Ducati DesertX : ಅಡ್ವೆಂಚರ್‌ ಪ್ರಿಯರ ಅಚ್ಚುಮೆಚ್ಚಿನ ಬೈಕ್‌ ಡುಕಾಟಿ ಈಗ ಡೆಸರ್ಟ್‌ ಎಕ್ಸ್‌ ಅನ್ನು ಪರಿಚಯಿಸಿದೆ

ಪ್ರೀಮಿಯಂ ಬೈಕ್‌ಗಳ ತಯಾರಿಕಾ ಕಂಪನಿ ಡುಕಾಟಿ ಭಾರತದಲ್ಲಿ ತನ್ನ ಪ್ರೀಮಿಯಂ ಬೈಕ್‌ ಡುಕಾಟಿ ಡೆಸರ್ಟ್‌ಎಕ್ಸ್‌ (Ducati DesertX) ಅನ್ನು ಲಾಂಚ್‌ ಮಾಡಿದೆ. ಕಂಪನಿಯು ಇದನ್ನು 17.91 ಲಕ್ಷ ರೂ. (ಎಕ್ಸ್‌ ಶೋ ರೂಂ) ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಇದು ಅಡ್ವೆಂಚರ್‌ ಪ್ರಿಯರು ಇಷ್ಟಪಡುವ ಬೈಕ್‌ ಆಗಿದೆ. ಈ ಬೈಕ್ ಆಫ್ ರೋಡ್‌ನಲ್ಲಿಯೂ ಸಹ ಅದ್ಭುತ ಕಾರ್ಯಕ್ಷಮತೆಯನ್ನು ಕೊಡಲಿದೆ. ಇದರ ಮುಂಭಾಗದ ಚಕ್ರವು 21 ಇಂಚು ಮತ್ತು ಹಿಂದಿನ ಚಕ್ರವು 18 ಇಂಚಗಳದ್ದಾಗಿದೆ. ಇದು 250 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಕಂಪನಿಯು ಈ ಬೈಕ್‌ಗೆ 4 ವರ್ಷಗಳ ವಾರಂಟಿಯನ್ನು ಸಹ ನೀಡುತ್ತಿದೆ.

ಡುಕಾಟಿ ಡೆಸರ್ಟ್‌ ಎಕ್ಸ್‌ನ ಎಂಜಿನ್ ಹೇಗಿದೆ?
ಈಗ ಬಿಡುಗಡೆಯಾಗಿರುವ ಬೈಕ್‌, ವಾಟರ್ ಕೂಲ್ಡ್ 937 ಸಿಸಿ ಡೆಸ್ಮೊಡ್ರೊಮಿಕ್ 11° ಟೆಸ್ಟಾಸ್ಟ್ರೆಟ್ಟಾ ಎಂಜಿನ್‌ನಿಂದ ಚಾಲಿತವಾಗುತ್ತದೆ. ಇದರ ಎಂಜಿನ್ 110hp ಶಕ್ತಿಯನ್ನು ನೀಡುತ್ತದೆ ಮತ್ತು 92nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್ 202 ಕೆಜಿ ತೂಗುತ್ತದೆ. 15000 ಕಿಲೋಮೀಟರ್‌ಗಳ ನಂತರ ಎಂಜಿನ್‌ನಲ್ಲಿ ತೈಲವನ್ನು ಬದಲಾಯಿಸಬೇಕಾಗುವುದು. ಪ್ರತಿ 30 ಸಾವಿರ ಕಿಮೀಗಳಿಗೆ ವಾಲ್ವ್ ಕ್ಲಿಯರೆನ್ಸ್ ಮಾಡಹುದು. ಅಂದರೆ ಇದನ್ನು ಮೇಲಿಂದ ಮೇಲೆ ಸರ್ವೀಸ್‌ ಮಾಡಿಸುವ ಅಗತ್ಯವಿಲ್ಲ.ಈ ಬೈಕ್‌ನ ಇಂಧನ ಟ್ಯಾಂಕ್ ಸಾಮರ್ಥ್ಯವು 8 ಲೀಟರ್ ಆಗಿದೆ.

ಪ್ರೀಮಿಯಂ ಬೈಕ್ ಡುಕಾಟಿ ಡೆಸರ್ಟ್‌ಎಕ್ಸ್ 6 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದರಲ್ಲಿ 5 ಇಂಚಿನ ಬಣ್ಣದ ಟಿಎಫ್‌ಟಿ ಹಾಗೂ ಸಂಪೂರ್ಣ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಡೆಸರ್ಟ್‌ ಎಕ್ಸ್‌, ಎಲ್ಲಾ ಡುಕಾಟಿಗಳಂತೆ, ಎಲ್ಲಾ ಪರಿಸ್ಥಿತಿಗಳಲ್ಲಿ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಗುರಿಯನ್ನು ಹೊಂದಿರುವ ಸುಧಾರಿತ ಎಲೆಕ್ಟ್ರಾನಿಕ್ ಸಾಧನಗಳನ್ನು ಹೊಂದಿದೆ. ಬೈಕಿನ ಸೀಟ್‌ನ ಎತ್ತರವು 845mm ನಿಂದ 875mm ವರೆಗೆ ಇರುತ್ತದೆ. ಇದಲ್ಲದೇ ಟ್ರಾಕ್ಷನ್ ಕಂಟ್ರೋಲ್, ವೀಲಿ ಕಂಟ್ರೋಲ್, ಇಂಜಿನ್ ಬ್ರೇಕ್ ಕಂಟ್ರೋಲ್, ಕಾರ್ನರ್ ಮಾಡುವ ಎಬಿಎಸ್, ಕ್ವಿಕ್ ಶಿಫ್ಟರ್ ಅಪ್ ಅಂಡ್ ಡೌನ್, ಕ್ರೂಸ್ ಕಂಟ್ರೋಲ್ ಮುಂತಾದ ಫೀಚರ್ ಗಳು ಬೈಕ್ನನಲ್ಲಿವೆ.

ಇದನ್ನೂ ಓದಿ : IPL 2023 mini auction : ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ, ಆದ್ರೂ ಐಪಿಎಲ್ ನಲ್ಲಿ ದುಬಾರಿ ಬೆಲೆಗೆ ಮಾರಾಟವಾಗ್ತಾರೆ ಈ ಆಟಗಾರರು

ಇದನ್ನೂ ಓದಿ : Amazon India Smartphone Upgrade Day Sale ನಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್‌…

(Ducati DesertX motorcycle launched n India what is the specification of the bike)

Comments are closed.