Char Dham Yatra 2023 : ಚಾರ್‌ ಧಾಮ್‌ ಯಾತ್ರಾ 2023 ಪ್ರಾರಂಭ ಎಂದಿನಿಂದ; ಆನ್‌ಲೈನ್‌ ರೆಜಿಸ್ಟ್ರೇಷನ್‌ ಮಾಡುವುದು ಹೇಗೆ…

ಚಾರ್‌ ಧಾಮ್‌ ಯಾತ್ರೆ (Char Dham Yatra 2023) ಹಿಂದೂಗಳ ಪವಿತ್ರ ಯಾತ್ರೆ ಎಂದೇ ಪರಿಗಣಿಸಲಾಗುತ್ತದೆ ಮತ್ತು ಇದಕ್ಕೆ ಬಹಳ ಮಹತ್ವವನ್ನು ಕೊಡಲಾಗುತ್ತದೆ. ಪ್ರತಿ ವರ್ಷ ದೇವರ ದರ್ಶನ ಪಡೆಯಲು ಲಕ್ಷಗಟ್ಟಲೆ ಭಕ್ತರು ಈ ಯಾತ್ರೆ ಕೈಗೊಳ್ಳುತ್ತಾರೆ. ದೇವ ಭೂಮಿ ಎಂದು ಕರೆಯಲ್ಪಡುವ ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದ್ರೀನಾಥದ ಯಾತ್ರೆಯನ್ನು ಚಾರ್‌ ಧಾಮ್‌ ಯಾತ್ರೆ ಎಂದು ಕರೆಯುತ್ತಾರೆ. ಯಮುನೋತ್ರಿಯಲ್ಲಿ ಯಮುನಾದೇವಿ, ಗಂಗೋತ್ರಿಯಲ್ಲಿ ಗಂಗಾ ದೇವಿ, ಕೇದಾರನಾಥದಲ್ಲಿ ಸಾಕ್ಷಾತ್‌ ಭಗವಾನ್‌ ಶಿವ ಮತ್ತು ಬದ್ರೀನಾಥದಲ್ಲಿ ಭಗವಾನ್‌ ವಿಷ್ಣುವನ್ನು ಪೂಜಿಸಲಾಗುತ್ತದೆ. ಚಾರ್‌ ಧಾಮ್‌ ಯಾತ್ರೆ ಕೈಗೊಳ್ಳುವ ಎಲ್ಲಾ ಭಕ್ತರು ಕಡ್ಡಾಯವಾಗಿ ನೊಂದಣಿ ಮಾಡಬೇಕು ಎಂದು ಉತ್ತರಾಖಂಡ ಸರ್ಕಾರವು ತಿಳಿಸಿದೆ. 2014 ರಲ್ಲಿ ಕೇದಾರನಾಥದಲ್ಲಾದ ಪ್ರವಾಹದ ಪರಿಣಾಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನೀವು 2023 ರ ಚಾರ್‌ ಧಾಮ್‌ದ ತೀರ್ಥಯಾತ್ರೆ ಕೈಗೊಳ್ಳುವ ಯೋಚನೆಯಿದ್ದರೆ ಕೆಲವು ವಿಷಯಗಳನ್ನು ತಿಳಿದಿರಬೇಕಾಗಿದೆ. ಚಾರ್‌ ಧಾಮ್‌ ಯಾತ್ರೆಗೆ ರೆಜಿಸ್ಟ್ರೇಷನ್‌ ಮಾಡುವುದು ಹೇಗೆ ಇಲ್ಲಿದೆ ಓದಿ.

ಚಾರ್‌ ಧಾಮ್‌ ಯಾತ್ರೆಗಾಗಿ ರೆಜಿಸ್ಟ್ರೇಷನ್‌ ಮಾಡುವುದು ಹೇಗೆ?

  • ಚಾರ್ ಧಾಮ್ ಯಾತ್ರೆಗೆ ನೋಂದಾಯಿಸಲು ಉತ್ತರಾಖಂಡ ಸರ್ಕಾರದ ಅಧಿಕೃತ ವೆಬ್‌ಸೈಟ್ https://registrationandtouristcare.uk.gov.in/ ತೆರೆಯಿರಿ.
  • ಇಲ್ಲಿ ನೋಂದಣಿ / ಲಾಗಿನ್ ಬಟನ್ ಮೇಲಿನ ಬಲಭಾಗದಲ್ಲಿ ನೀಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿ.
  • ಇದು ಹೊಸ ಫಾರ್ಮ್ ಅನ್ನು ತೆರೆಯುತ್ತದೆ. ಅಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಈ ರೀತಿಯಲ್ಲಿ ನೀವೇ ಸೈನ್ ಅಪ್ ಮಾಡಲು ಸಾಧ್ಯವಾಗುತ್ತದೆ.
  • ಸೈನ್ ಅಪ್ ಮಾಡಿದ ನಂತರ, ನೀವು ಮುಂದಿನ ಹಂತಗಳನ್ನು ಅನುಸರಿಸಿದ ನಂತರ ನೋಂದಣಿ ಪೂರ್ಣಗೊಳ್ಳುತ್ತದೆ.

ರೆಜಿಸ್ಟ್ರೇಷನ್‌ಗೆ ಬೇಕಾದ ಅಗತ್ಯ ದಾಖಲೆಗಳು :
ಚಾರ್‌ ಧಾಮ್‌ ಯಾತ್ರೆಯ ರೆಜಿಸ್ಟ್ರೇಷನ್‌ ಮಾಡಲು ಗುರುತಿನ ಚೀಟಿ – ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪ್ಯಾನ್‌ ನಂಬರ್‌, ಡ್ರೈವಿಂಗ್‌ ಲೈಸೆನ್ಸ್‌ ಅಥವಾ ಪಾಸ್‌ಪೋರ್ಟ್‌ ಅಗತ್ಯವಿರುತ್ತದೆ. ಯಾತ್ರಾ ರೆಜಿಸ್ಟ್ರೇಷನ್‌ನಲ್ಲಿ ಯಾತ್ರಾ ಇಪಾಸ್‌ಮ ಯಾತ್ರಾ ಪರ್‌ಮಿಟ್ಸ್‌ ಮತ್ತು ರೆಜಿಸ್ಟ್ರೇಷನ್‌ ಕಾರ್ಡ್‌ಗಳು ಒಳಗೊಂಡಿದೆ. ಈ ಕಾರ್ಡುಗಳನ್ನು ಊಟ ಮತ್ತು ಹೊಟೇಲ್‌ ಸೇವೆಗಳಿಗಾಗಿಯೂ ಉಪಯೋಗಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : Summer Special Trains : ಬೇಸಿಗೆಯಲ್ಲಾಗುವ ಜನದಟ್ಟಣೆ ನಿರ್ವಹಿಸಲು 217 ವಿಶೇಷ ರೈಲುಗಳು

ಚಾರ್‌ ಧಾಮ್‌ ಯಾತ್ರೆ ಎಂದಿನಿಂದ ಪ್ರಾರಂಭ?
ಪ್ರತಿ ವರ್ಷ ಚಾರ್‌ ಧಾಮ್‌ ಯಾತ್ರೆಯು ಏಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ. ಮತ್ತು ಅಕ್ಟೋಬರ್‌ ಅಥವಾ ನವೆಂಬರ್‌ ನಲ್ಲಿ ಕೊನೆಗೊಳ್ಳುತ್ತದೆ. ಹವಾಮಾನಕ್ಕನುಗುಣವಾಗಿ ಯಾತ್ರೆಯ ಪ್ರಾರಂಭ ಮತ್ತು ಅಂತ್ಯವಾಗುತ್ತದೆ. ಈ ವರ್ಷ ಯಾತ್ರೆಯು ಏಪ್ರಿಲ್‌ 29 ರಿಂದ ಪ್ರಾರಂಭವಾಗಿ ನವೆಂಬರ್‌ 3 ಕ್ಕೆ ಅಂತ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ಗಂಗಾ ಶುದ್ಧೀಕರಣ : ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರೀಯ ಮಿಷನ್ 49

(When does Char Dham Yatra 2023 start? Know the registration process and other details.)

Comments are closed.