Matcha Tea : ಮಾಚಾ ಟೀ ಬಗ್ಗೆ ನಿಮಗೆ ಗೊತ್ತಾ? ಯಾರಿಗೆ ಈ ಟೀ ಬೆಸ್ಟ್‌…

ನಮಗೆ ಬ್ಲ್ಯಾಕ್ ಟೀ, ಗ್ರೀನ್ ಟೀ, ಹರ್ಬಲ್ ಟೀ, ವೈಟ್ ಟೀ ಬಗ್ಗೆ ಗೊತ್ತು. ಅದನ್ನು ತಯಾರಿಸುವುದು ಹೇಗೆ? ಅದರ ಲಾಭಗಳೇನು ಎಲ್ಲವೂ ಗೊತ್ತು. ಆದರೆ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ ಟೀ ಎಂದರೆ ಮಾಚಾ ಟೀ (Matcha Tea). ಮೂಲತಃ ಇದು ಜಪಾನಿ (Japan) ನ ಸಾಂಪ್ರದಾಯಿಕ ಟೀ. ಗ್ರೀನ್‌ ಟೀ (Green Tea) ಮತ್ತು ಮಾಚಾ ಟೀ ಎರಡನ್ನೂ ಒಂದೇ ಸಸ್ಯ (Plant) ದಿಂದ ತಯಾರಿಸಲಾಗುತ್ತದೆ. ಆದರೆ ವ್ಯತ್ಯಾಸ ಇಷ್ಟೇ, ಗ್ರೀನ್‌ ಟೀಯನ್ನು ಎಲೆಗಳನ್ನು ಒಣಗಿಸಿ ತಯಾರಿಸಲಾಗುತ್ತದೆ. ಆದರೆ ಮಾಚಾ ಟೀಯಲ್ಲಿ ಎಲೆಗಳನ್ನು ಕುದಿಸಿ, ಒಣಗಿಸಿ ನಂತರ ಪುಡಿ ತಯಾರಿಸಲಾಗುತ್ತದೆ. ಹಾಗಾಗಿಯೇ ಇದು ಬರೀ ಸಾಮಾನ್ಯ ಗ್ರೀನ್‌ ಟೀ ಅಲ್ಲ. ಇದೊಂದು ಅದ್ಭುತ ಪ್ರಯೋಜನಗಳನ್ನು ನೀಡುವ ಟೀ ಆಗಿದೆ. ಮಾಚಾ ಟೀ ಪುಡಿಯನ್ನು ತಯಾರಿಸುವ ಸಸ್ಯದ ಹೆಸರು ಕ್ಯಾಮೆಲಿಯಾ ಸೈನೆನ್ಸಿಸ್. ಮಾಚಾ ಟೀಯು ಕುಡಿಯಲು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ಮಾಚಾ ಟೀ ಕುಡಿಯುವುದರಿಂದ ಸಿಗುವ ಪ್ರಯೋಜನಗಳು :

ಉತ್ತಮ ಆಂಟಿಒಕ್ಸಿಡೆಂಟ್‌ :
ಆಂಟಿಆಕ್ಸಿಡೆಂಟ್‌ಗಳು ದೇಹದಿಂದ ಕೆಟ್ಟ ಅಣುಗಳನ್ನು ತೆಗೆದುಹಾಕಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಫುಡ್ ರಿಸರ್ಚ್ ಇಂಟರ್‌ನ್ಯಾಶನಲ್‌ನ ಅಧ್ಯಯನವು ಚಹಾದಲ್ಲಿ ಫ್ಲೇವನಾಯ್ಡ್‌ಗಳು ಸಹ ಇದೆ ಎಂದು ಸೂಚಿಸಿದೆ. ಈ ಚಹಾದಲ್ಲಿರುವ ಫ್ಲೇವನಾಯ್ಡ್‌ಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹಲ್ಲಿನ ಕೊಳೆತವನ್ನು ತಡೆಯಲು ಸಹಾಯ ಮಾಡುತ್ತದೆ.

ಮೆದುಳಿನ ಕಾರ್ಯ ಸುಧಾರಿಸುತ್ತದೆ:
ಮಿದುಳಿನ ಕಾರ್ಯಗಳನ್ನು ಹೆಚ್ಚಿಸುವಲ್ಲಿ ಮಚಾ ಟೀ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಮಚಾ ಟೀ ಕುಡಿಯುವುದರಿಂದ ಜ್ಞಾಪಕಶಕ್ತಿ, ಏಕಾಗ್ರತೆ ಹೆಚ್ಚುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ ಎಂದು ಹೆಲ್ತ್‌ಲೈನ್ ವರದಿ ಮಾಡಿದೆ.

ಗ್ಲೋಯಿಂಗ್ ಸ್ಕಿನ್:
ಮಚಾ ಟೀ ಗಮನಾರ್ಹ ಪ್ರಮಾಣದ ಕ್ಯಾಟೆಚಿನ್‌ಗಳನ್ನು ಹೊಂದಿರುತ್ತದೆ. ಕ್ಯಾಟೆಚಿನ್ ಒಂದು ಸಂಯುಕ್ತವಾಗಿದ್ದು ಅದು ಚರ್ಮವನ್ನು ಹೊಳೆಯುವಂತೆ ಮಾಡಲು ಮತ್ತು ಕಾಲಜನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಚಾ ಟೀಯಲ್ಲಿ ಬಳಸುವ ಪುಡಿ ದೇಹದ ಆಂತರಿಕ ಮತ್ತು ಬಾಹ್ಯ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದುಬಂದಿದೆ.

ಇದನ್ನೂ ಓದಿ : Black Raisin: ಮಹಿಳೆಯರ ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ‘ಕಪ್ಪು ಒಣದ್ರಾಕ್ಷಿ’

ತೂಕ ಇಳಿಕೆಗೆ ಸಹಾಯ ಮಾಡುತ್ತದೆ:
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಪ್ರಕಾರ, ಮಚಾ ಟೀ ಯು ತೂಕ ಇಳಿಸುವವರಿಗೆ ಸಾಕಷ್ಟು ಸಹಾಯ ಮಾಡುತ್ತದೆ. ಇದು ಶಕ್ತಿಯ ಬಿಡುಗಡೆ ಮಾಡುತ್ತದೆ ಮತ್ತು ಕೊಬ್ಬಿನ ಆಕ್ಸಿಡೀಕರಣವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ಲಿಪೊಜೆನೆಸಿಸ್ ಮತ್ತು ಕೊಬ್ಬಿನ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.

ಮಾಚಾ ಟೀ ತಯಾರಿಸುವುದು ಹೇಗೆ?
ಮಾಚಾ ಟೀ ಪುಡಿಯನ್ನು ಬಿಸಿನೀರಿನಲ್ಲಿ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ನಯವಾದ ಪುಡಿಯಾಗಿರುವುದರಿಂದ ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಇದನ್ನು ಸೋಸಿಕೊಳ್ಳುವ ಅಗತ್ಯವಿಲ್ಲ. ಅದಕ್ಕೆ ಸ್ವಲ್ಪ ಹಾಲು ಮತ್ತು ಸಿಹಿಗಾಗಿ ಜೇನುತುಪ್ಪ ಸೇರಿಸಿ.

ಇದನ್ನೂ ಓದಿ : Banana Blossom Benefits : ಬಾಳೆಹಣ್ಣಿನಿಂದಷ್ಟೇ ಅಲ್ಲ; ಬಾಳೆ ಹೂವಿನಿಂದಲೂ ಇದೆ ಅನೇಕ ಪ್ರಯೋಜನಗಳು

ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸೂಚನೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ)

(Do You Know about Matcha Tea? Know its health benefits, and how to make this tea.)

Comments are closed.