Queen Elizabeth:ಇಂದು ಬ್ರಿಟನ್‌ ರಾಣಿ ಎಲಿಜಬೆತ್‌ರವರ ಅಂತ್ಯಕ್ರೀಯೆ: ವಿಶ್ವದ ಗಣ್ಯರು ಬಾಗಿ

ಬ್ರಿಟನ್‌ ರಾಣಿ ಎಲಿಜಬೆತ್‌(Queen Elizabeth) ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಹನ್ನೊಂದನೇ ದಿನ ಬಳಿಕ ಇಂದು ಅಂತ್ಯಕ್ರೀಯೆ ನಡೆಯಲಿದೆ. ಅಂತ್ಯ ಸಂಸ್ಕಾರದಲ್ಲಿ ವಿಶ್ವದ ಹಲವು ರಾಷ್ಟ್ರಗಳಿಂದ ಗಣ್ಯರು ಆಗಮಿಸಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ಅಂತಿಮ ಯಾತ್ರೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಇದೀಗ ಬ್ರಿಟನ್‌ ರಾಣಿಯ ಅಂತ್ಯಕ್ರಿಯೆ ವಿಶ್ವದ ಗಮನ ಸೆಳೆದಿದೆ.

96ನೇ ವಯಸ್ಸಿನಲ್ಲಿ ಮೃತರಾದ ರಾಣಿ ಎಲಿಜಬೇತ್‌ (Queen Elizabeth)ಅಂತ್ಯಕ್ರಿಯೆ ವಿಶ್ವದ ಮಹತ್ವದ ವಿದ್ಯಮಾನಗಳಲ್ಲಿ ಒಂದಾಗಿದ್ದು, ವಿಶ್ವದ ಗಮನ ಸೆಳೆದಿದೆ. ಧಾರ್ಮಿಕ ಹಾಗೂ ರಾಜಮನೆತನ ಶಿಷ್ಟಾಚಾರದ ವಿಧಿವಿಧಾನಗಳು ಸುಮಾರು 4 ಗಂಟೆಗಳ ಸುದೀರ್ಘ ಕಾಲವಧಿಯ ವರೆಗೆ ನೆಡೆಯಲಿದೆ. ಬ್ರಿಟನ್‌ ನಲ್ಲಿ ಈ ಹಿಂದೆ 1965ರಲ್ಲಿ 2ನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್‌ ಸಾಮ್ರಾಜ್ಯವನ್ನು ನೆಡೆಸುತ್ತಿದ್ದ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ರವರ ಅಂತ್ಯ ಸಂಸ್ಕಾರವನ್ನು ಮೊದಲ ಬಾರಿಗೆ ಎಲ್ಲಾ ಸರಕಾರಿ ಗೌರವಗಳೊಂದಿಗೆ ನೆಡೆದಿತ್ತು. ತದ ನಂತರದಲ್ಲಿ ಇದೀಗ ಮತ್ತೆ ಅಂತಹದ್ದೇ ವಾತಾವರಣ ನಿರ್ಮಾಣವಾಗಿದೆ.

ರಾಣಿ ಎಲಿಜಬೆತ್‌ರವರ ನಿಧನದ ನಂತರ ಇಡೀ ಬ್ರಿಟನ್‌ನಲ್ಲಿ ಶೋಕಾಚರಣೆಯಲ್ಲಿ ಮುಳುಗಿದೆ. ಇಂದು ರಾಣಿಯವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರದೊಂದಿಗೆ ಬ್ರಿಟನ್ ನಲ್ಲಿ ಹನ್ನೊಂದನೇ ದಿನದ ರಾಷ್ಟ್ರೀಯ ಶೋಕಾಚರಣೆ ಕೂಡ ಅಂತ್ಯಗೊಳಲಿದೆ. ಬ್ರಿಟನ್‌ ರಾಜ ಮನೆತನಕ್ಕೆ ಸಂಬಂಧಿಸಿದಂತಹ ಖಾಸಗಿ ವಿಧಿ ವಿಧಾನವಾಗಿದ್ದರೂ, ಸಹ ಇದು ವಿಶ್ವಮಟ್ಟದಲ್ಲಿ ದೊಡ್ಡ ಸುದ್ದಿಯಾಗಲಿದೆ.

ರಾಣಿ ಎಲಿಜಬೆತ್‌ರವರ ಅಂತ್ಯಕ್ರಿಯೆಯು ಬ್ರಿಟನ್‌ನ ಹಲವು ಕಡೆ ಇರುವ 125 ಸಿನಿಮಾ ಥಿಯೇಟರ್‌ಗಳಲ್ಲಿ ನೇರ ಪ್ರಸಾರವನ್ನು ಏರ್ಪಡಿಸಿದ್ದಾರೆ. ಹಾಗೆ ಸಾರ್ವಜನಿಕರು ರಾಣಿಯವರ ಅಂತ್ಯಸಂಸ್ಕಾರವನ್ನು ನೋಡುವಂತೆ ಅಲ್ಲಿನ ಪ್ರಮುಖ ಸರ್ಕಲ್ ಗಳು, ಕ್ಯಾಥೆಡ್ರೆಲ್‌ ಗಳು ಮತ್ತು ಉದ್ಯಾನವನಗಳಲ್ಲಿ ದೊಡ್ಡ ದೊಡ್ಡ ಎಲೆಕ್ಟ್ರಿಕ್‌ ಪರದೆಗಳನ್ನು ಸ್ಥಾಪಿಸಿದ್ದಾರೆ. ದಿವಂಗತ ರಾಣಿ ಎಲಿಜಬೆತ್ ರವರಿಗೆ ವಿಶ್ವದ ಬಹುತೇಕ ಹೆಚ್ಚಿನ ಪ್ರಮುಖ ದೇಶಗಳ ನಾಯಕರು ಅಂತ್ಯಸಂಸ್ಕಾರದ ವೇಳೆಗೆ ಅಂತಿಮ ನಮನವನ್ನು ಸಲ್ಲಿಸಲಿದ್ದಾರೆ.

ರಾಣಿ ಅಂತ್ಯಸಂಸ್ಕಾರದಲ್ಲಿ ಬ್ರಿಟನ್‌ ರಾಜಮನೆತನ, ಮಿಲಿಟರಿ ಅಧಿಕಾರಿಗಳು, ರಾಜಕಾರಣಿಗಳು ನ್ಯಾಯಧೀಶರು ಮತ್ತು ದತ್ತಿ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ವೆಸ್ಟ್‌ ಮಿನಿಸ್ಟರ್‌ ಅಬೆಯಲ್ಲಿ ನಡೆಯಲಿರುವ ಅಂತ್ಯಸಂಸ್ಕಾರವನ್ನು ವಿಶ್ವದಾದ್ಯಂತ ನೂರಾರು ಕೋಟಿ ಜನರು ವೀಕ್ಷಣೆ ಮಾಡಲಿದ್ದಾರೆ. ಹಾಗೆ ಎಲಿಜಬೆತ್‌ ರಾಣಿಯ ಪಾರ್ಥಿವ ಶರೀರವನ್ನು ರಾಣಿ ವಿಕ್ಟೋರಿಯಾ ಅಂತ್ಯಸಂಸ್ಕಾರಕ್ಕೆ ಬಳಸಿದ ಬಂದೂಕಿನ ಗಾಡಿಯಲಿಯೇ ಕೊಂಡೊಯ್ಯಲಿದ್ದಾರೆ. ರಾಣಿ ಶವಪೆಟ್ಟಿಗೆಯನ್ನು ಹೊತ್ತ ಬಂದೂಕಿನ ಗಾಡಿಯನ್ನು 142 ನಾವಿಕರು ಎಳೆಯಲಿದ್ದಾರೆ.

ರಾಯಲ್‌ ನೇವಿ ಮತ್ತು ರಾಯಲ್‌ ಮೆರೈನ್‌ ಘಟಕಗಳಿಗೆ ಸೇರಿದ ಸೈನಿಕರು ರಾಣಿಯ ಪಾರ್ಥಿವ ಶರೀರ ಹೊತ್ತ ಗಾಡಿ ಬರುವ ಮಾರ್ಗದಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಹಾಗೆ ಮೆರವಣಿಗೆಯು ಪಾರ್ಲಿಮೆಂಟ್‌ ಸ್ಕ್ವೇರ್‌ ಮೂಲಕ ಹಾದುಹೋಗುವಾಗ, ಭೂಸೇನೆ, ನೌಜಾಪಡೆ ಮತ್ತು ವಾಯುಪಡೆ ಸದಸ್ಯರು ಗೌರವ ರಕ್ಷೆಯನ್ನು ನೀಡಲಿದ್ದು, ಅದೇ ವೇಳೆಯಲ್ಲಿ ಮೈರೆನ್‌ ಬ್ಯಾಂಡ್‌ ಗೀತೆಗಳನ್ನು ನುಡಿಸುತ್ತಾರೆ. 200 ಜನರು ಇರುವ ಗೂರ್ಖಾ ಬ್ರಿಗೇಡ್‌ ಮತ್ತು ರಾಯಲ್‌ ಏರ್‌ ಫೋರ್ಸ್‌ ಬ್ಯಾಂಡ್ ನ ಸಿಬ್ಬಂದಿವರ್ಗದವರು ಕೂಡ ಶವಪೆಟ್ಟಿಗೆ ಜೊತೆ ಹೆಜ್ಜೆ ಹಾಕಲಿದ್ದಾರೆ. ಸ್ಕಾಟಿಷ್‌ ಮತ್ತು ಐರಿಷ್‌ ರೆಜಿಮೆಂಟ್ ಗಳೂ ಅಂತ್ಯಸಂಸ್ಕಾರದ ಮೆರವಣಿಗೆಯನ್ನು ಮುನ್ನೆಡೆಸಲಿದ್ದಾರೆ.

ಇವರೊಂದಿಗೆ ಬ್ರಿಟನ್‌ ನ ಮಹಾರಾಜ ಚಾರ್ಲ್ಸ್‌ ಮತ್ತು ರಾಜಮನೆತನಕ್ಕೆ ಸಂಬಂದಿಸಿದ ಸದಸ್ಯರು ಕೂಡ ಶವಪಟ್ಟಿಗೆಯೊಂದಿಗೆ ಹೆಜ್ಜೆ ಹಾಕಲಿದ್ದಾರೆ. ರಾಣಿ ಅಂತ್ಯಸಂಸ್ಕಾರಕ್ಕೆಂದು ಬ್ರಿಟನ್‌ ಮತ್ತು ವಿಶ್ವದೆಲ್ಲಡೆಯಿಂದ ಸಾವಿರಾರು ಗಣ್ಯರು ಬರುವುದ್ದರಿಂದ ಬ್ರಿಟನ್‌ನಿನ ಪೊಲೀಸ್‌ ರಿಗೆ ದೊಡ್ಡ ಸವಾಲಿನಂತಾಗಿದೆ. ಇಂಗ್ಲೆಂಡಿನ ಹಲವು ಕಡೆಯಿಂದ ಸುಮಾರು 2000ಕ್ಕೂ ಹೆಚ್ಚಿನ ಪೊಲೀಸ್‌ ಅಧಿಕಾರಿಗಳು ಸ್ಕಾಟ್ಲೆಂಡ್‌ ಯಾರ್ಡ್ ಗೆ ಸಹಾಯಕ್ಕೆಂದು ಕರೆಸಲಾಗಿದೆ.

ರಾಣಿಯ ಪಾರ್ಥಿವ ಶರೀರವನ್ನು ರಾಜಮನೆತನಕ್ಕೆ ಮೀಸಲಾಗಿರುವ ಸ್ಮಶಾನದಲ್ಲಿ ಸಮಾಧಿ ಮಾಡಲಾಗುತ್ತದೆ. ದಿವಂಗತ ಪತಿ ಪ್ರಿನ್ಸ್‌ ಫಿಲಿಪ್‌, ಸಹೋದರಿಯರ ಮತ್ತು ತಂದೆ-ತಾಯಿಗಳ ಸಮಾಧಿಗಳ ಪಕ್ಕದಲ್ಲೇ ರಾಣಿ ಎಲಿಜಬೆತ್‌ರವರ ಅಂತಿಮ ವಿಧಿವಿಧಾನಗಳು ನೆಡೆಯಲಿವೆ. ದಿವಂಗತ ರಾಣಿ ಎಲಿಜಬೆತ್‌ ರವರು ಸುಮಾರು 70 ವರ್ಷ ಪಟ್ಟದಲ್ಲಿದ್ದು ಆಳ್ವಿಕೆ ಮಾಡಿದ್ದಾರೆ. ಹಾಗಾಗಿ ಬ್ರಿಟನ್‌ನಲ್ಲಿ ಪ್ಲಾಟಿನಂ ಜ್ಯುಬಿಲಿಯನ್ನು ಆಚರಿಸಿಕೊಂಡ ಮೊದಲ ಬ್ರಿಟಿಷ್‌ ರಾಣಿ ಎಂಬ ಹೆಗ್ಗಳಿಕೆಯು ಪಾತ್ರರಾಗಿದ್ದಾರೆ.

ರಾಣಿ ಅಂತ್ಯಸಂಸ್ಕಾರದಲ್ಲಿ ಫ್ರಾನ್ಸ್‌, ಜಪಾನ್‌, ಭಾರತ ಐರೋಪ್ಯ ಒಕ್ಕೂಟ ಹಾಗೂ ಬಹುತೇಕ ದೇಶದ ನಾಯಕರು ಭಾಗವಹಿಸಲಿದ್ದಾರೆ. ಆದರೆ ಮುಖ್ಯವಾಗಿ ಅಫ್ಘಾನಿಸ್ತಾನ, ಮ್ಯಾನ್ಮಾರ್‌, ಸಿರಿಯಾ, ರಷ್ಯಾ ಮತ್ತು ಉತ್ತರ ಕೊರಿಯಾದ ಮುಖಂಡರನ್ನು ಅಂತ್ಯಕ್ರೀಯೆಗೆ ಆಹ್ವಾನ ನೀಡಿಲ್ಲ.

ಇಂದು ಬ್ರಿಟನ್‌ ರಾಣಿ ಎಲಿಜಬೆತ್‌ರವರ ಅಂತ್ಯಕ್ರೀಯೆ: ವಿಶ್ವದ ಗಣ್ಯರು ಬಾಗಿ

ಬ್ರಿಟನ್‌ ರಾಣಿ ಎಲಿಜಬೆತ್‌ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಹನ್ನೊಂದನೇ ದಿನ ಬಳಿಕ ಇಂದು ಅಂತ್ಯಕ್ರೀಯೆ ನಡೆಯಲಿದೆ. ಅಂತ್ಯ ಸಂಸ್ಕಾರದಲ್ಲಿ ವಿಶ್ವದ ಹಲವು ರಾಷ್ಟ್ರಗಳಿಂದ ಗಣ್ಯರು ಆಗಮಿಸಿದ್ದು, ೧೦ ಲಕ್ಷಕ್ಕೂ ಅಧಿಕ ಮಂದಿ ಅಂತಿಮ ಯಾತ್ರೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಇದೀಗ ಬ್ರಿಟನ್‌ ರಾಣಿಯ ಅಂತ್ಯಕ್ರೀಯೆ ವಿಶ್ವದ ಗಮನ ಸೆಳೆದಿದೆ.

96ನೇ ವಯಸ್ಸಿನಲ್ಲಿ ಮೃತರಾದ ರಾಣಿ ಎಲಿಜಬೇತ್‌ ಅಂತ್ಯಕ್ರಿಯೆ ವಿಶ್ವದ ಮಹತ್ವದ ವಿದ್ಯಮಾನಗಳಲ್ಲಿ ಒಂದಾಗಿದ್ದು, ವಿಶ್ವದ ಗಮನ ಸೆಳೆದಿದೆ. ಧಾರ್ಮಿಕ ಹಾಗೂ ರಾಜಮನೆತನ ಶಿಷ್ಟಾಚಾರದ ವಿಧಿವಿಧಾನಗಳು ಸುಮಾರು 4 ಗಂಟೆಗಳ ದೀರ್ಘಕಾಲವಧಿಯ ವರೆಗೆ ನೆಡೆಯಲಿದೆ. ಬ್ರಿಟನ್‌ ನಲ್ಲಿ ಈ ಹಿಂದೆ 1965ರಲ್ಲಿ 2ನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್‌ ಸಾಮ್ರಾಜ್ಯವನ್ನು ನೆಡೆಸುತ್ತಿದ್ದ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ರವರ ಅಂತ್ಯ ಸಂಸ್ಕಾರವನ್ನು ಮೊದಲ ಬಾರಿಗೆ ಎಲ್ಲಾ ಸರಕಾರಿ ಗೌರವಗಳೊಂದಿಗೆ ನೆಡೆದಿತ್ತು. ತದ ನಂತರದಲ್ಲಿ ಇದೀಗ ಮತ್ತೆ ಅಂತಹದ್ದೇ ವಾತಾವರಣ ನಿರ್ಮಾಣವಾಗಿದೆ.

ರಾಣಿ ಎಲಿಜಬೆತ್‌ರವರ ನಿಧನದ ನಂತರ ಇಡೀ ಬ್ರಿಟನ್‌ನಲ್ಲಿ ಶೋಕಾಚರಣೆಯಲ್ಲಿ ಮುಳುಗಿದೆ. ಇಂದು ರಾಣಿಯವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರದೊಂದಿಗೆ ಬ್ರಿಟನ್ ನಲ್ಲಿ ಹನ್ನೊಂದನೇ ದಿನದ ರಾಷ್ಟ್ರೀಯ ಶೋಕಾಚರಣೆ ಕೂಡ ಅಂತ್ಯಗೊಳಲಿದೆ. ಬ್ರಿಟನ್‌ ರಾಜ ಮನೆತನಕ್ಕೆ ಸಂಬಂಧಿಸಿದಂತಹ ಖಾಸಗಿ ವಿಧಿ ವಿಧಾನವಾಗಿದ್ದರೂ, ಸಹ ಇದು ವಿಶ್ವಮಟ್ಟದಲ್ಲಿ ದೊಡ್ಡ ಸುದ್ದಿಯಾಗಲಿದೆ.

ರಾಣಿ ಎಲಿಜಬೆತ್‌ರವರ ಅಂತ್ಯಕ್ರಿಯೆಯು ಬ್ರಿಟನ್‌ನ ಹಲವು ಕಡೆ ಇರುವ 125 ಸಿನಿಮಾ ಥಿಯೇಟರ್‌ಗಳಲ್ಲಿ ನೇರ ಪ್ರಸಾರವನ್ನು ಏರ್ಪಡಿಸಿದ್ದಾರೆ. ಹಾಗೆ ಸಾರ್ವಜನಿಕರು ರಾಣಿಯವರ ಅಂತ್ಯಸಂಸ್ಕಾರವನ್ನು ನೋಡುವಂತೆ ಅಲ್ಲಿನ ಪ್ರಮುಖ ಸರ್ಕಲ್ ಗಳು, ಕ್ಯಾಥೆಡ್ರೆಲ್‌ ಗಳು ಮತ್ತು ಉದ್ಯಾನವನಗಳಲ್ಲಿ ದೊಡ್ಡ ದೊಡ್ಡ ಎಲೆಕ್ಟ್ರಿಕ್‌ ಪರದೆಗಳನ್ನು ಸ್ಥಾಪಿಸಿದ್ದಾರೆ. ದಿವಂಗತ ರಾಣಿ ಎಲಿಜಬೆತ್ ರವರಿಗೆ ವಿಶ್ವದ ಬಹುತೇಕ ಹೆಚ್ಚಿನ ಪ್ರಮುಖ ದೇಶಗಳ ನಾಯಕರು ಅಂತ್ಯಸಂಸ್ಕಾರದ ವೇಳೆಗೆ ಅಂತಿಮ ನಮನವನ್ನು ಸಲ್ಲಿಸಲಿದ್ದಾರೆ.

ರಾಣಿ ಅಂತ್ಯಸಂಸ್ಕಾರದಲ್ಲಿ ಬ್ರಿಟನ್‌ ರಾಜಮನೆತನ, ಮಿಲಿಟರಿ ಅಧಿಕಾರಿಗಳು, ರಾಜಕಾರಣಿಗಳು ನ್ಯಾಯಧೀಶರು ಮತ್ತು ದತ್ತಿ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ವೆಸ್ಟ್‌ ಮಿನಿಸ್ಟರ್‌ ಅಬೆಯಲ್ಲಿ ನಡೆಯಲಿರುವ ಅಂತ್ಯಸಂಸ್ಕಾರವನ್ನು ವಿಶ್ವದಾದ್ಯಂತ ನೂರಾರು ಕೋಟಿ ಜನರು ವೀಕ್ಷಣೆ ಮಾಡಲಿದ್ದಾರೆ. ಹಾಗೆ ಎಲಿಜಬೆತ್‌ ರಾಣಿಯ ಪಾರ್ಥಿವ ಶರೀರವನ್ನು ರಾಣಿ ವಿಕ್ಟೋರಿಯಾ ಅಂತ್ಯಸಂಸ್ಕಾರಕ್ಕೆ ಬಳಸಿದ ಬಂದೂಕಿನ ಗಾಡಿಯಲಿಯೇ ಕೊಂಡೊಯ್ಯಲಿದ್ದಾರೆ. ರಾಣಿ ಶವಪೆಟ್ಟಿಗೆಯನ್ನು ಹೊತ್ತ ಬಂದೂಕಿನ ಗಾಡಿಯನ್ನು 142 ನಾವಿಕರು ಎಳೆಯಲಿದ್ದಾರೆ.

ರಾಯಲ್‌ ನೇವಿ ಮತ್ತು ರಾಯಲ್‌ ಮೆರೈನ್‌ ಘಟಕಗಳಿಗೆ ಸೇರಿದ ಸೈನಿಕರು ರಾಣಿಯ ಪಾರ್ಥಿವ ಶರೀರ ಹೊತ್ತ ಗಾಡಿ ಬರುವ ಮಾರ್ಗದಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಹಾಗೆ ಮೆರವಣಿಗೆಯು ಪಾರ್ಲಿಮೆಂಟ್‌ ಸ್ಕ್ವೇರ್‌ ಮೂಲಕ ಹಾದುಹೋಗುವಾಗ, ಭೂಸೇನೆ, ನೌಜಾಪಡೆ ಮತ್ತು ವಾಯುಪಡೆ ಸದಸ್ಯರು ಗೌರವ ರಕ್ಷೆಯನ್ನು ನೀಡಲಿದ್ದು, ಅದೇ ವೇಳೆಯಲ್ಲಿ ಮೈರೆನ್‌ ಬ್ಯಾಂಡ್‌ ಗೀತೆಗಳನ್ನು ನುಡಿಸುತ್ತಾರೆ. 200 ಜನರು ಇರುವ ಗೂರ್ಖಾ ಬ್ರಿಗೇಡ್‌ ಮತ್ತು ರಾಯಲ್‌ ಏರ್‌ ಫೋರ್ಸ್‌ ಬ್ಯಾಂಡ್ ನ ಸಿಬ್ಬಂದಿವರ್ಗದವರು ಕೂಡ ಶವಪೆಟ್ಟಿಗೆ ಜೊತೆ ಹೆಜ್ಜೆ ಹಾಕಲಿದ್ದಾರೆ. ಸ್ಕಾಟಿಷ್‌ ಮತ್ತು ಐರಿಷ್‌ ರೆಜಿಮೆಂಟ್ ಗಳೂ ಅಂತ್ಯಸಂಸ್ಕಾರದ ಮೆರವಣಿಗೆಯನ್ನು ಮುನ್ನೆಡೆಸಲಿದ್ದಾರೆ.

ಇವರೊಂದಿಗೆ ಬ್ರಿಟನ್‌ ನ ಮಹಾರಾಜ ಚಾರ್ಲ್ಸ್‌ ಮತ್ತು ರಾಜಮನೆತನಕ್ಕೆ ಸಂಬಂದಿಸಿದ ಸದಸ್ಯರು ಕೂಡ ಶವಪಟ್ಟಿಗೆಯೊಂದಿಗೆ ಹೆಜ್ಜೆ ಹಾಕಲಿದ್ದಾರೆ. ರಾಣಿ ಅಂತ್ಯಸಂಸ್ಕಾರಕ್ಕೆಂದು ಬ್ರಿಟನ್‌ ಮತ್ತು ವಿಶ್ವದೆಲ್ಲಡೆಯಿಂದ ಸಾವಿರಾರು ಗಣ್ಯರು ಬರುವುದ್ದರಿಂದ ಬ್ರಿಟನ್‌ನಿನ ಪೊಲೀಸ್‌ ರಿಗೆ ದೊಡ್ಡ ಸವಾಲಿನಂತಾಗಿದೆ. ಇಂಗ್ಲೆಂಡಿನ ಹಲವು ಕಡೆಯಿಂದ ಸುಮಾರು 2000ಕ್ಕೂ ಹೆಚ್ಚಿನ ಪೊಲೀಸ್‌ ಅಧಿಕಾರಿಗಳು ಸ್ಕಾಟ್ಲೆಂಡ್‌ ಯಾರ್ಡ್ ಗೆ ಸಹಾಯಕ್ಕೆಂದು ಕರೆಸಲಾಗಿದೆ.

ರಾಣಿಯ ಪಾರ್ಥಿವ ಶರೀರವನ್ನು ರಾಜಮನೆತನಕ್ಕೆ ಮೀಸಲಾಗಿರುವ ಸ್ಮಶಾನದಲ್ಲಿ ಸಮಾಧಿ ಮಾಡಲಾಗುತ್ತದೆ. ದಿವಂಗತ ಪತಿ ಪ್ರಿನ್ಸ್‌ ಫಿಲಿಪ್‌, ಸಹೋದರಿಯರ ಮತ್ತು ತಂದೆ-ತಾಯಿಗಳ ಸಮಾಧಿಗಳ ಪಕ್ಕದಲ್ಲೇ ರಾಣಿ ಎಲಿಜಬೆತ್‌ರವರ ಅಂತಿಮ ವಿಧಿವಿಧಾನಗಳು ನೆಡೆಯಲಿವೆ. ದಿವಂಗತ ರಾಣಿ ಎಲಿಜಬೆತ್‌ ರವರು ಸುಮಾರು 70 ವರ್ಷ ಪಟ್ಟದಲ್ಲಿದ್ದು ಆಳ್ವಿಕೆ ಮಾಡಿದ್ದಾರೆ. ಹಾಗಾಗಿ ಬ್ರಿಟನ್‌ನಲ್ಲಿ ಪ್ಲಾಟಿನಂ ಜ್ಯುಬಿಲಿಯನ್ನು ಆಚರಿಸಿಕೊಂಡ ಮೊದಲ ಬ್ರಿಟಿಷ್‌ ರಾಣಿ ಎಂಬ ಹೆಗ್ಗಳಿಕೆಯು ಪಾತ್ರರಾಗಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಲೀಕ್ ಕೇಸ್.. ಮೂವರು ಅರೆಸ್ಟ್

ಇದನ್ನೂ ಓದಿ : ಭಾವಿ ಸೊಸೆ ಜೊತೆ ಮುಕೇಶ್ ಅಂಬಾನಿ ಟೆಂಪಲ್ ರನ್

ರಾಣಿ ಅಂತ್ಯಸಂಸ್ಕಾರದಲ್ಲಿ ಫ್ರಾನ್ಸ್‌, ಜಪಾನ್‌, ಭಾರತ ಐರೋಪ್ಯ ಒಕ್ಕೂಟ ಹಾಗೂ ಬಹುತೇಕ ದೇಶದ ನಾಯಕರು ಭಾಗವಹಿಸಲಿದ್ದಾರೆ. ಆದರೆ ಮುಖ್ಯವಾಗಿ ಅಫ್ಘಾನಿಸ್ತಾನ, ಮ್ಯಾನ್ಮಾರ್‌, ಸಿರಿಯಾ, ರಷ್ಯಾ ಮತ್ತು ಉತ್ತರ ಕೊರಿಯಾದ ಮುಖಂಡರನ್ನು ಅಂತ್ಯಕ್ರೀಯೆಗೆ ಆಹ್ವಾನ ನೀಡಿಲ್ಲ.

Britain’s Queen Elizabeth’s funeral today: world dignitaries bow

Comments are closed.