Best Mileage Scooters : ಸ್ಕೂಟರ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಮೈಲೇಜ್‌ ಕೊಡುವ ಸ್ಕೂಟರ್‌ಗಳು

ಮಹಿಳೆಯರಿಗೆ ದಿನನಿತ್ಯದ ಓಡಾಟಕ್ಕೆ ಹೆಚ್ಚು ಅನುಕೂಲವಾಗುವ ವಾಹನವೆಂದರೆ ಅದು ಸ್ಕೂಟರ್‌ (Scooter). ಮನೆಯ ಕೆಲಸಗಳಿಗೆ, ಆಫೀಸ್‌ ಕೆಲಸಗಳಿಗೆ ಸ್ಕೂಟರ್‌ ಅನ್ನೇ ಅವಲಂಬಿಸಿರುವವರು ಬಹಳ ಜನರಿದ್ದಾರೆ. ಸ್ಕೂಟರ್‌ ನಮ್ಮ ಜೀವನದ ಒಂದು ಭಾಗವೇ ಆಗಿದೆ. ಕಾಲೇಜಿಗೆ ಹೋಗುವ ಹುಡುಗಿಯರಿಗೆ ಮತ್ತು ಕಛೇರಿ, ಗೃಹಕಾರ್ಯಗಳನ್ನು ನಿಭಾಯಿಸುವ ಮಹಿಳೆಯರಿಗೆ ಬಹಳ ಅನುಕೂಲವಾಗುವ ಮತ್ತು ಸಮಯ ಉಳಿಸುವ ವಾಹನ ಇದಾಗಿದೆ. ವಾಹನ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಯ ಸ್ಕೂಟರ್‌ಗಳು ಖರೀದಿಗೆ ಲಭ್ಯವಿದೆ. ಕೆಲವು ಸ್ಕೂಟರ್‌ಗಳು ದುಬಾರಿ ಬೆಲೆಯವಾದರೆ, ಇನ್ನು ಕೆಲವು ಬಜೆಟ್‌ ಬೆಲೆಯಲ್ಲಿ ದೊರಕುತ್ತವೆ. ಆದರೆ, ಪ್ರತಿದಿನ ಸ್ಕೂಟರ್‌ ಅವಲಂಬಿಸಿರುವವರು ಹೆಚ್ಚು ಮೈಲೇಜ್‌ (Best Mileage Scooters) ನೀಡುವ ಸ್ಕೂಟರ್‌ಗಳನ್ನೇ ಇಷ್ಟ ಪಡುತ್ತಾರೆ. ಅದಕ್ಕಾಗಿ ನಾವು ಇಲ್ಲಿ ಕೆಲವು ಉತ್ತಮ ಮೈಲೇಜ್‌ ನೀಡುವ ಮತ್ತು ಬಜೆಟ್‌ ಬೆಲೆಯ ಸ್ಕೂಟರ್‌ಗಳ ಪಟ್ಟಿಯನ್ನು ನೀಡಿದ್ದೇವೆ.

ಚಿತ್ರ ಕೃಪೆ : ಹೀರೋ

ಹೀರೋ ಕಂಪನಿಯ ಹೀರೋ ಮೆಸ್ಟ್ರೋ ಎಡ್ಜ್‌ 125, ಮೈಲೇಜ್‌ ಸ್ಕೂಟರ್‌ಗಳ ಸಾಲಿನಲ್ಲಿ ಸೇರಿಕೊಂಡಿದೆ. ಈ ಸ್ಕೂಟರ್‌ ಪ್ರತಿ ಲೀಟರ್‌ ಪೆಟ್ರೋಲ್‌ಗೆ 65 km ನೀಡುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು ಈ ಸ್ಕೂಟರ್‌ನಲ್ಲಿ 124.6 ಸಿಸಿ ಎಂಜಿನ್ ಅಳವಡಿಸಿದೆ. ಈ ಸ್ಕೂಟರ್ ಅನ್ನು ಅದರ ಆರಂಭಿಕ ಬೆಲೆ 59,000 ರೂ. (ಎಕ್ಸ್‌ ಶೋ ರೂಂ ಬೆಲೆ) ಯಲ್ಲಿ ಖರೀದಿಸಬಹುದಾಗಿದೆ.

ಚಿತ್ರ ಕೃಪೆ :ಯಮಹಾ
ಯಮಹಾದ ಯಮಹಾ ಫ್ಯಾಸಿನೊ 125 ಅತ್ಯುತ್ತಮ ಮೈಲೇಜ್ ಸ್ಕೂಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಸ್ಕೂಟರ್‌ ಪ್ರತಿ ಲೀಟರ್‌ಗೆ 68.75 ಕಿಲೋಮೀಟರ್ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ 125 ಸಿಸಿ ಎಂಜಿನ್ ಹೊಂದಿದೆ. ಇದನ್ನು 77,100 ರೂ. (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಚಿತ್ರ ಕೃಪೆ : ಟಿವಿಎಸ್‌
ಟಿವಿಎಸ್ ಕಂಪನಿ ತಯಾರಿಸಿರುವ ಜೂಪಿಟರ್ ಸ್ಕೂಟರ್ ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಆಗಿದೆ. ಈ ಸ್ಕೂಟರ್ ಪ್ರತಿ ಲೀಟರ್‌ಗೆ 64 km ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಕಂಪನಿಯು ಈ ಸ್ಕೂಟರ್‌ನಲ್ಲಿ 109.7 ಸಿಸಿ ಎಂಜಿನ್ ಅಳವಡಿಸಿದೆ. ಈ ಸ್ಕೂಟರ್‌ನ ಆರಂಭಿಕ ಬೆಲೆ 53,741 ರೂ. (ಎಕ್ಸ್ ಶೋರೂಂ) ನಲ್ಲಿ ಖರೀದಿಸಬಹುದಾಗಿದೆ.

ಚಿತ್ರ ಕೃಪೆ : ಹೊಂಡಾ
ಮೈಲೇಜ್ ಸ್ಕೂಟರ್ ಪಟ್ಟಿಯಲ್ಲಿ ಹೋಂಡಾ ಕಂಪನಿಯ ಹೋಂಡಾ ಆಕ್ಟಿವಾ 125 ಸ್ಕೂಟರ್ ಸಹ ಸೇರಿದೆ. ಈ ಸ್ಕೂಟರ್ ಪ್ರತಿ ಲೀಟರ್‌ಗೆ 60 kmವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್‌ನಲ್ಲಿ ಕಂಪನಿಯು 123.97 ಸಿಸಿ ಎಂಜಿನ್ ನೀಡಿದೆ. ಇದನ್ನು 77,062 ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಚಿತ್ರ ಕೃಪೆ : ಟಿವಿಎಸ್‌
ಮೈಲೇಜ್ ಸ್ಕೂಟರ್ ಪಟ್ಟಿಯಲ್ಲಿ ಟಿವಿಎಸ್ ಕಂಪನಿಯ ಜೂಪಿಟರ್ ಹೆಸರಿನ ಮತ್ತೊಂದು ಸ್ಕೂಟರ್‌ ಸ್ಥಾನಪಡೆದುಕೊಂಡಿದೆ. ಆದರೆ ಇದು ಜೂಪಿಟರ್‌ 125 ಸ್ಕೂಟರ್. ಕಂಪನಿಯು ಈ ಸ್ಕೂಟರ್‌ನಲ್ಲಿ 124.8 ಸಿಸಿ ಎಂಜಿನ್ ಅಳವಡಿಸಿದೆ. ಈ ಸ್ಕೂಟರ್ ಪ್ರತಿ ಲೀಟರ್‌ಗೆ 57.27 km ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ ಅನ್ನು 82,450 ರೂ. (ಎಕ್ಸ್ ಶೋ ರೂಂ) ಬೆಲೆಗಳಲ್ಲಿ ಖರೀದಿಸಬಹುದಾಗಿದೆ.

ಇದನ್ನೂ ಓದಿ : Which Car is Best : ಯಾವ ಕಾರ್‌ ಬೆಸ್ಟ್‌ ? ಪೆಟ್ರೋಲ್‌, ಡೀಸಲ್‌, ಹೈಬ್ರಿಡ್‌, CNG ಅಥವಾ EV?

ಇದನ್ನೂ ಓದಿ : Best Mileage Cars : ಈ ಕಾರುಗಳು ನೋಡ್ಲಿಕ್ಕಷ್ಟೇ ಸೂಪರ್‌ ಅಲ್ಲ, ಮೈಲೇಜ್‌ನಲ್ಲೂ ಸೂಪರ್‌; ಯಾವ ಕಾರುಗಳು ಅಂತೀರಾ…

(Do you want to buy a scooter? Here are the best Best Mileage Scooters.)

Comments are closed.