Lamborghini Urus Performante : ಭಾರತಕ್ಕೆ ಇಂದು ಎಂಟ್ರಿ ಕೊಡಲಿರುವ ಲ್ಯಾಂಬೊರ್ಗಿನಿ ಯುರಸ್‌ ಪರ್ಫಾರ್ಮ್ನಟ್‌

ಲಗ್ಜಸರಿ ವಾಹನಗಳ ತಯಾರಿಕಾ ಕಂಪನಿ ಲಾಂಬೊರ್ಗಿನಿ (Lamborghini) ತನ್ನ ಯುರಸ್‌ ಪರ್ಫಾಮ್ನಟ್‌ (Lamborghini Urus Performante) ಅನ್ನು ಭಾರತದ ಆಟೋಮೊಬೈಲ್‌ ಮಾರುಕಟ್ಟೆಗೆ ಪರಿಚಯಿಸಲಿದೆ. ಇದು ನವೆಂಬರ್‌ 24, ಗುರವಾರದಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಕಾರು ಮಿಡ್‌–ಲಿಫ್ಟ್‌ ಫಾಸಿಲಿಫಟ್‌ ಲಕ್ಸುರಿ ಕಾರಾಗಿದೆ. ಇದನ್ನು ಈ ವರ್ಷದ ಆಗಸ್ಟ್‌ನಲ್ಲಿ ಪರಿಚಯಿಸಲಾಗಿತ್ತು. ಈ ಕಾರು ಟ್ವಿನ್-ಟರ್ಬೊ ಚಾರ್ಜ್ಡ್ ವಿ8 ಎಂಜಿನ್ ಅನ್ನು ಹೊಂದಿದೆ.

ಲ್ಯಾಂಬೊರ್ಗಿನಿ ಹಲವು ಐಷಾರಾಮಿ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಈ ಬ್ಯಾಂಡ ಇತ್ತಿಚೆಗಷ್ಟೆ ಹೊಸ Huracan Tecnica ಅನ್ನುವ ಕಾರನ್ನು 4.04 ಕೋಟಿಗೆ ಬಿಡುಗಡೆ ಮಾಡಿತ್ತು. ಈಗ ಮತ್ತೊಂದು ಕಾರನ್ನು ಬಿಡುಗಡೆ ಮಾಡುತ್ತಿದೆ. ಈಗ ಬಿಡುಗಡೆಗೆ ಸಿದ್ಧವಾಗಿರುವ ಲ್ಯಾಂಬೊರ್ಗಿನಿ ಕಾರಿನ ವಿಶೇಷತೆಗಳು ಇಲ್ಲಿವೆ.

ಲ್ಯಾಂಬೊರ್ಗಿನಿ ಯುರಸ್‌ ಪರ್ಫಾಮ್ನಟ್‌ ಎಂಜಿನ್‌ ಬಗ್ಗೆ ಹೇಳುವುದಾದರೆ ಇದು 4.0 ಲೀಟರ್‌ ಟ್ವಿನ್‌–ಟರ್ಬೊ ಚಾರ್ಜ್ಡ್‌ ವಿ8 ಎಂಜಿನ್‌ ಹೊಂದಿದೆ. ಈ ಎಂಜಿನ್‌, 650 ಸಿಸಿಯಿಂದ 666 ಸಿಸಿ ವರೆಗೆ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಈ ಕಾರು ಹೆಚ್ಚು ಶಕ್ತಿಶಾಲಿಯಾಗಿದೆ. ಲ್ಯಂಬೊರ್ಗಿನಿ ಯುರಸ್‌ ಸೂಪರ್‌ ಕಾರು ಕೆವಲ 3.3 ಸೆಕೆಂಡುಗಳಲ್ಲಿ 0 ದಿಂದ 100kph ವೇಗವನ್ನು ಪಡೆಯುತ್ತದೆ. ಕಾರಿನ ಗರಿಷ್ಠ ವೇಗವು ಗಂಟೆಗೆ 306 ಕಿಮಿ ಆಗಿದೆ.

ಈ ಕಾರಿನ ವಿಶೇಷತೆಗಳೇನೆಂದರೆ ಇದರ ಡ್ರೈವಿಂಗ್‌ ಮೋಡ್‌ಗಳನ್ನು ನವೀಕರಿಸಲಾಗಿದೆ. ಇದು ಹೊಸದಾದ ರ್‍ಯಾಲಿ ಮೋಡ್‌ ಅನ್ನು ಪಡೆದುಕೊಂಡಿದೆ. ಸ್ಟ್ರಾಡಾ, ಸ್ಪೋರ್ಟ್‌ ಮತ್ತು ಕೊರ್ಸ್‌ ಎಂಬ ಮೋಡ್‌ಗಳಿವೆ. ಯುರಸ್‌ ಕಾರು ಕಾರ್ಬನ್‌ ಫೈಬರ್‌ ಹುಡ್‌ ಜೊತೆಗೆ ಡಾರ್ಕ್‌ ಇಂಟೀರಿಯರ್‌ ಹೊಂದಿರುವುದು ವಿಶೇಷವಾಗಿದೆ. ಗ್ರಾಹಕರು ತಮ್ಮ ಇಚ್ಛೆಯಂತೆ ವಿನ್ಯಾಸವನ್ನು ಪಡೆಯಬಹುದಾಗಿದೆ. ಮುಂಭಾಗದ ಬಂಪರ್‌ ವಿನ್ಯಾಸದಲ್ಲಿ ಬದಲಾವಣೆಯಾಗಿದೆ. ಇದು 22 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಅಳವಡಿಸಿಕೊಂಡಿದೆ. ಹಿಂಭಾಗದ ಬಂಪರ್‌ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಹೊಸ ಸ್ಪಾಯ್ಲರ್‌ ಮತ್ತು ಕಾರ್ಬನ್‌–ಫೈಬರ್‌ ವೀಲ್‌ ಆರ್ಚರ್‌ಗಳು ಸೇರಿಕೊಂಡಿವೆ.

ಯುರಸ್‌ ಪರ್ಫಾರ್ಮ್ನಟ್‌ ವಿಶ್ವದ ಅತ್ಯಂತ ವೇಗದ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು ಮಾಸೆರೋಟಿ ಲೆವಾಂಟೆ ಟ್ರೋಫಿಯೊ, ಪೋರ್ಷೆ ಕಯೆನ್ನೆ ಟರ್ಬೊ ಜಿಟಿ, ಆಸ್ಟನ್ ಮಾರ್ಟಿನ್ ಡಿಬಿಎಕ್ಸ್ 707 ಮುಂತಾದುವಗಳಿಗೆ ಪ್ರತಿಸ್ಪರ್ಧೆ ನೀಡಲಿದೆ. ಈ ಎಲ್ಲಾ ಎಸ್‌ಯುವಿಗಳು ಭಾರತದಲ್ಲಿ ಲಭ್ಯವಿದೆ. ಲ್ಯಾಂಬೊರ್ಗಿನಿ ಯುರಸ್‌ ಪರ್ಫಾರ್ಮ್ನಟ್‌ ಬೆಲೆಯು ಸುಮಾರು 4 ಕೋಟಿ (ಎಕ್ಸ್‌ ಶೋ ರೂಂ) ಎಂದು ನೀರಿಕ್ಷಿಸಬಹುದಾಗಿದೆ.

ಇದನ್ನೂ ಓದಿ : Tata Tigor EV : ಅಪ್ಡೇಟ್‌ ಆಗಿ ಬಿಡುಗಡೆಯಾದ ಕಾಂಪ್ಯಾಕ್ಟ್‌ ಇಲೆಕ್ಟ್ರಿಕ್‌ ಸೆಡಾನ್‌ ಕಾರು ‘ಟಿಗೋರ್‌’

ಇದನ್ನೂ ಓದಿ : Vespa : ಸೂಪರ್‌ ರೆಟ್ರೊ ಲುಕ್‌ನಲ್ಲಿ ಹೊಸದಾಗಿ ಅಪ್ಡೇಟ್‌ ಆದ ವೆಸ್ಪಾ GTV ಸ್ಕೂಟರ್‌

(Lamborghini Urus Performante luxury car will launch today)

Comments are closed.