District Conference of Journalists -2023: ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆ ಶ್ರೇಷ್ಠವಾದುದು: ಪ್ರಕಾಶ್ ಶೆಟ್ಟಿ ಅಭಿಮತ

ಮಂಗಳೂರು; (District Conference of Journalists -2023) ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆಯು ಶ್ರೇಷ್ಠವಾದುದು. ಜನ ಸಾಮಾನ್ಯರ ಮತ್ತು ಸರಕಾರದ ಮಧ್ಯೆ ಸೇತುವೆಯಾಗಿ ಮಾಧ್ಯಮಗಳು ಕೆಲಸ‌ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಕರ್ತರ ಜಿಲ್ಲಾ ಸಮ್ಮೇಳನ -2023 ನ್ನು ಉದ್ಘಾಟಿಸಿ ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಮಾತನಾಡಿದರು. ನನ್ನ ಎಲ್ಲಾ ಬೆಳವಣಿಗೆಗೆ ಪತ್ರಕರ್ತರು ಸದಾ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ್ದಾರೆ. ಉದ್ಯಮದ‌ ಬೆಳವಣಿಗೆಗೆ ಪತ್ರಕರ್ತರು ದೊಡ್ಡ ಸಹಾಯ ನೀಡಿದ್ದಾರೆ ಎಂದು ಅವರು ಹೇಳಿದರು.

ಪತ್ರಕರ್ತರ ಕ್ಷೇಮ ನಿಧಿಗೆ ಚಾಲನೆ ನೀಡಿ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರ ‘ಭಾವ ಚಿತ್ರ ಯಾನ -2’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್‌ಕುಮಾರ್ ಕಟೀಲ್ ಅವರು, “‘ಪತ್ರಕರ್ತರಿಗೆ (District Conference of Journalists -2023) ನಿವೇಶನ ಬೇಡಿಕೆ ಗಮನದಲ್ಲಿದೆ. ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಜೊತೆ ಮಾತನಾಡಿ ಪತ್ರಕರ್ತರಿಗೆ ನಿವೇಶನ ಒದಗಿಸಲು ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು. ಪತ್ರಕರ್ತರ ಗ್ರಾಮ ವಾಸ್ತವ್ಯ ಮಾದರಿ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರವು ಗ್ರಾಮ‌ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಯ ಹಿನ್ನಲೆಯಲ್ಲಿ ಪತ್ರಕರ್ತರು ಸಹಕಾರ‌ ನೀಡಬೇಕು” ಎಂದು ಅವರು ಹೇಳಿದರು‌.

ದ.ಕ ಜಿಲ್ಲಾ ಪತ್ರಕರ್ತರ ಸಂಘದ (District Conference of Journalists -2023) ನೆನಪಿನ ಸಂಚಿಕೆ ‘ಮಾಧ್ಯಮ’ವನ್ನು ಬಿಡುಗಡೆ ಮಾಡಿದ ವಿಧಾನ ಸಭೆಯ ಪ್ರತಿಪಕ್ಷ ಉಪನಾಯಕ ಶಾಸಕ ಯು. ಟಿ .ಖಾದರ್ ಮಾತನಾಡಿ'”ಪತ್ರಕರ್ತರ ಮತ್ತು ರಾಜಕೀಯ ವ್ಯಕ್ತಿಗಳ ಮಧ್ಯೆ ಅನನ್ಯ ಮತ್ತು ಸಹೋದರ ಸಂಬಂಧ ಇದೆ. ಸೌಹಾರ್ಧಯುತ ಮತ್ತು ಪ್ರಬುದ್ಧ ಸಮಾಜ ನಿರ್ಮಿಸಿ, ಸಮಾಜದ‌ ಎಲ್ಲರನ್ನೂ ಜೋಡಿಸುವ ಕೆಲಸವನ್ನು ಪತ್ರಿಕಾ ರಂಗ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ತಮ್ಮ ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ದಕ್ಷಿಣ ಕನ್ನಡದ ಪತ್ರಕರ್ತರು ಮಾದರಿಯಾಗಿದ್ದಾರೆ ” ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ವಹಿಸಿ ಮಾತನಾಡಿದ್ದು, ” ಮಾಧ್ಯಮ ಕವಲು ದಾರಿಯಲ್ಲಿದೆ. ಪತ್ರಿಕೋದ್ಯಮಕ್ಕೆ ಒಂದು ಭವ್ಯವಾದ ಪರಂಪರೆ ಇದೆ. ಈ ಪರಂಪರೆಯನ್ನು ಮುಂದುವರಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ಮಾಧ್ಯಮ ಅಕಾಡೆಮಿಯ ವತಿಯಿಂದ ಹಿರಿಯ ಪತ್ರಕರ್ತರದ್ದು ಸೇರಿ 40 ಪುಸ್ತಕಗಳನ್ನು ಹೊರ ತರಲಿದೆ” ಎಂದು ಹೇಳಿದರು.

ಇನ್ನೂ ಈ ಕಾರ್ಯಕ್ರಮ(District Conference of Journalists -2023)ದಲ್ಲಿ ಪತ್ರಕರ್ತ ವಿಕ್ರಂ ಕಾಂತಿಕೆರೆಯವರ ಕೃತಿ ‘ಕಾವೇರಿ ತೀರದ ಪಯಣ’ ಕೃತಿ ಯನ್ನು ಶಾಸಕರಾದ ವೇದವ್ಯಾಸ ಕಾಮತ್ ಅವರು ಬಿಡುಗಡೆ ಮಾಡಿದ್ದು, ಛಾಯಾಚಿತ್ರ ಪ್ರದರ್ಶನವನ್ನು ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಉದ್ಘಾಟಿಸಿದರು. ಉದ್ಯಮಿ ಸಾಂಬಶಿವರಾವ್ ಅವರು ಬಿಜೈ- ಕಾಪಿಕಾಡ್ ಅಂಗನವಾಡಿ ಮಕ್ಕಳಿಗೆ ಕ್ರೀಡಾ ಪರಿಕರಗಳನ್ನು ವಿತರಣೆ ಮಾಡಿದ್ದು, ಪತ್ರಕರ್ತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಟ್ಲ ಫೌಂಡೇಷನ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಚಾಲನೆ ನೀಡಿದರು. ಪರಿಸರ ಸ್ನೇಹಿ ಯೋಜನೆಗೆ ಗುರ್ಮೆ ಫೌಂಡೇಶನ್‌ನ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರು ಚಾಲನೆ ನೀಡಿದರು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು‌. ಮಂಗಳೂರು ಮೇಯರ್ ಜಯಾನಂದ‌ ಅಂಚನ್, ಮಂಗಳೂರು ವಿವಿ ಉಪಕುಲಪತಿಗಳಾದ ಪ್ರೊ.ಪಿ.ಎಸ್. ಯಡಪಡಿತ್ತಾಯ, ಬ್ಯಾಂಕ್ ಆಫ್ ಬರೋಡಾದ‌ ಪ್ರಾದೇಶಿಕ ಮುಖ್ಯಸ್ಥರಾದ ಗಾಯತ್ರಿ, ಕೆಐಒಸಿಎಲ್‌ನ ನಿರ್ದೇಶಕರಾದ ಮುರುಗೇಶ್, ಮುಂಬೈ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ರವೀಂದ್ರ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ‌ ಅಡ್ಕಸ್ಥಳ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ಪಡುಬಿದ್ರೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : High tech bus stand: ರಾಜ್ಯದ ಮೊದಲ ಹೈಟೆಕ್‌ ಬಸ್‌ ನಿಲ್ದಾಣ ಸುರತ್ಕಲ್‌ ನಲ್ಲಿ ಪ್ರಾರಂಭ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ರಾಷ್ಟ್ರೀಯ ಪತ್ರಿಕಾ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನೆಗೆ ಮುನ್ನ ಆಕರ್ಷಕ ಮೆರವಣಿಗೆಯ ಮೂಲಕ ಅತಿಥಿಗಳನ್ನು ವೇದಿಕೆಗೆ ಕರೆ ತರಲಾಯಿತು. ಪತ್ರಿಕೆ, ಮ್ಯಾಗಜಿನ್‌‌ ಲೋಗೋ, ವಿವಿಧ ಧರ್ಮಗಳ ಗ್ರಂಥಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆಯಲ್ಲಿ ತರಲಾಯಿತು. ಚೆಂಡೆ, ವಾದ್ಯ, ಮೇಳಗಳು ಮೆರವಣಿಗೆಗೆ ಸಾಥ್ ನೀಡಿತು.

The contribution of journalists to the development of society is great. Prakash Shetty, Managing Director of MRG Group, said that the media is working as a bridge between the common people and the government while inaugurating the District Conference of Journalists-2023 organized by the Dakshina Kannada District Working Journalists Association.

Comments are closed.