Zika Virus : ರಾಜ್ಯದಲ್ಲಿ ಮೊದಲ ಝೀಕಾ ವೈರಸ್‌ ಸೋಂಕು ದೃಢ

ರಾಯಚೂರು : ರಾಜ್ಯದಲ್ಲಿ ಬದಲಾಗುತ್ತಿರುವ ಹವಮಾನದಿಂದಾಗಿ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಶೀತ, ಜ್ವರದಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ಮೊದಲ ಬಾರಿಗೆ ಝೀಕಾ ವೈರಸ್‌ ಸೋಂಕು (Zika Virus) ಪತ್ತೆಯಾಗಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್‌ ಬಹಳಷ್ಟು ಅಪಾಯಕಾರಿ ಆಗಿದೆ.

ಸದ್ಯ ರಾಯಚೂರು ತಾಲೂಕಿನ ಮಾನ್ವಿ ಐದು ವರ್ಷದ ಬಾಲಕಿಯಲ್ಲಿ ಈ ಝೀಕಾ ವೈರಸ್‌ ಸೋಂಕು ದೃಢ ಪಟ್ಟಿರುತ್ತದೆ. ಕಳೆದ 15ದಿನಗಳಿಂದ ಜ್ವರ, ವಾಂತಿ, ಭೇದಿಯಿಂದ ಬಾಲಕಿ ಮಾನ್ವಿ ಬಳಲುತ್ತಿದ್ದು, ಆಕೆಯ ಪೋಷಕರು ಮೊದಲು ಸಿಂಧನೂರು ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕ್ಸಿತ್ಸೆಯನ್ನು ನೀಡಿದ್ದಾರೆ. ಆದರೆ ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಆಕೆಗೆ ಡೆಂಘೀ ಜ್ವರ ಇದೆ ಎನ್ನುವ ಹಿನ್ನಲೆಯಲ್ಲಿ ವಿಮ್ಸ್‌ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.

ಇದನ್ನೂ ಓದಿ : Mandous Cyclone Effect : ಮಾಂಡೌಸ್ ಚಂಡಮಾರುತ ಎಫೆಕ್ಟ್ : ರಾಜ್ಯದಲ್ಲಿ ಚಳಿಗಾಳಿ, ಎಚ್ಷರಿಕೆ ಕೊಟ್ಟ ಆರೋಗ್ಯ‌ ಸಚಿವ

ಇದನ್ನೂ ಓದಿ : Karnataka weather report: ಚಳಿಗೆ ಕರ್ನಾಟಕ ತತ್ತರ : ಡಿಸೆಂಬರ್ 16ರ ವರೆಗೆ ಮಳೆ ಮುಂದುವರಿಕೆ, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಇದನ್ನೂ ಓದಿ : ಮಾಂಡೌಸ್ ಚಂಡಮಾರುತ ನಿರಂತರ ಮಳೆ : ಶಾಲೆಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಮೊದಲ ಝೀಕಾ ವೈರಸ್‌ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಬಾಲಕಿಯ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚಿಸಿದ್ದಾರೆ. ಇನ್ನೂ ಝೀಕ್‌ ವೈರಸ್‌ ಸೋಂಕು ಬಗ್ಗೆ ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಝೀಕ್‌ ವೈರಸ್‌ ಸೋಂಕಿನ ಬಗ್ಗೆ ಸಂಜೆ ಪ್ರತ್ಯೇಕ ಮಾರ್ಗಸೂಚಿ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸಚಿವ ಸುಧಾಕರ್‌ ತಿಳಿಸಿದ್ದಾರೆ.

First Zika virus infection confirmed in the state

Comments are closed.