Spandana Vijay Raghavendra : ಜಾತಕದಲ್ಲೇ ಇತ್ತಾ ಮರಣಕಂಟಕ : ಸ್ಪಂದನಾ ಕುಟುಂಬಕ್ಕೆ ಮುನ್ಸೂಚನೆ ಕೊಟ್ಟಿದ್ರಾ ಜ್ಯೋತಿಷಿ

Spandana Vijay Raghavendra : ಸ್ಯಾಂಡಲ್ ವುಡ್ ನಲ್ಲಿ ಅಕಾಲಿಕ ಸಾವುಗಳ ಸರಣಿ ಮುಂದುವರೆದಿದೆ. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದು, ಇದಕ್ಕೆ ಸ್ಪಂದನ ಗ್ರಹಗತಿ ಕಾರಣವಾಗಿದ್ದು, ಕಂಟಕವೊಂದನ್ನು ಸ್ಪಂದನ ಕುಟುಂಬ ನಿರ್ಲಕ್ಷ್ಯ ಮಾಡಿತ್ತಾ ಎಂಬ ಚರ್ಚೆ ಹುಟ್ಟುಹಾಕಿದೆ. ಸ್ಪಂದನಾ ವಿಜಯ್ ನಿಧನ ಸ್ಯಾಂಡಲ್ ವುಡ್ ಅಂಗಳ ಹಾಗೂ ಕರ್ನಾಟಕದಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿದೆ. ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿ ಸ್ಪಂದನಾ ಜೀವವನ್ನೇ ಕಳೆದುಕೊಂಡರು ಎನ್ನಲಾಗ್ತಿದೆ.

ಸ್ಪಂದನಾ ಜೊತೆ ಪತಿ ವಿಜಯ್‌ ರಾಘವೇಂದ್ರ

ಈ ಮಧ್ಯೆ ಸ್ಪಂದನಾ ಸಾವಿಗೆ ಅವರ ಜಾತಕದಲ್ಲಿದ್ದ ಗ್ರಹಗತಿಯೇ ಕಾರಣ ಎಂಬ ಅಂಶವೂ ಮುನ್ನಲೆಗೆ ಬಂದಿದ್ದು, ಈ ಬಗ್ಗೆ ನಾಡಿನ ಪ್ರಸಿದ್ಧ ಜ್ಯೋತಿಷ್ಯಿಯೊಬ್ಬರು ವಿಜಯ್ಬರಾಘವೇಂದ್ರ ಹಾಗೂ ಕುಟುಂಬಕ್ಕೆ ಈ ಮೊದಲೇ ಎಚ್ಚರಿಸಿದ್ದರಂತೆ. ಸಾಕಷ್ಟು ಆರೋಗ್ಯವಾಗಿದ್ದ ಸ್ಪಂದನಾ ತಮ್ಮ 44 ನೇ ವಯಸ್ಸಿಗೆ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಈ ದಿಢೀರ್ ಸಾವಿಗೆ ಅವರನ್ನು ಕಾಡುತ್ತಿದ್ದ ಗ್ರಹಚಾರ ಕೂಡ ಕಾರಣ ಎನ್ನಲಾಗಿದೆ. ಇದನ್ನೂ ಓದಿ : Spandana Vijay Raghavendra : ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹುಟ್ಟಿದು ಎಲ್ಲಿ ಗೊತ್ತಾ ?

ದೇವರು ಹಾಗೂ ಪೂಜೆ ಪುನಸ್ಕಾರಗಳಲ್ಲಿ ಅಪಾರ ನಂಬಿಕೆ ಹೊಂದಿದ್ದ ಸ್ಪಂದನಾ ತಮ್ಮ ಊರಿನ ಅಂದ್ರೇ ತವರಿನ ಭೂತ ಗಳನ್ನು ಆರಾಧಿಸುತ್ತಿದ್ದರಂತೆ‌. ಜ್ಯೋತಿಷ್ಯದಲ್ಲೂ ನಂಬಿಕೆ ಇರಿಸಿಕೊಂಡಿದ್ದ ವಿಜಯ್ ಮತ್ತು ಸ್ಪಂದನಾಗೆ ಈಗಾಗಲೇ ಕಂಟಕದ ಬಗ್ಗೆ ಅಧ್ಯಾತ್ಮಿಕ ಗುರೂಜಿಗಳು ಅಲರ್ಟ್ ಕೂಡ ಮಾಡಿದ್ದರಂತೆ. ಆದರೆ ಅದ್ಯಾಕೆ ವಿಜಯ್ ಹಾಗೂ ಸ್ಪಂದನಾ ಕುಟುಂಬ ಇದನ್ನು ನಿರ್ಲಕ್ಷಿಸಿತು ಎಂಬುದು ಈಗ ಪ್ರಶ್ನೆಯಾಗಿದೆ ಉಳಿದುಕೊಂಡಿದೆ.

Death Kantaka Spandana Vijay Raghavendra in Horoscope about Death astrologer Gave a Prediction before 4 month
ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ

ಇದನ್ನೂ ಓದಿ : Spandana Vijay Raghavendra : ನಟ ವಿಜಯ್‌ ರಾಘವೇಂದ್ರ ಹಾಗೂ ಸ್ಪಂದನಾ ಅವರ ಪ್ರೀತಿ ಪಯಣ ಹೇಗಿತ್ತು ಗೊತ್ತಾ ?

ಸ್ಪಂದನಾಗೆ ಹೃದಯ ಸ್ತಂಭನವಾದ ಸುದ್ದಿ ಹರಡುತ್ತಿದ್ದಂತೆ ಆಧ್ಯಾತ್ಮಿಕ ಗುರೂಜಿ ವಿಜಯ್ ಕುಟುಂಬವನ್ನು ಸಂಪರ್ಕಿಸಿದ್ದು, ನಾನು ನಾಲ್ಕು ತಿಂಗಳ ಹಿಂದೆಯೇ ಕಂಟಕದ ಬಗ್ಗೆ ಎಚ್ಚರಿಸಿದ್ದೇ, ಆದರೂ ಯಾಕೆ ಕಾಳಜಿ ವಹಿಸಲಿಲ್ಲ. ಪೂಜೆ-ಹೋಮಗಳ ಮೂಲಕ ಸಮಸ್ಯೆಯ ಪ್ರಮಾಣವನ್ನು ಕಡಿಮೆ ಮಾಡಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರಂತೆ.

ಸ್ಪಂದನಾ ಜಾತಕ ಆಧರಿಸಿ ಅಗತ್ಯ ಪೂಜೆ ಮಾಡಿಸಿದ್ದರೇ, ವಿಜಯ್ ರಾಘವೇಂದ್ರ ಅವರ ಶಕ್ತಿಯಂತಿದ್ದ ಸ್ಪಂದನಾ ಬದುಕಿ ಉಳಿಯುತ್ತಿದ್ದರೇನೋ ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ. ಆದರೆ ಸ್ಪಂದನಾ ಸಾವಿಗೆ ಅನಾರೋಗ್ಯಕರ ಡಯಟ್ ಕಾರಣವಾಯ್ತು.‌ ಹೀಗಾಗಿಯೇ ಅವರು ಇಷ್ಟು ಧಿಡೀರ್ ಸಾವು ಕಂಡರು ಎಂಬ ಮಾತು ಕೇಳಿಬಂದಿದೆ. ಆದರೆ ನೂರು ಚರ್ಚೆಗಳ ಬಳಿಕವೂ ಚಿನ್ನಾರಿ ಮುತ್ತನ ಮುದ್ದಿನ ಮಡದಿ ಇನ್ನಿಲ್ಲ ಎನ್ನೋ ಸತ್ಯ ಮಾತ್ರ ಎಲ್ಲರನ್ನೂ ಭಾವುಕವಾಗಿಸುತ್ತಿದೆ.

ಇದನ್ನೂ ಓದಿ : Spandana Passed Away : ವಿದೇಶಿ ಪ್ರವಾಸದಲ್ಲಿದ್ದಾಗ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ಆಗಿದ್ದೇನು?

Comments are closed.