Lamborghini Urus S : 4.18 ಕೋಟಿ ರೂ.ಗೆ ಬಿಡುಗಡೆಯಾದ ಲಾಂಬೋರ್ಗಿನಿ ಉರುಸ್ ಎಸ್

ಲಾಂಬೋರ್ಗಿನಿ (Lamborghini) ಇಂದು ಹೊಸ ಎಸ್‌ಯುವಿ (SUV) ಕಾರು ಉರುಸ್ ಎಸ್ (Lamborghini Urus S) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ SUV ಸ್ಟ್ಯಾಂಡರ್ಡ್ ಉರುಸ್ ಮತ್ತು ಉರುಸ್ ಪರ್ಫಾರ್ಮೇಂಟ್ ನಡುವಿನ ಕಾರ್‌ ಆಗಿದೆ. ಕಂಪನಿಯು ಈ ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಆದರೆ ಅದರ ಮಸ್ಕ್ಯೂಲರ್‌ ಡಿಸೈನ್‌ ಅನ್ನು ಹಾಗೆಯೇ ಉಳಸಿಕೊಂಡಿದೆ. ಗಂಟೆಗೆ 305 ಕಿಮೀ ಗರಿಷ್ಠ ವೇಗ ನೀಡುವ ಈ ಕಾರು ಕೇವಲ 3.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ತಲುಪುತ್ತದೆ. ಇಂದು ಬಿಡುಗಡೆಯಾದ ಹೊಸ 2023 ಉರುಸ್ ಎಸ್ ನ ಎಕ್ಸ್ ಶೋ ರೂಂ ಬೆಲೆಯನ್ನು 4.18 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ.

ಹೇಗಿದೆ ಲಾಂಬೋರ್ಗಿನಿ ಹೊಸ SUV ಉರುಸ್‌ ಎಸ್‌ ಕಾರು?

ಲಾಂಬೋರ್ಗಿನಿ ಹೊಸ SUV ಕಾರು ಮುಂಭಾಗದಲ್ಲಿ ಲೋಹದ ಸ್ಕಿಡ್ ಪ್ಲೇಟ್ ಮತ್ತು 21-ಇಂಚಿನ ಅಥವಾ 23-ಇಂಚಿನ ಚಕ್ರದ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಅಪ್ಡೇಟೆಡ್‌ ಇಂಟೀರಿಯರ್‌ ಥೀಮ್‌ ಫಿನಿಶ್‌ ಆಯ್ಕೆಯನ್ನು ಸಹ ನೀಡಲಾಗಿದೆ. ಇದರ ಲೆದರ್ ಮತ್ತು ಟ್ರಿಮ್ ಎಲಿಮೆಂಟ್ಸ್‌ಗಳನ್ನು ಸಹ ಅಪ್ಡೇಟ್‌ ಮಾಡಲಾಗಿದೆ. ಉರಸ್ ಎಸ್ ನ ಇಂಧನ ಟ್ಯಾಂಕ್ ಸಾಮರ್ಥ್ಯ 85 ಲೀಟರ್ ಆಗಿದೆ.

ಉರುಸ್‌ ಎಸ್‌ 4.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಬಳಸುತ್ತದೆ. ಅದು 657 hp ಮತ್ತು 850 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉರುಸ್‌ ಎಸ್‌ ನಲ್ಲಿ 8-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೊಮೆಟಿಕ್‌ ಗೇರ್‌ಬಾಕ್ಸ್ ಎಲ್ಲಾ ಚಕ್ರಗಳಿಗೆ ಶಕ್ತಿಯನ್ನು ಕಳುಹಿಸುತ್ತದೆ. ಇದು ಪ್ರತಿ ಚಕ್ರದಲ್ಲಿ ಲಿಮಿಟ್‌-ಸ್ಲಿಪ್ ಡಿಫರೆನ್ಷಿಯಲ್ ಮತ್ತು ಡೈನಾಮಿಕ್ ಟಾರ್ಕ್ ಡಿಸ್ಟ್ರಿಬ್ಯೂಷನ್‌ ದೊರೆಯಲಿದೆ. ಈ ಕಾರು ಕೇವಲ 3.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ತಲುಪುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 305 ಕಿಮೀ.

ಈ ಕಾರಿನಲ್ಲಿ ಸಬಿಯಾ, ನೆವೆ ಮತ್ತು ಟೆರಾ ಎಂಬ ಮೂರು ಆಫ್‌–ರೋಡ್‌ ಮೋಡ್‌ಗಳಿವೆ. ಇದು ಸ್ಯಾಂಡ್‌, ಸ್ನೋ ಮತ್ತು ಮಡ್‌ ಗಳಲ್ಲಿ ಚಲಿಸಲು ಅನುವು ಮಾಡಿಕೊಡುತ್ತದೆ. ಇದರ ಹೊರತಾಗಿ ಸ್ಟ್ರೆಡಾ, ಸ್ಪೋರ್ಟ್‌ ಮತ್ತು ಕೂರ್ಸಾ ಎಂಬ ಮೂರು ಡ್ರೈವಿಂಗ್‌ ಮೋಡ್‌ಗಳನ್ನು ಇದರಲ್ಲಿ ನೀಡಲಾಗಿದೆ.

ಇದನ್ನೂ ಓದಿ : Summer Special Trains : ಬೇಸಿಗೆಯಲ್ಲಾಗುವ ಜನದಟ್ಟಣೆ ನಿರ್ವಹಿಸಲು 217 ವಿಶೇಷ ರೈಲುಗಳು

ಇದನ್ನೂ ಓದಿ : Char Dham Yatra 2023 : ಚಾರ್‌ ಧಾಮ್‌ ಯಾತ್ರಾ 2023 ಪ್ರಾರಂಭ ಎಂದಿನಿಂದ; ಆನ್‌ಲೈನ್‌ ರೆಜಿಸ್ಟ್ರೇಷನ್‌ ಮಾಡುವುದು ಹೇಗೆ…

(Lamborghini Urus S launched in India is priced at Rs 4.18 crore ex-showroom)

Comments are closed.