Hero Xtreme 160R : 1.30 ಲಕ್ಷ ರೂಪಾಯಿಗೆ ಬಿಡುಗಡೆಯಾದ ಹೀರೋ ಎಕ್ಸ್‌ಟ್ರೀಮ್‌ 160R ಸ್ಟೀಲ್ತ್‌ ಎಡಿಷನ್‌ 2.0

ಹೀರೋ ಮೋಟೋಕಾರ್ಪ್‌ (Hero MoroCorp) ಸ್ಟಿಲ್ತ್‌ ಎಡಿಷನ್‌ 2.0 ನ ಎಕ್ಸ್‌ಟ್ರೀಮ್‌ 160R ಬೈಕ್‌ (Hero Xtreme 160R) ಅನ್ನು 1.30 ಲಕ್ಷ ರೂಪಾಯಿಗಳಿಗೆ (ಎಕ್ಸ್‌ ಶೋ ರೂಂ, ದೆಹಲಿ) ಬಿಡುಗಡೆಮಾಡಿದೆ. ಇದು ಬ್ಲೂ ಟೂತ್‌, ಲೈವ್‌ ಲೊಕೇಷನ್‌ ಟ್ರ್ಯಾಕ್‌ಗಳನ್ನು ಬೆಂಬಲಿಸುವ ಹೀರೋ ಕನೆಕ್ಟ್‌ ಟೆಕ್‌ ಅನ್ನು ಹೊಂದಿದೆ. ಕಪ್ಪು ಬಣ್ಣದ ಲಿವೆರಿಯಿಂದ ಕೂಡಿದ್ದು, ಫೋರ್ಕ್ ಬಾಟಮ್‌ಗಳಲ್ಲಿ, ಮೊನೊಶಾಕ್, ಎಂಜಿನ್ ಹೆಡ್, ಪಿಲಿಯನ್ ಫುಟ್‌ರೆಸ್ಟ್ ಹ್ಯಾಂಗರ್‌ಗಳು ಮತ್ತು ಹಿಂಭಾಗದ ಗ್ರ್ಯಾಬ್ ರೈಲ್‌ಗಳಲ್ಲಿ ಕೆಂಪು ಎಸೆಂಟ್‌ ಅನ್ನು ಹೊಂದಿದೆ. ಆದರೆ ಇದು ವಿಶೇಷವಾಗಿ ಇತರ ಎಕ್ಸ್‌ಟ್ರೀಮ್ ಮಾದರಿಗಳಲ್ಲಿ ಇಲ್ಲದ ನಕಲ್ ಗಾರ್ಡ್‌ಗಳನ್ನು ಸಹ ಹೊಂದಿದೆ.

ವೈಶಿಷ್ಟ್ಯತೆಗಳು :
ಸ್ಟೆಲ್ತ್ ಆವೃತ್ತಿಯು, ರೆಗ್ಯುಲರ್‌ ಆವೃತ್ತಿಯ ಎಕ್ಸ್‌ಟ್ರೀಮ್‌ 160R ಗೆ ಯಾಂತ್ರಿಕವಾಗಿ ಹೋಲುತ್ತದೆ. 163cc ಕ್ಷಮತೆಯ ಈ ಬೈಕ್‌, ಸಿಂಗಲ್-ಸಿಲಿಂಡರ್‌ ನ ಈ ಬೈಕ್‌ 15.2hp ಏರ್-ಕೂಲ್ಡ್ ಎಂಜಿನ್ ಮತ್ತು 14Nm ಟಾರ್ಕ್ ಅನ್ನು ಉತ್ಪತ್ತಿ ಮಾಡುತ್ತದೆ. ಎಕ್ಸ್‌ಟ್ರೀಮ್‌ 160R ಸ್ಟೆಲ್ತ್ ಆವೃತ್ತಿಯು 37mm ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಏಳು-ಹಂತದ ಪ್ರಿಲೋಡ್ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಪೆಡೆದುಕೊಂಡಿದೆ. ಮುಂಭಾಗದಲ್ಲಿನ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಏಕ-ಚಾನಲ್ ಎಬಿಎಸ್‌ನೊಂದಿಗೆ ಬ್ರೆಕಿಂಗ್‌ ಕೆಲಸವನ್ನು ನಿರ್ವಹಿಸುತ್ತದೆ. ಇದು 12-ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವಿರುವ ಬೈಕ್‌ 139.5 ಕೆಜಿ ತೂಗುತ್ತದೆ.

ಬೆಲೆ :
ಹೀರೋ ಎಕ್ಸ್‌ಟ್ರೀಮ್‌ 160R ಸ್ಟೀಲ್ತ್‌ ಎಡಿಷನ್‌ 2.0 ಬೈಕ್‌ನ ಬೆಲೆ 1.30 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ, ದೆಹಲಿ). ಇದು ಹಿಂದಿನ ಸ್ಟಿಲ್ತ್ ಆವೃತ್ತಿಗಿಂತ 7,000 ರೂ. ಗಳು ಹೆಚ್ಚು ದುಬಾರಿಯಾಗಿದೆ. ಮತ್ತು ಎಕ್ಸ್‌ಟ್ರೀಮ್‌ 160R ನ ಡ್ಯುಯಲ್ ಡಿಸ್ಕ್ ರೂಪಾಂತರಕ್ಕಿಂತ 9,000 ರೂ. ದುಬಾರಿಯಾಗಿದೆ. TVS ಅಪಾಚೆ RTR 160 4V, ಬಜಾಜ್ ಪಲ್ಸರ್ N160, ಸುಜುಕಿ Gixxer ಮತ್ತು ಯಮಹ FZ-FI ನಂತಹ ಬೈಕ್‌ಗಳಿಗೆ ನೇರ ಸ್ಪರ್ಧೆ ನೀಡಬಲ್ಲದು.

ಇದನ್ನೂ ಓದಿ : Kawasaki W175 : ಭಾರತದಲ್ಲಿ ಬಿಡುಗಡೆಯಾದ ಕವಾಸಕಿ W175 ರೆಟ್ರೊ ಮೋಟಾರ್‌ಸೈಕಲ್‌

ಇದನ್ನೂ ಓದಿ : Hyundai Venue N-Line : ಹುಂಡೈ ವೆನ್ಯೂ Vs ಹುಂಡೈ ವೆನ್ಯೂ ಎನ್‌–ಲೈನ್‌ : ಏನಿದರ ವಿಶೇಷತೆ?

(Hero Xtreme 160R stealth edition 2.0 launched)

Comments are closed.