Low Height Scooters : ಕಡಿಮೆ ಎತ್ತರವಿರುವವರಿಗಾಗಿ ಇಲ್ಲಿದೆ ನೋಡಿ ಕಡಿಮೆ ಎತ್ತರದ ಸ್ಕೂಟರ್‌ಗಳು

ದೇಶೀಯ ಮಾರುಕಟ್ಟೆಯಲ್ಲಿ ಯಾವ ರೀತಿಯ ಸ್ಕೂಟರ್‌ (Scooter) ಗಳ ಕ್ರೇಜ್ ಇದೆ ಎಂದು ನೋಡಿ ತಯಾರಿಸಲಾಗುತ್ತದೆ. ಆದರೆ ಕೆಲವರು ಸಾಮಾನ್ಯ ಎತ್ತರಕ್ಕಿಂತ ಸ್ವಲ್ಪ ಕುಳ್ಳಗಿರುತ್ತಾರೆ.ಅಂತಃವರು ಸ್ಕೂಟರ್‌ ಓಡಿಸಲು ಕಷ್ಟಪಡುತ್ತಾರೆ. ಕಾಲು ಸರಿಯಾಗಿ ನೆಲಕ್ಕೆ ಸಿಗದೇ ಬ್ಯಾಲೆನ್ಸ್‌ ಮಾಡಲು ಕಷ್ಟಪಡುತ್ತಾರೆ. ಅವರಿಗಾಗಿ ಕೆಲವು ಕಡಿಮೆ ಎತ್ತರದ ಸ್ಕೂಟರ್‌ಗಳ (Low Height Scooters) ಪರಿಚಯ ಇಲ್ಲಿದೆ. ಕಡಿಮೆ ಎತ್ತರದ ಸ್ಕೂಟರ್‌ ಖರೀದಿಸಿ, ಸ್ಕೂಟರ್‌ ಓಡಿಸಬೇಕೆಂಬ ಆಸೆ ಈಗ ಪೂರೈಸಿಕೊಳ್ಳಿ.

ಕಡಿಮೆ ಎತ್ತರವಿರುವ ಸ್ಕೂಟರ್‌ ಪಟ್ಟಿಯಲ್ಲಿ ಮೊದಲ ಹೆಸರು TVS ನ ಜೆಸ್ಟ್‌ 110 ಸ್ಕೂಟರ್ ಆಗಿದೆ. ಇದು 760 mm ಎತ್ತರದೊಂದಿಗೆ ಬರುತ್ತದೆ. ಇದನ್ನು 73,036 ರೂ. ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಸಬಹುದು.

ಹೀರೋನ ಪ್ಲೆಷರ್ ಪ್ಲಸ್ ಸ್ಕೂಟರ್ ಕಡಿಮೆ ಎತ್ತರವಿರುವ ಸ್ಕೂಟರ್‌ನ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಸ್ಕೂಟರ್ 765 ಎಂಎಂ ಎತ್ತರದೊಂದಿಗೆ ಬರುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆ 68,368 ರೂ. ಆಗಿದೆ.

ಹೋಂಡಾದ ಹೋಂಡಾ ಆಕ್ಟಿವಾ ಮತ್ತು ಹೋಂಡಾ ಆಕ್ಟಿವಾ 125 ಸ್ಕೂಟರ್‌ಗಳು ಮೂರನೇ ಸ್ಥಾನದಲ್ಲಿವೆ. ಇದು 765 ಎಂಎಂ ಎತ್ತರದೊಂದಿಗೆ ಬರುತ್ತದೆ. ಸ್ಟ್ಯಾಂಡರ್ಡ್ ಆಕ್ಟಿವಾ ಬೆಲೆ 75,347 ರೂ., ಆಕ್ಟಿವಾ 125 ಎಕ್ಸ್ ಶೋರೂಂ ಬೆಲೆ 78,920 ರೂ. ಆಗಿದೆ.

ಕಡಿಮೆ ಎತ್ತರದ ಸ್ಕೂಟರ್‌ಗಳ ಪಟ್ಟಿಯಲ್ಲಿ ಟಿವಿಎಸ್‌ ನ ಜುಪಿಟರ್‌ ಕೂಡಾ ಸ್ಥಾನ ಪಡೆದುಕೊಂಡಿದೆ. ಟಿವಿಎಸ್ ಜುಪಿಟರ್ ಮತ್ತು ಜುಪಿಟರ್ 125, ಈ ಸ್ಕೂಟರ್ 765 ಎಂಎಂ ಎತ್ತರದೊಂದಿಗೆ ಬರುತ್ತದೆ. ಅವುಗಳ ಎಕ್ಸ್ ಶೋ ರೂಂ.ಬೆಲೆ ಕ್ರಮವಾಗಿ 71,390 ರೂ. ಮತ್ತು 82,825 ರೂ.

ಹೋಂಡಾದ ಗ್ರಾಜಿಯಾ 125 ಸ್ಕೂಟರ್ ಸಹ ಕಡಿಮೆ ಎತ್ತರದ ಸ್ಕೂಟರ್‌ ಪಟ್ಟಿಯಲ್ಲಿದೆ. ಈ ಸ್ಕೂಟರ್ 765 ಎಂಎಂ ಎತ್ತರದೊಂದಿಗೆ ಬರುತ್ತದೆ. ಇದರ ಎಕ್ಸ್‌ ಶೋ ರೂಂ ಬೆಲೆ 82,520 ರೂ ಆಗಿದೆ.

ಇದನ್ನೂ ಓದಿ : Citroen C3 Shine : ಸಿಟ್ರೋಯಿನ್‌ C3 ಶೈನ್‌, ಮಾರುತಿ ಸ್ವಿಫ್ಟ್‌ ಮತ್ತು ಟಾಟಾ ಪಂಚ್‌ ಹೋಲಿಕೆ; ಯಾವುದು ಖರೀದಿಗೆ ಬೆಸ್ಟ್‌…

ಇದನ್ನೂ ಓದಿ : Alto K10 Vs Kwid : 5 ಲಕ್ಷದೊಳಗೆ ಖರೀದಿಸಬಹುದಾದ ಎರಡು ಕಾರುಗಳು; ಅಲ್ಟೊ ಕೆ10 Vs ಕ್ವಿಡ್‌

(ಚಿತ್ರ ಕೃಪೆ : ಹೋಂಡಾ, ಹೀರೋ, ಟಿವಿಎಸ್‌ ವೆಬ್‌ ಸೈಟ್‌)

(Here are some Low Height Scooters. Now you can buy one of these two-wheelers and enjoy the ride)

Comments are closed.