Blue Aadhaar Card : ಏನಿದು ಬ್ಲೂ ಆಧಾರ್‌ ಕಾರ್ಡ್‌, ಬಾಲ ಆಧಾರ್‌ ಕಾರ್ಡ್‌ ಬಗ್ಗೆ ನಿಮಗೆಷ್ಟು ಗೊತ್ತು ?

ನವದೆಹಲಿ : ಸರಕಾರಿ ಪ್ರಯೋಜನ ಪಡೆಯಬೇಕಾದ್ರೆ ಆಧಾರ್‌ ಕಾರ್ಡ್‌ ಪಡೆಯುವುದು ಕಡ್ಡಾಯ. ಹುಟ್ಟಿದ ಮಕ್ಕಳಿಗೆ ಆಧಾರ್‌ ಮಾಡಿಸುವುದು ಕಡ್ಡಾಯ. ಇದೀಗ ವಯಸ್ಕರು ಹಾಗೂ ಮಕ್ಕಳಿಗೆ ಮಾಡಿಸುವ ಆಧಾರ್‌ ಕಾರ್ಡ್‌ನಲ್ಲಿ ಎರಡು ವಿಧಗಳಿವೆ. ಸಣ್ಣ ಮಕ್ಕಳಿಗೆ ಬ್ಲೂ ಕಲರ್‌ ಆಧಾರ್‌ ಕಾರ್ಡ್‌ ಮಾಡಿಸಲಾಗುತ್ತಿದ್ದು, ಇಂತಹ ಆಧಾರ್‌ ಕಾರ್ಡ್‌ನ್ನು ಬಾಲ ಆಧಾರ್‌ (Blue Aadhaar Card) ಎಂದೂ ಕರೆಯಲಾಗುತ್ತದೆ. ಅಷ್ಟಕ್ಕೂ ವಯಸ್ಕರ ಆಧಾರ್‌ ಕಾರ್ಡ್‌ಗೂ ಬಾಲ ಆಧಾರ್‌ ಕಾರ್ಡ್‌ಗೂ ಇರುವ ವ್ಯತ್ಯಾಸ ನಿಮಗೆ ಗೊತ್ತಿದೆಯಾ ?

ಹುಟ್ಟಿದ ಮಗುವಿಗೆ ವರ್ಷ ತುಂಬುವುದರೊಳಗೆ ಉಚಿತವಾಗಿ ಮಾಡಿಸಬಹುದಾದ ಈ ಬ್ಲೂ ಆಧಾರ್ ಕಾರ್ಡ್​ಗೆ ಮಗುವಿನ ಫಿಂಗರ್ ಪ್ರಿಂಟ್, ಕಣ್ಣಿನ ಸ್ಕ್ಯಾನ್ ಇತ್ಯಾದಿ ಬಯೋಮೆಟ್ರಿಕ್ ಮಾಹಿತಿಯ ಅಗತ್ಯ ಇರುವುದಿಲ್ಲ. ಇದು ಮಗುವಿನ ವಯಸ್ಸು 5 ವರ್ಷ ದಾಟಿದ ಬಳಿಕ ಅದರ ಆಧಾರ್ ಕಾರ್ಡ್​ನಲ್ಲಿ ಬಯೋಮೆಟ್ರಿಕ್ ಮಾಹಿತಿಗೆ ಸೇರಿಸಬೇಕಾಗುತ್ತದೆ. ಅಂದರೆ ಬಾಲ್ ಆಧಾರ್ ಕಾರ್ಡ್ ಹೊಂದಿರುವ ಮಗು 5 ವರ್ಷ ವಯಸ್ಸು ದಾಟುತ್ತಲೇ ಆಧಾರ್ ಕೇಂದ್ರಕ್ಕೆ ಹೋಗಿ ಅದರ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್​ನ ಬಯೋಮೆಟ್ರಿಕ್ ಮಾಹಿತಿಯನ್ನು ಅಗತ್ಯವಾಗಿ ಅಪ್​ಡೇಟ್ ಮಾಡಿಸಬೇಕಾಗಿದೆ.

ಬಾಲ್ ಆಧಾರ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳ ವಿವರ :

  • ಭಾರತೀಯ ಪ್ರತಿಯೊಬ್ಬ ನಾಗರಿಕರಿಗೂ ಆಧಾರ್ ಕಾರ್ಡ್ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಹಾಗಾಗಿ ಇದೀಗ 5 ವರ್ಷದೊಳಗಿನ ಮಗುವಿಗೂ ಇದು ಅಗತ್ಯ ಬೀಳಬಹುದು. ಹೀಗಾಗಿ, ಬಹಳ ಜನರು ಈಗ ಮಗು ಒಂದು ವರ್ಷ ತುಂಬುವುದರೊಳಗೆ ಬ್ಲೂ ಆಧಾರ್ ಕಾರ್ಡ್ ಮಾಡಿಸುತ್ತಾರೆ.
  • ಬಾಲ್ ಆಧಾರ್ ಕಾರ್ಡ್ ಮಾಡಿಸಬೇಕಾದರೆ ಮಗುವಿನ ಜನನ ಪ್ರಮಾಣಪತ್ರ ನೀಡಬೇಕು. ಹಾಗೆಯೇ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರ ಆಧಾರ್ ಕಾರ್ಡ್ ಬೇಕಾಗುತ್ತದೆ. ಅಷ್ಟೇ ಅಲ್ಲದೇ ಬಾಲ್ ಆಧಾರ್ ಕಾರ್ಡ್​ಗೆ ಒಬ್ಬ ಪೋಷಕರ ಆಧಾರ್ ನಂಬರ್ ಅನ್ನು ಲಿಂಕ್ ಮಾಡಲಾಗುತ್ತದೆ.

ಬಾಲ್ ಆಧಾರ್ ಕಾರ್ಡ್ ಮಾಡಿಸುವ ವಿಧಾನ :

  • ಯುಐಡಿಎಐನ ಅಧಿಕೃತ ವೆಬ್​ಸೈಟ್ ಆದ uidai.gov.in ಗೆ ಲಾಗ್‌ ಇನ್‌ ಆಗಬೇಕು.
  • ಇಲ್ಲಿ ಕಾಣುವ ಆಧಾರ್ ಕಾರ್ಡ್ ರಿಜಿಸ್ಟ್ರೇಶನ್ ಎಂಬ ಲಿಂಕ್ ಕ್ಲಿಕ್ ಮಾಡಬೇಕು.
  • ಮಗುವಿನ ಹೆಸರು, ಪೋಷಕರ ಫೋನ್ ನಂಬರ್, ಇಮೇಲ್ ವಿಳಾಸ ಇತ್ಯಾದಿ ಮಾಹಿತಿ ಭರ್ತಿ ಮಾಡಬೇಕು.
  • ಜೊತೆಗೆ ವಾಸಸ್ಥಳ ವಿಳಾಸ, ವಾಸಸ್ಥಳದ ಪ್ರದೇಶ, ಜಿಲ್ಲೆ, ರಾಜ್ಯ ಇತ್ಯಾದಿ ಡೆಮೋಗ್ರಾಫಿಕ್ ಮಾಹಿತಿ ಭರ್ತಿ ಮಾಡಬೇಕು.
  • ಫಿಕ್ಸೆಡ್ ಅಪಾಯಿಂಟ್ಮೆಂಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
  • ಆಧಾರ್ ಕಾರ್ಡ್​ಗೆ ನೊಂದಣಿ ಮಾಡಲು ನಿಮಗೆ ಬೇಕಾದ ದಿನವನ್ನು ಆಯ್ದುಕೊಳ್ಳಬೇಕು.
  • ನಿಮ್ಮ ಸ್ಥಳಕ್ಕೆ ಹತ್ತಿರ ಇರುವ ಎನ್​ರೋಲ್ಮೆಂಟ್ ಸೆಂಟರ್‌ನ್ನು ಬೇಕಾದರೆ ಆರಿಸಿಕೊಳ್ಳಬಹುದು.
  • ನೀವು ಆಯ್ದುಕೊಂಡ ದಿನದಂದು ಆ ಎನ್​ರೋಲ್​ಮೆಂಟ್ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಮಾಡಿಸಬಹುದು.
  • ಆನ್​ಲೈನ್​ನಲ್ಲಿ ಬೇಡ ಎನ್ನುವುದಾದರೆ ಎನ್​ರೋಲ್​ಮೆಂಟ್ ಕೇಂದ್ರಕ್ಕೆ ಹೋಗಿ ಅಲ್ಲಿ ನೊಂದಣಿ ದಿನಾಂಕವನ್ನು ಮುಂಗಡವಾಗಿ ಪಡೆದು ಬರಬಹುದು.

ಇದನ್ನೂ ಓದಿ : ICICI Bank data leak : ಕ್ರೆಡಿಟ್ ಕಾರ್ಡ್ ನಿಂದ ಪಾಸ್ ಪೋರ್ಟ್ ವರೆಗೆ ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆ!

ಇದನ್ನೂ ಓದಿ : ಚಿನ್ನ ಖರೀದಿದಾರರಿಗೆ ಶಾಕಿಂಗ್‌ ನ್ಯೂಸ್‌ : ಮತ್ತೆ ಚಿನ್ನ, ಬೆಳ್ಳಿ ದರದಲ್ಲಿ ಬಾರೀ ಏರಿಕೆ

ಬಾಲ್ ಆಧಾರ್ ಕಾರ್ಡ್ ಎಷ್ಟು ಮುಖ್ಯ ?

  • ಬಾಲ್ ಆಧಾರ್ ಕಾರ್ಡ್ ಅಥವಾ ಬ್ಲೂ ಆಧಾರ್ ಕಾರ್ಡ್ ಕೂಡ ಮಗುವಿನ ಐಡಿ ಪ್ರೂಫ್ ಆಗಿರುತ್ತದೆ.
  • ಸಾಮಾನ್ಯವಾಗಿ ಇತರೆ ಆಧಾರ್ ಕಾರ್ಡ್​ನಂತೆ ಬ್ಲೂ ಆಧಾರ್ ಕಾರ್ಡ್ ಕೂಡ 12 ಅಂಕಿಗಳನ್ನು ಒಳಗೊಂಡ ಗುರುತಿನ ಚೀಟಿಯಾಗಿರುತ್ತದೆ.
  • ವಿಶೇಷವಾಗಿ, 5 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಬ್ಲೂ ಆಧಾರ್ ಕಾರ್ಡ್ ಕೊಡಲಾಗುತ್ತದೆ.

What is Blue Aadhaar Card, How much do you know about Bala Aadhaar Card?

Comments are closed.