minivan overturned: ಗುಂಟೂರಿನಲ್ಲಿ ಮಿನಿವ್ಯಾನ್‌ ಪಲ್ಟಿ: 4 ಸಾವು, ಒಬ್ಬರ ಸ್ಥಿತಿ ಗಂಭೀರ

ಆಂಧ್ರಪ್ರದೇಶ: (minivan overturned) ಮಿನಿವ್ಯಾನ್‌ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಹದಿನಾರು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಗಾಯಗೊಂಡ ಹದಿನಾರು ಮಂದಿಯಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಬಪ್ತಾಲಾ ನಗರದ ಬಳಿ ಬೆಳಗ್ಗಿನ ಜಾವ ತೀವ್ರ ಮಂಜಿನಿಂದಾಗಿ ಮಿನಿವ್ಯಾನ್ ಪಲ್ಟಿ(minivan overturned)ಯಾಗಿದ್ದು, ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಸೋಮವಾರ ಮುಂಜಾನೆ ಟಾಟಾ ಏಸ್ ಮಿನಿವ್ಯಾನ್ ಪಲ್ಟಿಯಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು 16 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ 16 ಮಂದಿಯನ್ನು ತೆನಾಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದ 15 ಮಂದಿಯಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಟಾಟಾ ಏಸ್ ಮಿನಿವ್ಯಾನ್‌ನಲ್ಲಿ ಒಟ್ಟು 23 ಮಂದಿ ಪ್ರಯಾಣಿಸುತ್ತಿದ್ದರು. ಅಯ್ಯಪ್ಪ ಭಕ್ತರಾದ ಇವರು ತೆನಾಲಿ ನಿಲ್ದಾಣದಲ್ಲಿ ರೈಲಿನಿಂದ ಇಳಿದು ನಂತರ ಮಿನಿವ್ಯಾನ್‌ ನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗ್ಗಿನ ಜಾವ ದಟ್ಟವಾದ ಮಂಜು ಕವಿದಿದ್ದರಿಂದ ಆಂಧ್ರಪ್ರದೇಶದ ವೇಮುರು ಮಂಡಲದ ಬಪ್ತಾಲಾ ನಗರದ ಬಳಿಯ ಜಂಪನಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ : Truck collision:‌ ಬಸ್ ನಿಲ್ದಾಣದಲ್ಲಿ ನಿಂತಿದ್ದವರಿಗೆ ಟ್ರಕ್‌ ಡಿಕ್ಕಿ: 6 ಸಾವು, 12 ಮಂದಿಗೆ ಗಾಯ

ಇದನ್ನೂ ಓದಿ : ತಾಳಿಕಟ್ಟುವ ವೇಳೆಯಲ್ಲಿ ವಧುವಿಗೆ ಹೃದಯಾಘಾತ : ಮಂಟಪದಲ್ಲಿ ಕುಸಿದು ಬಿದ್ದು ಸಾವು

ಇದನ್ನೂ ಓದಿ : Old lady murder: ವೃದ್ಧೆಯನ್ನು ಹತ್ಯೆಗೈದು ಬೀರುವಿನಲ್ಲಿಟ್ಟು ಪರಾರಿಯಾದ ಮುಸ್ಲಿಂ ಮಹಿಳೆ

ಇದನ್ನೂ ಓದಿ : Ermayi Falls : ಬೆಳ್ತಂಗಡಿ ಎರ್ಮಾಯಿ ಫಾಲ್ಸ್ ಗೆ ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

ಪ್ರಾಥಮಿಕ ವರದಿಗಳ ಪ್ರಕಾರ, ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ತೆನಾಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಕುರಿತು ಹತ್ತಿರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

(minivan overturned) In Guntur, Andhra Pradesh, four passengers were killed and sixteen were injured when a minivan overturned. Of the sixteen injured, one is reported to be in critical condition.

Comments are closed.