ನಮ್ಮ ಟಾರ್ಗೆಟ್ ಕದ್ರಿ ಎಂದ ಉಗ್ರರು : ಮಂಗಳೂರು ಬ್ಲಾಸ್ಟ್ ಹೊಣೆ ಹೊತ್ತ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್

ಮಂಗಳೂರು : Mangaluru Blast islamic Resistance Council : ಮಂಗಳೂರಲ್ಲಿ ಆಟೋದಲ್ಲಿ ನಡೆದಿರುವ ಸ್ಪೋಟ ಪ್ರಕರಣಕ್ಕೆ ಹಲವು ತಿರುವು ಪಡೆದುಕೊಂಡಿದೆ. ಇದೀಗ ಉಗ್ರರ ಟಾರ್ಗೆಟ್ ಆಗಿರುವುದು ಪಂಪ್ ವೆಲ್ ಅಲ್ಲಾ ಬದಲಾಗಿ ಕದ್ರಿ ಅನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಮಂಗಳೂರು ಸ್ಪೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಅನ್ನೋ ಸಂಸ್ಥೆ ಹೊತ್ತು ಕೊಂಡಿದೆ. ಡಾರ್ಕ್ ವೆಬ್ ನಲ್ಲಿ ಈ ಕುರಿತು ಅರೇಬಿಕ್ ಭಾಷೆಯಲ್ಲಿ ಬರೆಯಲಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ನಮ್ಮ ಟಾರ್ಗೆಟ್ ಕದ್ರಿ ಎಂದು ಐಆರ್ ಸಿ ಹೇಳಿಕೊಂಡಿದೆ.

ಮಂಗಳೂರು ನಗರದಲ್ಲಿ ಆಟೋದಲ್ಲಿ ಕುಕ್ಕರ್ ಸ್ಪೋಟ ಸಂಭವಿಸಿತ್ತು. ಆಟೋದಲ್ಲಿ ಪ್ರಯಾಣಿಕನಾಗಿದ್ದ ಉಗ್ರ ಶಾರೀಖ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದಾನೆ. ಹೀಗಾಗಿ ಪೊಲೀಸರಿಗಾಗಲಿ, ತನಿಖಾ ಸಂಸ್ಥೆಗಳಿಗಾಗಲಿ ಆತನನ್ನು ವಿಚಾರಣೆಗೆ ಒಳಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಪೊಲೀಸರು ಈಗಾಗಲೇ ಶಾರೀಖ್ ಗೆ ಸಹಕಾರ ನೀಡುತ್ತಿದ್ದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಾಗಿದೆ. ಈ ನಡುವಲ್ಲೇ ಡಾರ್ಕ್ ವೆಬ್ ನಲ್ಲಿ ಮಂಗಳೂರು ಸ್ಪೋಟಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಇದೀಗ ಲಭ್ಯವಾಗಿದೆ.

ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಈಗಾಗಲೇ ಡಾರ್ಕ್ ವೆಬ್ ನಲ್ಲಿ ಮಂಗಳೂರು ಸ್ಪೋಟಕ್ಕೆ ಸಂಬಂಧಿಸಿದಂತೆ ಅರೇಬಿಕ್ ಮಾಹಿತಿಯನ್ನು ಹಂಚಿಕೊಂಡಿದೆ ಎನ್ನಲಾಗುತ್ತಿದೆ. ಅಲ್ಲದೇ ನಮ್ಮ ಟಾರ್ಗೆಟ್ ಆಗಿರುವುದು ಕದ್ರಿ ದೇವಾಲಯ ಅಂತಾ ಬರೆದುಕೊಂಡಿದ್ದಾರೆ. ಹೀಗಾಗಿ ಉಗ್ರರು ದೇವಾಲಯಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಸಂಘಟನೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಇನ್ನೊಂದೆಡೆಯಲ್ಲಿ ಪೊಲೀಸರು ಕೂಡ ಈ ಮಾಹಿತಿಯನ್ನು ಇನ್ನೂ ಖಚಿತ ಪಡಿಸಿಲ್ಲ.

ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಮಾಡಿರುವ ಪೋಸ್ಟ್ ಕುರಿತು ರಾಷ್ಟ್ರೀಯ ತನಿಖಾ ದಳ ಹಾಗೂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ಕೂಡ ಈ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಧರ್ಮದ ವಿಚಾರದಲ್ಲಿ ಸರಕಾರದ ಹಸ್ತಕ್ಷೇಪ, ಹಿಂದೂ ಸಂಘಟನೆಗಳ ನಿಲುವು ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎನ್ನುವ ಕುರಿತು ವರದಿಯಾಗುತ್ತಿದೆ.

Mangaluru Blast Islamic Resistance Council : ಉಗ್ರರ ಟಾರ್ಗೆಟ್ ಆಗಿದ್ಯಾ ಕದ್ರಿ ದೇವಸ್ಥಾನ ?

ಈ ಹಿಂದೆಯೂ ಕದ್ರಿ ಮಂಜುನಾಥನ ದೇವಸ್ಥಾನ ಉಗ್ರರ ಟಾರ್ಗೆಟ್ ಆಗಿತ್ತು ಅನ್ನೋ ಮಾಹಿತಿ ಲಭ್ಯವಾಗಿತ್ತು. ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಕದ್ರಿ ದೇವಾಲಯಕ್ಕೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮಂಗಳೂರು ನಗರದಲ್ಲಿರುವ ಪ್ರಮುಖ ದೇವಾಲಯವೂ ಹೌದು. ಇದೇ ಕಾರಣಕ್ಕೆ ಉಗ್ರರು ಕದ್ರಿಯನ್ನು ಟಾರ್ಗೆಟ್ ಮಾಡಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಆದರೆ ಎಲ್ಲಾ ಅನುಮಾನಗಳಿಗೆ ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಾಗಿದೆ.

ಪೊಲೀಸರಿಗೂ ಎಚ್ಚರಿಕೆ ಕೊಟ್ಟ ಐಆರ್ ಸಿ ?

ಇನ್ನು ಡಾರ್ಕ್ ವೆಬ್ ನಲ್ಲಿ ಐಆರ್ ಸಿ ಮಾಡಿರುವ ಪೋಸ್ಟ್ ನಲ್ಲಿ ಕೇವಲ ಕದ್ರಿ ಟಾರ್ಗೆಟ್ ವಿಚಾರವನ್ನು ಮಾತ್ರವಲ್ಲದೇ ಪೊಲೀಸರಿಗೂ ಕೂಡ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಸಂತೋಷ ಅಲ್ಪಕಾಲ, ನಿಮ್ಮ ದಬ್ಬಾಳಿಕೆಯ ಕಾನೂನನ್ನು ಸಹಿಸಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಬರೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೂಸೈಡ್ ಬಾಂಬರ್ ಆಗಿದ್ನಾ ಶಾರೀಖ್ !

ಮಂಗಳೂರಿನ ಆಟೋದಲ್ಲಿ ನಡೆಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೀಖ್ ಎಲ್ಲಿ ಬಾಂಬ್ ಸ್ಪೋಟ ಮಾಡಲು ಮುಂದಾಗಿದ್ದ ಅನ್ನೋ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ. ಆದರೆ ಈ ನಡುವಲ್ಲೇ ಕದ್ರಿ, ಆರ್ ಎಸ್ಎಸ್ ಕಚೇರಿಯಾಗಿರುವ ಸಂಘ ನಿಕೇತನ ಸ್ಪೋಟಕ್ಕೆ ಸಂಚು ರೂಪಿಸಿದ್ನಾ. ಅದ್ರಲ್ಲೂ ಆತ ಸೂಸೈಡ್ ಬಾಂಬರ್ ಆಗಿ ಆತ ಕೆಲಸ ಮಾಡಲು ಮುಂದಾಗಿದ್ನಾ ಅನ್ನೋ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೇಕಾಗಿದೆ. ಇನ್ನು ಶಾರೀಖ್ ಹಿಂದೆ ಮಂಗಳೂರು ನಗರದಲ್ಲಿ ಬರೆದಿದ್ದ ಗೋಡೆ ಬರಹದಲ್ಲಿಯೂ ಆರ್ ಎಸ್ ಎಸ್ ಸಂಘಟನೆಯನ್ನು ಟಾರ್ಗೆಟ್ ಮಾಡಿದ್ದ. ಅಲ್ಲದೇ ಲಷ್ಕರ್ ಎ ತೋಯ್ಬಾ ಸಂಘಟನೆಯ ಪರ ಬರಹಗಳನ್ನು ಬರೆದಿದ್ದ ಅನ್ನೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ : Coastal Bomb blast: ಕರಾವಳಿ ಸ್ಫೋಟದ ಮಾಸ್ಟರ್‌ ಮೈಂಡ್‌ ಅರಾಫತ್‌ : ಸಿಗ್ನಲ್‌ ಆಪ್‌ ಬಳಕೆ !

ಇದನ್ನೂ ಓದಿ : Lockdown for Beijing : ಚೀನಾದಲ್ಲಿ ನಿತ್ಯವೂ 31 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ : ಬೀಜಿಂಗ್‌ಗೆ ಲಾಕ್‌ಡೌನ್‌ ಎಚ್ಚರಿಕೆ

Mangaluru Blast islamic Resistance Council responsible Target Kadri Temple

Comments are closed.