Advani Birthday: 95ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಬಿಜೆಪಿಯ ಭೀಷ್ಮ’ ಅಡ್ವಾಣಿ: ಪ್ರಧಾನಿ ಮೋದಿ ಶುಭಕೋರಿದ್ದು ಹೀಗೆ

ನವದೆಹಲಿ: Advani Birthday: ಭಾರತದ ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಇಂದು 95ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಡ್ವಾಣಿ ಅವರ ಮನೆಗೆ ತೆರಳಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ಇದನ್ನೂ ಓದಿ: Krishna Kumar Pandey died : ಭಾರತ್‌ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್‌ ಸೇವಾದಳ ನಾಯಕ ನಿಧನ

ಇಂದು ಬೆಳಿಗ್ಗೆ ಪ್ರಧಾನಿ ಮೋದಿ ಅವರು ಅಡ್ವಾಣಿ ಅವರ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಅದಕ್ಕೂ ಮುನ್ನ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡಾ ಅಡ್ವಾಣಿ ಮನೆಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಅವರು ಎಲ್.ಕೆ.ಅಡ್ವಾಣಿ ಅವರ ಮನೆಯಲ್ಲಿ ಅರ್ಧ ತಾಸು ತಂಗಿದ್ದರು. ಈ ವೇಳೆ ಅಡ್ವಾಣಿ ಅವರಿಂದ ಮೋದಿ ಆಶೀರ್ವಾದ ಪಡೆದರು. ಅಂದಹಾಗೆ ಪ್ರಧಾನಿ ಮೋದಿ ಅವರು ಪ್ರತಿವರ್ಷ ಅಡ್ವಾಣಿ ಅವರ ಹುಟ್ಟುಹಬ್ಬಕ್ಕೆ ಅವರ ಮನೆಗೆ ತೆರಳಿ ಶುಭಕೋರಿ ಆಶೀರ್ವಾದ ಪಡೆಯುತ್ತಾರೆ ಅನ್ನೋದು ವಿಶೇಷ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಡ್ವಾಣಿ ಮನೆಗೆ ತಮ್ಮ ಭೇಟಿಯನ್ನು ಟ್ವಿಟರ್ ನಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ.

ಇನ್ನುಳಿದಂತೆ ಹಲವು ಬಿಜೆಪಿ ನಾಯಕರು, ಇತರೆ ಪಕ್ಷಗಳ ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರ ಅಡ್ವಾಣಿ ಅವರ ಜನ್ಮದಿನಕ್ಕೆ ಶುಭಕೋರಿದ್ದಾರೆ.

ಅಡ್ವಾಣಿ ಅವರ ಬಗ್ಗೆ ಸಂಕ್ಷಿಪ್ತ ನೋಟ:
ಅವಿಭಜಿತ ಭಾರತದ ಸಿಂಧ್ ಪ್ರಾಂತ್ಯದಲ್ಲಿ 1927ರ ನವೆಂಬರ್ 8ರಂದು ಕೃಷ್ಣಚಂದ್ ಡಿ. ಅಡ್ವಾಣಿ ಹಾಗೂ ಗಿಯಾನಿ ದೇವಿ ದಂಪತಿಗೆ ಮಗನಾಗಿ ಜನಿಸಿದರು. ಪಾಕಿಸ್ತಾನದ ಕರಾಚಿಯಲ್ಲಿ ತಮ್ಮ ಶೈಕ್ಷಣಿಕ ಜೀವನವನ್ನು ಆರಂಭಿಸುತ್ತಾರೆ. ಬಳಿಕ ಸಿಂಧ್ ನ ಕಾಲೇಜಿಗೆ ಸೇರುತ್ತಾರೆ. ದೇಶ ವಿಭಜನೆಗೊಂಡ ಸಂದರ್ಭ ಅಡ್ವಾಣಿ ಕುಟುಂಬ ಮುಂಬೈಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಅವರು ಕಾನೂನು ವ್ಯಾಸಾಂಗ ಮಾಡಿದ್ದರು. ಕೇವಲ 14ನೇ ವಯಸ್ಸಿಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರ್ಪಡೆಗೊಳ್ಳುತ್ತಾರೆ.

1951ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ನೇತೃತ್ವದ ಜನಸಂಘಕ್ಕೆ ಸೇರ್ಪಡೆಗೊಳ್ಳುತ್ತಾರೆ. 1977ರಲ್ಲಿ ಜನತಾ ಪಕ್ಷ ಸೇರಿದ್ದರು. ಆಧುನಿಕ ಭಾರತದಲ್ಲಿ ಹಿಂದುತ್ವದ ರಾಜಕೀಯ ಪ್ರಯೋಗಿಸುತ್ತಾರೆ. 1984ರಲ್ಲಿ ಕೇವಲ 2 ಸ್ಥಾನಗಳೊಂದಿಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಪಕ್ಷವನ್ನು ಸ್ಥಾಪಿಸಿದವರೇ ಎಲ್.ಕೆ.ಅಡ್ವಾಣಿ. 2014ರಲ್ಲಿ ಸಂಪೂರ್ಣ ಬಹಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

ಅಯೋಧ್ಯೆ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿದ್ದ ಅಡ್ವಾಣಿ ಅವರು, ಅದಕ್ಕಾಗಿ 1990ರ ಸೆಪ್ಟಂಬರ್ 25ರಂದು ಸೋಮನಾಥದಿಂದ ರಥಯಾತ್ರೆಯನ್ನು ಪ್ರಾರಂಭಿಸುತ್ತಾರೆ. ತಮ್ಮ ಭಾವೋದ್ರೇಕ ಹಾಗೂ ಅದ್ಭುತ ಭಾಷಣಗಳಿಂದ ಹಿಂದುತ್ವದ ನಾಯಕರೆನಿಸಿಕೊಂಡಿದ್ದ ಅಡ್ವಾಣಿ ಹಲವು ಬಾರಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1998ರಿಂದ 2004ರವರೆಗೆ ಎನ್‍ಡಿಎ ಮೈತ್ರಿ ಸರ್ಕಾರದಲ್ಲಿ ಗೃಹಸಚಿವರಾಗಿದ್ದರು. 2002ರಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಉಪಪ್ರಧಾನಿಯಾಗಿದ್ದರು.

ಇದನ್ನೂ ಓದಿ: NIANP Recruitment 2022 : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಡಿಸೈನರ್ ಹುದ್ದೆಗಾಗಿ ಅರ್ಜಿ ಆಹ್ವಾನ

ಆರ್‍ಎಸ್‍ಎಸ್ ಮೂಲಕ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ್ದ ಅಡ್ವಾಣಿ ಅವರು ದೇಶದ ಅಗ್ರಮಾನ್ಯ ರಾಜಕೀಯ ನಾಯಕರಲ್ಲೊಬ್ಬರು. 2015ರಲ್ಲಿ ಕೇಂದ್ರ ಸರ್ಕಾರ ಅಡ್ವಾಣಿ ಅವರಿಗೆ ದೇಶದ 2ನೇ ಅತಿದೊಡ್ಡ ನಾಗರಿಕ ಸನ್ಮಾನವಾದ ಪದ್ಮವಿಭೂಷಣ ನೀಡಿ ಗೌರವಿಸಿತ್ತು.

Advani Birthday: PM Modi, Defence Minister Rajnath Singh visit senior BJP leader’s home

Comments are closed.