Hyundai Creta : ಕ್ರೆಟಾ ಎನ್-ಲೈನ್ ನೈಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಹುಂಡೈ; ಕೇವಲ 900 ಯುನಿಟ್‌ಗಳು ಮಾತ್ರ ಲಭ್ಯ

ದಕ್ಷಿಣ ಕೊರಿಯಾ (South korea) ದ ವಾಹನ ತಯಾರಕ ಕಂಪನಿ ಹ್ಯುಂಡೈ, ಬ್ರೆಜಿಲ್‌ನಲ್ಲಿ ತನ್ನ ಕ್ರೆಟಾ SUVಯ ಎನ್-ಲೈನ್ ನೈಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಸೀಮಿತ ಆವೃತ್ತಿಯು 900 ಯುನಿಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ಈ ಕಾರಿನ ಬೆಲೆ ರೂ. BRL 181,490 (ಅಂದರೆ ಸುಮಾರು 29 ಲಕ್ಷ ಭಾರತೀಯ ರೂಪಾಯಿಗಳು). ಈ ಹೊಸ ಆವೃತ್ತಿಯು (Hyundai Creta) ಕ್ರೆಟಾದ ಫೇಸ್‌ಲಿಫ್ಟ್ ಆವೃತ್ತಿಯನ್ನು ಆಧರಿಸಿದೆ. ಇದು 2024 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಕಾರು ಕಿಯಾ ಸೆಲ್ಟೋಸ್‌ನೊಂದಿಗೆ ಸ್ಪರ್ಧಿಗೆ ಇಳಿಯಲಿದೆ.

ಹೇಗಿದೆ ಹೊಸ ಆವೃತ್ತಿಯ ವಿನ್ಯಾಸ:
ಕ್ರೆಟಾದ ಹೊಸ ಆವೃತ್ತಿಯಾದ ಎನ್‌–ಲೈನ್‌ ನೈಟ್‌ನಲ್ಲಿ ಕಪ್ಪು ಬಣ್ಣದ ಸ್ಕೀಮ್‌ನೊಂದಿಗೆ ಬ್ಲ್ಯಾಕ್ಡ್-ಔಟ್ ಗ್ರಿಲ್, ಅಲಾಯ್ ಚಕ್ರಗಳು, ಲೋಗೋ ಮತ್ತು ಡೋರ್ ಹ್ಯಾಂಡಲ್‌ಗಳನ್ನು ಒದಗಿಸಲಾಗಿದೆ. ಇದರೊಂದಿಗೆ ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳಲ್ಲಿ ಸ್ಮೋಕರ್‌ ಟ್ರೀಟ್‌ಮೆಂಟ್‌ ನೀಡಲಾಗಿದೆ. ಇದು ನೋಡಲು ಬಹಳ ಅತ್ಯಾಕರ್ಷಕವಾಗಿ ಕಾಣಿಸುತ್ತದೆ. ಇದರೊಂದಿಗೆ 18 ಇಂಚಿನ ಅಲಾಯ್ ಚಕ್ರಗಳನ್ನು ಸಹ ನೀಡಲಾಗಿದೆ.

ಎಂಜಿನ್ ಹೇಗಿದೆ?
ಕ್ರೆಟಾದ ಈ ಆವೃತ್ತಿಯ ಸೀಮಿತ 900 ಘಟಕಗಳು ಮಾತ್ರ ಲಭ್ಯವಿರಲಿದೆ. ಈ SUV ಎರಡು ಬಣ್ಣದ ಆಯ್ಕೆಗಳನ್ನು ಖರೀದುದಾರರಿಗೆ ನೀಡುತ್ತದೆ. ಇದರಲ್ಲಿ ಬ್ಲಾಕ್‌ ರೂಫ್‌ನೊಂದಿಗೆ ಸಿಲ್ಕ್‌ ಗ್ರೇ ಮತ್ತು ಬ್ಲಾಕ್‌ ರೂಫ್‌ನೊಂದಿಗೆ ವೈಟ್‌ ಇದೆ. ಕ್ರೆಟಾ ಎನ್-ಲೈನ್ ಡಾರ್ಕ್ ಆವೃತ್ತಿಯು 2.0-ಲೀಟರ್ ನ್ಯಾಚುರಲ್‌ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 157 bhp ಪವರ್ ಮತ್ತು 202 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಹೇಗಿದೆ ಇಂಟೀರಿಯರ್‌?

ಕ್ರೆಟಾದ ಹೊಸ ಡಾರ್ಕ್‌ ಎಡಿಷನ್‌ನ ಇಂಟೀರಿಯರ್‌ ನಲ್ಲಿ ಡ್ಯಾಶಬೋರ್ಡ್‌ನ ವಿನ್ಯಾಸವನ್ನು ರೆಡ್‌ ಎಕ್ಸೆಂಟ್‌ನಲ್ಲಿ ರೆಡ್‌ ಎಂಬಿಯಂಟ್‌ ಲೈಟಿಂಗ್‌ ನೊಂದಿಗೆ ಸ್ಪೋರ್ಟಿಯಾಗಿ ನೀಡಲಾಗಿದೆ. ಈ SUVಯ ಸ್ಟೇರಿಂಗ್‌ ಬ್ಲಾಕ್‌ ಲೆದರ್‌ನೊಂದಿಗೆ ಸ್ಪೋರ್ಟಿ ಎನ್‌ ಲೈನ್‌ ನೊಂದಿಗೆ ನೀಡಲಾಗಿದೆ. 0.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಕ್ರೂಸ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್, ಬ್ಲೂ ಲಿಂಕ್ ಸಂಪರ್ಕಿತ ಕಾರ್ ಟೆಕ್, ಲೆವೆಲ್ 2 ADAS, ಪೆನಾರಮಿಕ್‌ ಸನ್‌ರೂಫ್, ವೆಂಟಿಲೇಟೆಡ್‌ ಡ್ರೈವರ್ ಸೀಟ್ ಮತ್ತು ಆಟೋಮೆಟಿಕ್‌ ಕ್ಲೈಮೆಟ್‌ ಕಂಟ್ರೋಲ್‌, ಮುಂತಾದ ಪೀಚರ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ : Suzuki Car Discount Offers : ಮಾರುತಿ ಸುಜುಕಿ ಕಾರು ಖರೀದಿಸಲು ಸಕಾಲ; ಭಾರಿ ಡಿಸ್ಕೌಂಟ್‌ ಘೋಷಣೆ

ಇದನ್ನೂ ಓದಿ : Kia Carens : ಕಿಯಾ ಕ್ಯಾರೆನ್ಸ್: ಹೊಸ ಡೀಸೆಲ್ ಐಎಂಟಿ ರೂಪಾಂತರದಲ್ಲಿ ಬರುವ ನಿರೀಕ್ಷೆ

(Hyundai Creta. Hyundai launched the n-line night edition of their creta in brazil)

Comments are closed.