Honda : ಹುಂಡೈ ಕ್ರೆಟಾಗೆ ಸವಾಲೊಡ್ಡಲು ಮಿಡ್‌–ಸೈಜ್‌ SUV ಗಳನ್ನು ಪ್ರಾರಂಭಿಸಲಿರುವ ಹೋಂಡಾ

ಇತ್ತೀಚೆಗೆ ಭಾರತದಲ್ಲಿ SUV ಕಾರುಗಳ ಮೇಲಿನ ಒಲವು ಹೆಚ್ಚಾಗಿದೆ. SUV ಗಳ ಕ್ರೇಜ್‌ ಎಷ್ಟಿದೆ ಅಂದರೆ ಕೆಲವು ಜನಪ್ರಿಯ ಮಾದರಿಯ ಕಾರುಗಳಿಗಾಗಿ ತಿಂಗಳುಗಳವರೆಗೆ ಕಾಯುವವರೂ ಇದ್ದಾರೆ. ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಮಧ್ಯಮ ಗಾತ್ರದ ಎಸ್‌ಯುವಿಗಳು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಇದನ್ನು ಗಮನದಲ್ಲಿರಿಸಿಕೊಂಡು ಹೋಂಡಾ (Honda) ತನ್ನ ಸ್ವಂತ ಮಧ್ಯಮ ಗಾತ್ರದ SUV ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್ ಮತ್ತು ಕಿಯಾ ಸೆಲ್ಟೋಸ್‌ಗೆ ನೇರ ಪ್ರತಿಸ್ಪರ್ಧಿಯನ್ನು ನೀಡುವ ಸಲುವಾಗಿ ಎಸ್‌ಯುವಿ ವಿಭಾಗದಲ್ಲಿ ಕಂಪನಿಯು ಹೊಸ ಕಾರನ್ನು ಹೊರತರಲು ಕೆಲಸಮಾಡುತ್ತಿದೆ ಎಂದು ವರದಿಗಳು ಸೂಚಿಸುತ್ತಿವೆ. ಹೋಂಡಾದ SUV ಮಾದರಿಯ ಕಾರುಗಳು ಈ ವರ್ಷದ ಹಬ್ಬಗಳ ಋತುವಿನಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

ಕಂಪನಿಯು ಏಪ್ರಿಲ್ 2023 ರ ವೇಳೆಗೆ ಜಾಝ್, WR-V, ನಾಲ್ಕನೇ-ಜನ್ ಸಿಟಿ ಮತ್ತು ಅಮೇಜ್ ಡೀಸೆಲ್‌ನಂತಹ ಕಾರುಗಳ ಮಾರಾಟವನ್ನು ನಿಲ್ಲಿಸಲಿದೆ. ಇದು ಈಗಾಗಲೇ ಭಾರತದಲ್ಲಿ ತನ್ನ ಪ್ರೀಮಿಯಂ ಕಾರುಗಳಾದ ಸಿವಿಕ್ ಮತ್ತು CR-V ಅನ್ನು ಸ್ಥಗಿತಗೊಳಿಸಿದೆ. ಇದರ ಪರಿಣಾಮವಾಗಿ, ಜಪಾನಿನ ಕಾರು ತಯಾರಕರು ಸದ್ಯ ಭಾರತದಲ್ಲಿ ಕೇವಲ ಎರಡು ಮಾದರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಪೆಟ್ರೋಲ್ ಚಾಲಿತ ಸಿಟಿ ಮತ್ತು ಅಮೇಜ್. ಭಾರತದಲ್ಲಿ ಹೋಂಡಾದ ಮಧ್ಯಮ ಗಾತ್ರದ SUV ಗಳ ಪೋರ್ಟ್ಫೋಲಿಯೊವನ್ನು ತುಂಬಲು ಕಾರ್ಯನಿರ್ವಹಿಸುತ್ತಿದೆ.

ವಿನ್ಯಾಸ:
ಹೋಂಡಾದ ಮುಂಬರುವ ಮಧ್ಯಮ ಗಾತ್ರದ SUV ಸುಮಾರು 4.2-4.3 ಮೀಟರ್ ಉದ್ದವಿರುವ ಸಾಧ್ಯತೆಯಿದೆ. ಅದರ ವಿನ್ಯಾಸದ ಬಗ್ಗೆ ಸರಿಯಾದ ಬಹಿರಂಗವಾಗಿಲ್ಲವಾದರೂ ಅದು ಅಮೇಜ್‌ ಅನ್ನು ಹೋಲುವ ಸಾಧ್ಯತೆಯಿದೆ. ಆದರೂ, ವಿದೇಶಗಳಲ್ಲಿ ಮಾರಾಟವಾಗುವ ಹೊಸ-ಜನ್ ಡಬ್ಲ್ಯುಆರ್-ವಿ ಮತ್ತು ಇತ್ತೀಚಿನ-ಜನ್ ಸಿಆರ್-ವಿ ನ ವಿನ್ಯಾಸಗಳನ್ನು ಬಹುಶಃ ಹೊಸ ಕಾರಿನಲ್ಲಿ ನೋಡಬಹುದಾಗಿದೆ.

ವೈಶಿಷ್ಟ್ಯಗಳು:
ಹೋಂಡಾದ ಮಧ್ಯಮ ಗಾತ್ರದ SUV ಫ್ಯೂಚರಿಸ್ಟಿಕ್ 10.2-ಇಂಚಿನ ಸಂಪೂರ್ಣ ಡಿಜಿಟಲ್ ಉಪಕರಣ ಕ್ಲಸ್ಟರ್ ಮತ್ತು ಹೊಸ ಅಕಾರ್ಡ್‌ನಲ್ಲಿ ಕಂಡುಬರುವ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಲೇಔಟ್ ಅನ್ನು ಹೊಂದಿರಲಿದೆ. ಈ ಕಾರು ಕಂಪನಿಯ ಸ್ವಂತ ADAS ವೈಶಿಷ್ಟ್ಯಗಳ ಸೂಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಲೇನ್-ಕೀಪ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಪವರ್ಟ್ರೇನ್:
ಹೋಂಡಾ ಪ್ರಾಯಶಃ 121hp, 1.5-ಲೀಟರ್‌ನ ಪೆಟ್ರೋಲ್ ಎಂಜಿನ್ ಅನ್ನು ಫಿಪ್ತ್‌-ಜನ್ ಸಿಟಿಯಿಂದ ಅದರ ಮಧ್ಯಮ ಗಾತ್ರದ SUV ಯೊಂದಿಗೆ ನೀಡುತ್ತದೆ. ಸಂಪೂರ್ಣವಾಗಿ ಲೋಡ್ ಮಾಡಲಾದ ಟ್ರಿಮ್‌ಗಳು ಐಚ್ಛಿಕ 1.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಪವರ್‌ಟ್ರೇನ್ ಅನ್ನು ಸಹ ಹೊಂದಿರುವ ಸಾಧ್ಯತೆಯಿದೆ. 1.5-ಲೀಟರ್ ಟ್ರಾನ್ಸ್‌ಮಿಷನ್ ಆಯ್ಕೆಗಳು, 5-ಸ್ಪೀಡ್ ಮ್ಯಾನುವಲ್ ಮತ್ತು CVT ಗೇರ್‌ ತಂತ್ರಜ್ಞಾನ ಮತ್ತು ಇ-ಡ್ರೈವ್ ಟ್ರಾನ್ಸ್‌ಮಿಷನ್ ಅನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ : Top 5 Electric Scooters in India: 2022 ರ ಟಾಪ್‌ 5 ಇಲೆಕ್ಟ್ರಿಕ್‌ ಸ್ಕೂಟರ್‌ಗಳು

ಇದನ್ನೂ ಓದಿ : Top 5 Upcoming Cars in 2023 : ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಪ್‌ 5 ಕಾರುಗಳಿವು

(Honda to launch new mid-size SUV to rival Hyundai Creta)

Comments are closed.