Hero Electric Scooter Vida: ಹೀರೋ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್! ನಿಮ್ಮ ಬ್ಯುಸಿನೆಸ್‌ಗೂ ಹೀರೋ ಫಂಡ್ ಪಡೆಯಲು ಅವಕಾಶ

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ ತನ್ನ ಹೊಸ ಮತ್ತು ಮುಂಬರುವ ಎಲೆಕ್ಟ್ರಿಕ್ ವಾಹನ ಬ್ರಾಂಡ್ ಅನ್ನು VIDA ಎಂದು ಘೋಷಿಸಿದೆ. ಕಂಪನಿಯು ಲೋಗೋದ ಮೊದಲ ಚಿತ್ರವನ್ನು (Hero Electric Scooter Vida) ಸಹ ಬಹಿರಂಗಪಡಿಸಿದೆ, ಇದು ಹೊಸ ಬ್ರ್ಯಾಂಡಿಂಗ್ ಹೇಗಿರುತ್ತದೆ ಎಂಬುದನ್ನು ತೋರಿಸುತ್ತದೆ. VIDA ಅಧಿಕೃತವಾಗಿ ಘೋಷಣೆಯಾಗಿದ್ದು ಮಾರುಕಟ್ಟೆಯಲ್ಲಿ Hero MotoCorp ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನದೊಂದಿಗೆ ಹೊಗೆರಹಿತವಾಗಿ ಧೂಳೆಬ್ಬಿಸುವ ಮೂಲಕ ಪರಿಚಯಿಸಲಾಗುವುದು ಎಂದು ಹೀರೋ ಸೂಚಿಸಿದೆ.

Hero MotoCorp US$100 ಮಿಲಿಯನ್ ಗ್ಲೋಬಲ್ ಸಸ್ಟೈನಬಿಲಿಟಿ ಫಂಡ್ ಅನ್ನು ಸಹ ಘೋಷಿಸಿದೆ. ಈ ನಿಧಿಯು BML ಮುಂಜಾಲ್ ವಿಶ್ವವಿದ್ಯಾನಿಲಯ ಮತ್ತು ಹೀರೋ ಮೋಟೋಕಾರ್ಪ್ ನೇತೃತ್ವದಲ್ಲಿ ಜಾಗತಿಕ ಪಾಲುದಾರಿಕೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಭೂಮಿಯನ್ನು ಕಲುಷಿತ ರಹಿತವಾಗಿ ಮಾಡುವ, ಸಕಾರಾತ್ಮಕ ಪರಿಣಾಮ ಬೀರುವ ಯೋಜನೆಗಳನ್ನು ಹಮ್ಮಿಕೊಳ್ಳಲು ಈ ಜಂಟಿ ಸಹಭಾಗಿತ್ವದಲ್ಲಿ ಯೋಜಿಸಲಾಗಿದೆ. ಪರಿಸರ ಕಲುಷಿತವಾಗುವುದನ್ನು ತತಡೆಗಟ್ಟುವಂತಹ ಯೋಜನೆಗಳನ್ನು ರೂಪಿಸುವ 10,000 ಕ್ಕೂ ಹೆಚ್ಚು ಉದ್ಯಮಿಗಳನ್ನು ಪೋಷಿಸುವ ಉದ್ದೇಶವನ್ನು ಹೀರೋ ಈ ಯೋಜನೆಯಡಿ ಹೊಂದಿದೆ.

ಇದನ್ನೂ ಓದಿ:Top 5 Electric Scooters: ಭಾರತದ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್ ಯಾವುದು?

ಹೊಸ ವಿಡಾ ಎಲೆಕ್ಟ್ರಿಕ್ ಮಾದರಿಯ ಉತ್ಪಾದನೆಯನ್ನು ಭಾರತದ ಚಿತ್ತೂರಿನಲ್ಲಿರುವ ಹೀರೋ ಮೋಟೋಕಾರ್ಪ್‌ನ ಗ್ರೀನ್ ಉತ್ಪಾದನಾ ಘಟಕದಲ್ಲಿ ಮಾಡಲಾಗುತ್ತದೆ. 2022 ರ ನಂತರ ಗ್ರಾಹಕರಿಗೆ ಓಈ ವಾಹನಗಳು ದೊರೆಯಲಿವೆ.  Hero MotoCorp ಹೊಸ ಎಲೆಕ್ಟ್ರಿಕ್ ಸ್ಕೂಟರ್ OLA S1, ಸಿಂಪಲ್ ಒನ್, ಅಥರ್ 450X, ಬಜಾಜ್ ಚೇತಕ್ ಮತ್ತು ಹೆಚ್ಚಿನವುಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಹೊಸ ಸ್ಕೂಟರ್ 12 ಇಂಚಿನ ಮುಂಭಾಗ ಮತ್ತು 10 ಇಂಚಿನ ಹಿಂದಿನ ಚಕ್ರಗಳೊಂದಿಗೆ ಬರಲಿದೆ. ಸದ್ಯ ಹೀರೊದ ಹೊಸ ಸ್ಕೂಟರ್‌ನ ಸೋರಿಕೆಯಾದ ಚಿತ್ರವು ಎಲೆಕ್ಟ್ರಿಕ್ ಸ್ಕೂಟರ್ ಏಕಬದಿಯ ಸ್ವಿಂಗಾರ್ಮ್ ಫ್ಲೈಸ್ಕ್ರೀನ್, ಉದ್ದದ ಸ್ಪ್ಲಿಟ್ ಸೀಟ್ ಇತ್ಯಾದಿಗಳನ್ನು ಹೊಂದಿರುತ್ತದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: Komaki Venice Electric Scooter: ಕೊಮಾಕಿ ಎಲೆಕ್ಟ್ರಿಕ್ ಸ್ಕೂಟರ್, ರೆಟ್ರೋ ಥೀಮ್, 9 ಬಣ್ಣಗಳು, 125ಸಿಸಿ ಎಂಜಿನ್‌ಗೆ ಸರಿಸಮವಾದ ಗಾಡಿ

(Hero Electric Scooter Vida announced 10000 enterpreneurs on ESG solution)

Comments are closed.