Kidney stone : ಕಿಡ್ನಿ ಸ್ಟೋನ್‌ಗೆ ಬಾಳೆ ದಿಂಡಿನ ಜ್ಯೂಸ್‌ ರಾಮಾಬಾಣ

ನಿತ್ಯವೂ ಪ್ರತಿಯೊಬ್ಬರು ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದ್ರಲ್ಲೀ ಕಿಡ್ನಿ ಸ್ಟೋನ್‌ (Kidney stone Banana Stem juice) ಸಮಸ್ಯೆ ಸಾಮಾನ್ಯವಾಗಿದೆ. ದೇಹದಲ್ಲಿ ನೀರಿನಾಂಶ ಕಡಿಮೆ ಆಗುವುದ್ದರಿಂದ ಕಿಡ್ನಿ ಸ್ಟೋನ್‌ ಕಾಣಿಸಿಕೊಳ್ಳುತ್ತದೆ. ಇತ್ತೀಚಿಗಿನ ದಿನಗಳಲ್ಲಿ 20 ರಿಂದ 40 ವರ್ಷದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಿಡ್ನಿಯಲ್ಲಿ ಹರಳಾಗುತ್ತದೆ ಇದರಿಂದ ಮೂತ್ರ ಸಂಬಂಧಿ ಸಮಸ್ಯೆಗಳು ಸಾಮಾನ್ಯವಾಗಿದೆ.

ಆದರೆ ಇದನ್ನು ಕಡೆಗಣಿಸಿದ್ದರೆ ಮೂತ್ರಕೋಶದ ಸಮಸ್ಯೆಗೆ ತುತ್ತಾಗುತ್ತೀರಿ. ಇದ್ದರಿಂದ ಮೂತ್ರ ಹೋಗುವಾಗ ಅಸಹನೀಯ ನೋವು ಉಂಟಾಗುತ್ತದೆ. ಹಾಗೆ ಕಿಡ್ನಿ ಸ್ಟೋನ್‌ (Kidney stone)ಹೆಚ್ಚಾದರೆ ಹೊಟ್ಟೆ ತೊಳಿಸಿದಂತಾಗಿ ವಾಂತಿ ಬಂದ ಹಾಗೆ ಆಗುತ್ತದೆ. ಆದರೆ ವಾಂತಿ ಆಗುವುದಿಲ್ಲ. ಬೆನ್ನು ಮತ್ತು ಸೊಂಟದಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರದಲ್ಲಿ ಕೀವು, ರಕ್ತ ಹಾಗೂ ಕಿಡ್ನಿ ಹಾಳಾಗುವ ಸಂಭವ ಕೂಡ ಇರುತ್ತದೆ. ಇದಕ್ಕೆ ಯಾವುದೇ ಅಡ್ಡ ಪರಿಣಾಮ ಬೀರಿದ ಹಾಗೆ ಮನೆಮದ್ದು ತಯಾರಿಸಬಹುದು ಅದು ಹೇಗೆ ಎಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿ (Kidney stone Banana Stem juice ) :

  • ಬಾಳೆ ದಿಂಡು
  • ಬೆಲ್ಲ
  • ನೀರು
  • ಏಲಕ್ಕಿ

ತಯಾರಿಸುವ ವಿಧಾನ :

ಬಾಳೆ ದಿಂಡಿನ ಮೇಲಿನ ಪದರವನ್ನು ತೆಗೆದು ಒಳಗಡೆ ಇರುವ ಬಿಳಿ ಅಂಶವನ್ನು ಸ್ವಚ್ಚ ಮಾಡಿ ಇಟ್ಟುಕೊಳ್ಳಬೇಕು. ನಂತರ ಎರಡರಿಂದ ನಾಲ್ಕು ಲೋಟ ಜ್ಯೂಸ್‌ಗೆ ಬೇಕಾಗುವಷ್ಟು ಬಾಳೆ ದಿಂಡಿನ ಬಿಳಿಅಂಶವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬಿಕೊಂಡು ನಂತರ ಅದಕ್ಕೆ ಬೇಕಾಗುವಷ್ಟು ಬೆಲ್ಲವನ್ನು ಬೆರೆಸಿ ರುಬಿಕೊಳ್ಳಬೇಕು. ರೆಡಿಯಾದ ಜ್ಯೂಸ್‌ಗೆ ಏಲಕ್ಕಿ ಪುಡಿಯನ್ನು ಬೆರೆಸಬೇಕು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಒಂದು ವಾರದ ತನಕ ಕುಡಿಯುವುದರಿಂದ ಕಿಡ್ನಿಯಲ್ಲಿರುವ ಸ್ಟೋನ್‌ ಹೋಗುತ್ತದೆ.

ಇದನ್ನೂ ಓದಿ : ಅತಿಯಾಗಿ ಕಾಡುವ ಒಣ ಕೆಮ್ಮು : ಕಾಳು ಮೆಣಸು ಲಿಂಬೆಯ ಅಕ್ರೂಟ್‌ ರಾಮಬಾಣ

ಇದನ್ನೂ ಓದಿ : ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸುತ್ತೆ ಮೊಳಕೆ ಕಾಳು

ಇದನ್ನೂ ಓದಿ : ಕಸವೆಂದು ಎಸೆಯುವ ತೆಂಗಿನಕಾಯಿ ಜುಟ್ಟಿನಿಂದ ಗ್ಯಾಸ್ಟ್ರಿಕ್‌ಗೆ ಪರಿಹಾರ

ಇದನ್ನೂ ಓದಿ : ಗ್ಯಾಸ್ಟ್ರಿಕ್‌ ಸಮಸ್ಯೆಗೆ ಪುದೀನ ಲೆಮೆನ್‌ ಜ್ಯೂಸ್‌ ಟ್ರೈ ಮಾಡಿ

ಉಪಯೋಗ:

ಬಾಳೆಮರ ಹೆಚ್ಚಾಗಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಬಾಳೆದಿಂಡಿನ ಪದಾರ್ಥವನ್ನು ವರ್ಷಕ್ಕೊಮ್ಮೆ ಆದರೂ ತಿನ್ನಬೇಕು ಎಂದು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಪೊಟ್ಯಾಶಿಯಂ ಅಂಶ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಳೆದಿಂಡನ್ನು ತಿನ್ನುವುದ್ದರಿಂದ ಹೊಟ್ಟೆಯಲ್ಲಿರುವ ಕೂದಲು ಹೊರಬರುತ್ತದೆ. ಇದು ಮಲಬದ್ಧತೆ ಹಾಗೂ ಮೂಲವ್ಯಾಧಿಯನ್ನು ನಿವಾರಿಸುತ್ತದೆ. ಕಿಡ್ನಿ ಸ್ಟೋನ್‌ ಮಾತ್ರವಲ್ಲದೇ ಮೂತ್ರಕೋಶದಲ್ಲಿ ಉತ್ಪತ್ತಿಯಾಗುವ ಕಲ್ಲುಗಳನ್ನು ನಿವಾರಣೆ ಮಾಡುತ್ತದೆ. ಹಾಗೆ ತಲೆ ಕೂದಲು ಉದುರುವುದನ್ನು ಕಡಿಮೆಗೊಳಿಸುತ್ತದೆ.

Banana Stem juice is the best for kidney stones

Comments are closed.