Hero Upcoming Electric Scooter : ಮತ್ತೊಂದು ಎಲೆಕ್ಟ್ರಿಕ್‌ ಸ್ಕೂಟರ್ ಬಿಡುಗಡೆಗೆ ತಯಾರಾದ ಹೀರೋ; ಓಲಾಕ್ಕೆ ನೀಡಲಿದೆಯೇ ಸ್ಪರ್ಧೆ…

ಇಲೆಕ್ಟ್ರಿಕ್‌ ಸ್ಕೂಟರ್‌ಗಳ ಹವಾ ಈಗ ಜೋರಾಗಿಯೇ ಇದೆ. ಜೊತೆಗೆ ಜನರ ಮೆಚ್ಚುಗೆಯನ್ನು ಗಳಿಸುತ್ತಿದೆ. ಅದೇ ಕಾರಣಕ್ಕೆ ಆಟೋಮೊಬೈಲ್‌ ಕಂಪನಿಗಳು ಎಲೆಕ್ಟ್ರಿಕ್‌ ಟೂವ್ಹೀಲರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಎಲೆಕ್ಟ್ರಿಕ್‌ ಟೂವ್ಹೀಲರ್‌ಗಳ ಹೆಚ್ಚುತ್ತಿರುವ ಡಿಮ್ಯಾಂಡ್‌ನಿಂದಾಗಿ ಹೀರೋ ತನ್ನ ಹೊಸ ಮತ್ತೊಂದು ಎಲೆಕ್ಟ್ರಿಕ್‌ ಟೂವ್ಹಿಲರ್‌ ಅನ್ನು ಮಾರುಕಟ್ಟೆಗೆ ತರಲಿದೆ (Hero Upcoming Electric Scooter). ಇದರ ಮಾಹಿತಿ ಕಂಪನಿಯು ಸೋಶಿಯಲ್‌ ಮೀಡಿಯಾದಲ್ಲಿ ಟೀಸರ್‌ ನೀಡುವುದರ ಮೂಲಕ ಹೇಳಿದೆ. ಇದು ಓಲಾ, ಟಿವಿಎಸ್‌, ಏಥರ್‌ ನಂತಹ ಕಂಪನಿಯ ಸ್ಕೂಟರ್‌ಗಳಿಗೆ ಸ್ಪರ್ಧೆ ನೀಡಲಿದೆ. ಹೀರೋ ಬಿಡುಗಡೆ ಮಾಡುತ್ತಿರುವ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ನ ವಿಶೇಷತೆ ಏನು ಇಲ್ಲಿದೆ ಓದಿ.

ವೈಶಿಷ್ಟ್ಯಗಳು :

ಕಂಪನಿ ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಶೀಘ್ರದಲ್ಲೇ ಬರಲಿದೆ ಎಂದು ಬರೆಯಲಾಗಿದೆ. ಅದೇ ಟ್ವೀಟ್‌ನಲ್ಲಿ ‘ಇಂಟೆಲಿಜಂಟ್‌ ಮತ್ತು ಸುಸ್ಥಿರ ಚಲನಶೀಲತೆಯ ಹೊಸ ಯುಗ ಪ್ರಾರಂಭವಾಗಲಿದೆ, ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸವಾರಿ ಮಾಡಲು ನೀವು ಸಿದ್ಧರಿದ್ದೀರಾ?’ ಎಂದು ಕಂಪನಿಯ ಪರವಾಗಿ ಬರೆಯಲಾಗಿದೆ. ಮಾಹಿತಿಯ ಪ್ರಕಾರ, ಹೀರೋ ತನ್ನ ಈಗಾಗಲೇ ಅಸ್ತಿತ್ವದಲ್ಲಿರುವ ಹೀರೋ ಆಪ್ಟಿಮಾ ಮಾದರಿಯನ್ನು ನವೀಕರಿಸುವ ಮೂಲಕ ಪ್ರಸ್ತುತಪಡಿಸಬಹುದು. ಆದರೆ, ಅಂತಹ ಯಾವುದೇ ಮಾಹಿತಿಯನ್ನು ಕಂಪನಿ ನೀಡಿಲ್ಲ.

ಟೀಸರ್‌ನಲ್ಲಿ ಕಂಡುಬರುವ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದ ಕೌಲ್‌ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಮಧ್ಯದಲ್ಲಿ ಎಲ್ಇಡಿ ಟರ್ನ್ ಇಂಡಿಕೇಟರ್‌ಗಳ ಜೊತೆಗೆ ಮುಂಭಾಗದ ಡಿಸ್ಕ್ ಬ್ರೇಕ್, ಆರಾಮದಾಯಕ ಸೀಟ್, ದಪ್ಪ ಗ್ರಾಬ್ ರೈಲ್ ಮತ್ತು ನೀಲಿ ಬಣ್ಣದ ಥೀಮ್ ಅನ್ನು ನೋಡಬಹುದು.

ನಾಳೆ ಲಾಂಚ್ ಆಗುವ ನಿರೀಕ್ಷೆ:
ಎಲೆಕ್ಟ್ರಿಕ್ ಟೂವ್ಹೀಲರ್‌ ವಿಭಾಗದ ಹೀರೋ ಮತ್ತೊಂದು ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಮಾಹಿತಿಯ ಪ್ರಕಾರ, ಹೀರೋ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಾಳೆ ಅಂದರೆ ಮಾರ್ಚ್ 15 ರಂದು ಬಿಡುಗಡೆ ಮಾಡಬಹುದು. ಈ ಸ್ಕೂಟರ್‌ನ ಟೀಸರ್ ಅನ್ನು ಕಂಪನಿಯು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ, ಇದರಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಸಣ್ಣ ನೋಟವು ಗೋಚರಿಸುತ್ತದೆ. ಈ ವೀಡಿಯೊ ಕೇವಲ 12 ಸೆಕೆಂಡುಗಳಿದೆ.

ಬೆಲೆ ಎಷ್ಟಿರಬಹುದು?
ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಅದನ್ನುಗಮನದಲ್ಲಿಟ್ಟುಕೊಂಡು ಬೆಲೆ ನಿಗದಿಯಾಗಬಹುದು. ಇದರಿಂದ ಹೀರೋ ಈ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಓಲಾ, ಟಿವಿಎಸ್, ಏಥರ್ ನಂತಹ ಕಂಪನಿಗಳ ಸ್ಕೂಟರ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಬಹುದು.

ಇದನ್ನೂ ಓದಿ : Citroen Discount Offer : ಸಿಟ್ರೊಯೆನ್‌ನ ಆಯ್ದ ಕಾರುಗಳ ಮೇಲೆ ಸಿಗಲಿದೆ 2 ಲಕ್ಷದವರೆಗೆ ಬಂಪರ್‌ ಡಿಸ್ಕೌಂಟ್‌ ಆಫರ್‌

ಇದನ್ನೂ ಓದಿ : Suzuki Car Discount Offers : ಮಾರುತಿ ಸುಜುಕಿ ಕಾರು ಖರೀದಿಸಲು ಸಕಾಲ; ಭಾರಿ ಡಿಸ್ಕೌಂಟ್‌ ಘೋಷಣೆ

Hero Upcoming Electric Scooter. Hero may launch soon its another two wheeler in India)(

Comments are closed.