Hyundai Venue N-Line : ಹುಂಡೈ ವೆನ್ಯೂ Vs ಹುಂಡೈ ವೆನ್ಯೂ ಎನ್‌–ಲೈನ್‌ : ಏನಿದರ ವಿಶೇಷತೆ?

ಹುಂಡೈ ಇಂಡಿಯಾ (Hyundai India) ಜೂನ್‌ನಲ್ಲಿ ಸಬ್‌–ಕಾಂಪ್ಯಾಕ್ಟ್‌ SUV ವೆನ್ಯೂ ಕಾರಿನ 2022ರ ಮಾದರಿಯನ್ನು ಪರಿಚಯಿಸಿತ್ತು. ಈಗ ದಕ್ಷಿಣ ಕೋರಿಯಾದ ಕಾರು ತಯಾರಿಕಾ ಕಂಪನಿ ಹೆಚ್ಚಿನ ಕಾರ್ಯಕ್ಷಮತೆಯಿರುವ ಹುಂಡೈ ವೆನ್ಯು ಎನ್‌–ಲೈನ್‌ (Hyundai Venue N-Line) ಬಿಡುಗಡೆ ಮಾಡಿದೆ. ಸ್ಟ್ಯಾಂಡರ್ಡ್‌ ಆವೃತ್ತಿ ಮತ್ತು ಹೊಸ ಆವೃತ್ತಿಗೆ ಹೋಲಿಸಿದಾಗ ಹಲವಾರು ನವೀಕರಿಸಿದ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹುಂಡೈ ಕಂಪನಿ ಬಿಡುಗಡೆ ಮಾಡಿದ ಎರಡನೇ ಎನ್‌-ಲೈನ್ ಉತ್ಪನ್ನವಾಗಿದೆ. ವೆನ್ಯೂ ಎನ್‌-ಲೈನ್, i20 ಎನ್‌–ಲೈನ್‌ ಆವೃತ್ತಿಯ ನಂತರದ್ದಾಗಿದೆ. ಇದು ಕಿಯಾ ಸೋನೆಟ್‌ X-ಲೈನ್‌ ಮತ್ತು ನಿಸ್ಸಾನ್‌ ಮೆಗ್ನೈಟ್‌ ಟರ್ಬೊ ನಂತಹವುಗಳೊಂದಿಗೆ ಸ್ಪರ್ಧೆ ನೀಡಬಹುದು ಎನ್ನಲಾಗುತ್ತಿದೆ. ವೆನ್ಯೂ ಎನ್-ಲೈನ್ ಮೆಕ್ಯಾನಿಕಲ್ ಅಪ್‌ಡೇಟ್‌ ಮತ್ತು ಹೊರ ವಿನ್ಯಾಸದೊಂದಿಗೆ ಸಂತೋಷದಾಯಕ ಅನುಭವವನ್ನು ಚಾಲಕರಿಗೆ ನೀಡಲಿದೆ. ಹಾಗಾದರೆ ಹೊಸ ಹುಂಡೈ ವೆನ್ಯೂ ಎನ್-ಲೈನ್ ಮತ್ತು ಸ್ಟ್ಯಾಂಡರ್ಡ್ ವೆನ್ಯೂ ನಡುವಿನ ವ್ಯತ್ಯಾಸ ಮತ್ತು ಹೋಲಿಕೆಗಳನ್ನು ತಿಳಿಯೋಣ.

ಹುಂಡೈ ವೆನ್ಯೂ ಎನ್‌–ಲೈನ್‌ನ ಪ್ರಮುಖ ವ್ಯತ್ಯಾಸವೆಂದರೆ ಬಂಪರ್‌ಗಳು, ಬಾಗಿಲುಗಳು ಮತ್ತು ರೂಫ್‌–ರೇಲ್‌ಗಳ ಮೇಲೆ ಕೆಂಪು ಪಟ್ಟಿಯಿರುತ್ತದೆ. ಇದರ ಜೊತೆಗೆ, ಡಾರ್ಕ್ ಕ್ರೋಮ್ ಮತ್ತು ಹೊಸ 16-ಇಂಚಿನ ಮಿಶ್ರಲೋಹದಿಂದ ತಯಾರಿಸಿದ ಚಕ್ರಗಳು, ಕೆಂಪು ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ಮುಂಭಾಗದ ಗ್ರಿಲ್ ಕೂಡ ಇದೆ. ವೆನ್ಯೂ ಎನ್-ಲೈನ್ ಸ್ಪಾಯ್ಲರ್, ಸ್ಪ್ಲಿಟ್ ಸ್ಕಿಡ್ ಪ್ಲೇಟ್ ಮತ್ತು ಡ್ಯುಯಲ್-ಟಿಪ್ ಎಕ್ಸಾಸ್ಟ್ ಅನ್ನು ಸಹ ಪಡೆ. ಆದರೆ ಸ್ಟ್ಯಾಂಡರ್ಡ್‌ನಲ್ಲಿ ಎಕ್ಸಾಸ್ಟ್‌ ಅನ್ನು ಹೈಡ್‌ ಮಾಡಲಾಗಿತ್ತು. ಇದರ ಒಳಾಂಗಣವು ಕೆಂಪು ಬಣ್ಣದ AC ವೆಂಟ್‌ಗಳು ಮತ್ತು ಕಪ್ಪು ಬಣ್ಣದ ಸೀಟ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ : Hop OXO : ಭಾರತದಲ್ಲಿ ಬಿಡುಗಡೆಯಾದ ಹಾಪ್‌OXO ಎಲೆಕ್ಟ್ರಿಕಲ್‌ ಮೋಟಾರ್‌ಸೈಕಲ್‌ : ಫುಲ್‌ ಚಾರ್ಜ್‌ ಮಾಡಲು ಸಾಕು ಕೇವಲ 4 ಗಂಟೆ

ಹುಂಡೈ ವೆನ್ಯೂ ಎನ್-ಲೈನ್ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನ್‌ ಹೊಂದಿದ್ದು 118 bhp ಪವರ್ ಮತ್ತು 172 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಅನ್ನು ಜೋಡಿಸಲಾಗಿದೆ. ಹೆಚ್ಚುವರಿಯಾಗಿ, ಹ್ಯುಂಡೈ N-ಲೈನ್‌ನ ಸಸ್ಪೆನ್ಷನ್‌ ಮತ್ತು ಸ್ಟೀರಿಂಗ್ ಅನ್ನು ಸ್ಪೋರ್ಟಿ ಎಲಿಮೆಂಟ್‌ಗೆ ಸೇರಿಸಲಾಗಿದೆ. ವೆನ್ಯೂ ಎನ್-ಲೈನ್ ಹೆಡ್‌ಲೈಟ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್, ಧ್ವನಿ ಗುರುತಿಸುವಿಕೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕನೆಕ್ಟ್ ಕಾರ್ ಟೆಕ್ ಮುಂತಾದ ಅಡ್ವಾನ್ಸ್‌ ಫೀಚರ್‌ಗಳನ್ನು ಹೊಂದಿದೆ.

ಗ್ರಾಹಕರು ಹುಂಡೈ ವೆನ್ಯೂ ಎನ್‌–ಲೈನ್‌ ಅನ್ನು ಥಂಡರ್ ಬ್ಲೂ, ಪೋಲಾರ್ ವೈಟ್ ಮತ್ತು ಶಾಡೋ ಗ್ರೇ ಸೇರಿದಂತೆ ಮೂರು ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ : Top Upcoming Electric Cars in India : ಭಾರತದಲ್ಲಿ 2022ರಲ್ಲಿ ರಸ್ತೆಗೆ ಇಳಿಯಲಿರುವ ಟಾಪ್ ಎಲೆಕ್ಟ್ರಿಕಲ್‌ ಕಾರ್‌ಗಳು!!

(Hyundai Venue N-Line Vs Hyundai Venue what is venue N-Line specification)

Comments are closed.