಗಳಲ್ಲಿ ಡಾರ್ಕ್ ಮೋಡ್ ಅನ್ನು ಹೆಚ್ಚು ಬಳಸಲು ಆದ್ಯತೆ ನೀಡುತ್ತದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Royal Enfield Ride : 36 BSF ಮಹಿಳಾ ಯೋಧರಿಂದ ದೆಹಲಿಯಿಂದ ಕನ್ಯಾಕುಮಾರಿಗೆ ರಾಯಲ್ ಎನ್‌ಫೀಲ್ಡ್ ರೈಡ್

ಗೂಗಲ್ ಕ್ರೋಮ್‌ನ ಹೊಸ ಶೇಡ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗೂಗಲ್‌ನ ಇತ್ತೀಚಿನ 13.8 ಬೀಟಾ ಲಭ್ಯವಿದೆ ಎಂದು ಆಂಡ್ರಾಯ್ಡ್ ಪೊಲೀಸ್ ತಿಳಿಸಿದೆ. ಇದನ್ನು ನೀವು APKMirror ಮೂಲಕ ಪಡೆಯಬಹುದು.  ಇದು Android ಬಳಕೆದಾರರಿಗೆ ತಮ್ಮ ಸಾಧನದಲ್ಲಿ ಸುಲಭವಾಗಿ ಲಭ್ಯವಿಲ್ಲದ ಐಟಂಗಳನ್ನು ಡೌನ್‌ಲೋಡ್ ಮಾಡಲು ಅಥವಾ ಬೀಟಾಗೆ ಸೇರುವ ಮೂಲಕ ಅಧಿಕೃತ ಮಾರ್ಗದಲ್ಲಿ ಬಳಸಲು ಅನುಮತಿ ನೀಡುತ್ತದೆ ಎಂದು ಗೂಗಲ್ ತಿಳಿಸಿದೆ.

ಕಳೆದ ವರ್ಷ ಡೆಸ್ಕ್‌ಟಾಪ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಪರೀಕ್ಷಿಸುತ್ತಿದೆ ಎಂದು ಗೂಗಲ್ ದೃಢಪಡಿಸಿತ್ತು. ನಂತರ, ಕಂಪನಿಯು ತನ್ನ ಡೆಸ್ಕ್‌ಟಾಪ್ ಬಳಕೆದಾರರಿಗಾಗಿ ಫೆಬ್ರವರಿಯಲ್ಲಿ ಗೂಗಲ್ ಸರ್ಚ್‌ಗಾಗಿ ಡಾರ್ಕ್ ಮೋಡ್‌ನ್ನು ಪರಿಚಯಿರುವುದನ್ನು ದೃಢಪಡಿಸಿದೆ ಎಂದು ವರದಿ ಹೇಳಿದೆ.

ಬಳಕೆದಾರರು ತಮ್ಮದೇ ಆದ ಅಪ್ಲಿಕೇಶನ್‌ನ ಹೊಸ ಬಣ್ಣದ ಛಾಯೆ ಅಥವಾ ಶೇಡ್‌ನ್ನು ಪ್ರವೇಶಿಸಬಹುದು. ಆದರೆ ಈ ಹೊಸ ಡಾರ್ಕ್ ಮೋಡ್ ಬಳಕೆದಾರರಿಗೆ ಯಾವಾಗ ಸಿಗುತ್ತದೆ ಎಂಬುದು ಇನ್ನೂ ಖಚಿತಗೊಂಡಿಲ್ಲ.

ಇದನ್ನೂ ಓದಿ: Mahindra Bolero Luxury Camper: ಮಹೀಂದ್ರಾ ಜೀಪ್‌ನಲ್ಲೇ ಅಡಿಗೆ, ಊಟ, ಸ್ನಾನ, ನಿದ್ದೆ, ಶೌಚ! ಐಷಾರಾಮಿ ಕಾರು ಭಾರತದಲ್ಲೂ ಬಿಡುಗಡೆ

(Google Darker Dark Mode for Android smartphones)

Comments are closed.