Lamborghini Urus S: ಏಪ್ರಿಲ್‌ 13 ಕ್ಕೆ ಬಿಡುಗಡೆಯಾಗಲಿರುವ ಲ್ಯಾಂಬೋರ್ಘಿನಿ ಉರುಸ್‌ ಎಸ್‌; ವೈಶಿಷ್ಟ್ಯಗಳೇನು..

ಐಷಾರಾಮಿ ಸ್ಪೋರ್ಟ್ಸ್ ಕಾರು ತಯಾರಕ ಲಂಬೋರ್ಘಿನಿ (Lamborghini) ತನ್ನ ಹೊಸ ಉರುಸ್ ಎಸ್ (Urus S) ಅನ್ನು ಭಾರತದಲ್ಲಿ ಏಪ್ರಿಲ್ 13 ರಂದು ಬಿಡುಗಡೆ ಮಾಡಲಿದೆ. ಸದ್ಯ, ಉರುಸ್ ಪರ್ಫಾರ್ಮಂಟೆ ಮಾತ್ರ ಭಾರತದಲ್ಲಿ ಮಾರಾಟವಾಗಿದ್ದು, ಇದರ ಎಕ್ಸ್ ಶೋ ರೂಂ ಬೆಲೆಯು 4.22 ಕೋಟಿ ರೂ. ಆಗಿದೆ. ಹೊಸ ಉರುಸ್ ಎಸ್‌ನ ಬೆಲೆಯನ್ನು ಉರುಸ್ ಪರ್ಫಾರ್ಮೆಂಟೆಗಿಂತ ಕಡಿಮೆಗೆ ನಿರೀಕ್ಷಿಸಲಾಗಿದೆ. ಕಂಪನಿಯು ಸೆಪ್ಟೆಂಬರ್ 2022 ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉರುಸ್ ಎಸ್ ಅನ್ನು ಬಿಡುಗಡೆ ಮಾಡಿತ್ತು. ಏಕೆಂದರೆ ಲಂಬೋರ್ಘಿನಿ ಔಟ್‌ಗೋಯಿಂಗ್‌ ಉರುಸ್ ಅನ್ನು ಉರುಸ್ ಪರ್ಫಾರ್ಮೆಂಟೆ ಮತ್ತು ಉರುಸ್ ಎಸ್‌ ಎಂದು ಬದಲಾಯಿಸಿದೆ.

ಲಂಬೋರ್ಘಿನಿ ಉರುಸ್ ಎಸ್‌ ಎಂಜಿನ್:
ಲಂಬೋರ್ಘಿನಿ ಉರುಸ್ ಎಸ್‌ನ ಎಂಜಿನ್‌ ಪರ್ಫಾರ್ಮಂಟ್‌ನಂತೆಯೇ ಪಡೆದುಕೊಂಡಿದೆ. ಇದು ಪೋರ್ಷೆ ಕೆಯೆನ್ನೆ ಟರ್ಬೊದಿಂದ 4.0-ಲೀಟರ್, V8 ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. ಇದು 666hp ಶಕ್ತಿಯನ್ನು ಉತ್ಪಾದಿಸುತ್ತದೆ. ಇದನ್ನು 8-ಸ್ಪೀಡ್ ಸ್ವಯಂಚಾಲಿತ ಟಾರ್ಕ್ ಪರಿವರ್ತಕ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಉರುಸ್‌ ಎಸ್‌ ಕೇವಲ 3.5 ಸೆಕೆಂಡುಗಳಲ್ಲಿ 0-100kph ವೇಗವನ್ನು ತಲುಪುತ್ತದೆ. ಎರಡೂ ಮಾದರಿಗಳ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಅದರ ಸಸ್ಪೆನ್ಷನ್‌. ಪರ್ಫಾರ್ಮೆಂಟ ಕಡಿಮೆ ಸ್ಥಿರ ಕಾಯಿಲ್ ಸ್ಪ್ರಿಂಗ್‌ಗಳ ಸಸ್ಪೆನ್ಷನ್‌ ಪಡೆದುಕೊಂಡಿದೆ. ಆದರೆ ಕಂಫರ್ಟ್‌ ಸೇಂಟ್ರಿಕ್‌ ಉರುಸ್ ಎಸ್ ಮೊದಲಿನಂತೆ ಅಡಾಪ್ಟಿವ್ ಏರ್ ಸಸ್ಪೆನ್ಷನ್ ಅನ್ನು ಪಡೆಯುತ್ತದೆ. ಉರುಸ್ ಎಸ್ ಸಬ್ಬಿಯಾ, ಟ್ರಾಡಾ, ಸ್ಪೋರ್ಟ್ ಮತ್ತು ಕೊರ್ಸಾ, ನೇವ್ ಮತ್ತು ಟೆರ್ರಾ ಮೋಡ್‌ಗಳಲ್ಲಿ ಲಭ್ಯವಿದೆ. ಆದರೆ ಪರ್ಫಾಮೆಂಟ್‌ನಲ್ಲಿ ಸಿಂಗಲ್‌ ರ್‍ಯಾಲಿ ಮೋಡ್ ಸಹ ಇದೆ.

ಲ್ಯಾಬೋರ್ಘಿನಿ ಉರುಸ್‌ ಎಸ್‌ ವಿನ್ಯಾಸ ಹೇಗಿದೆ?
ಲಂಬೋರ್ಘಿನಿ ಉರುಸ್ ಎಸ್, ಪರ್ಫಾರ್ಮಂಟೆಗಿಂತ ಸ್ವಲ್ಪ ಭಿನ್ನವಾಗಿದೆ. ಈ ಎರಡೂ ಮಾದರಿಗಳು ಒಂದೇ ವಿನ್ಯಾಸ ಮತ್ತು ಗಾತ್ರವನ್ನು ಹೊಂದಿವೆ. ಉರುಸ್ ಎಸ್, ಕೂಲಿಂಗ್ ವೆಂಟ್‌ಗಳೊಂದಿಗೆ ಸಿಂಗಲ್-ಟೋನ್ ಬಾನೆಟ್ ಅನ್ನು ಪಡೆದುಕೊಂಡಿದೆ. ಆದರೆ ಉರುಸ್ ಪರ್ಫಾರ್ಮೆಂಟ್‌ ಡ್ಯುಯಲ್-ಟೋನ್ ಬಾನೆಟ್ ಅನ್ನು ಹೊಂದಿದೆ. ಕಂಪನಿಯು ಉರುಸ್ ಎಸ್ ನ ಮುಂಭಾಗ ಮತ್ತು ಹಿಂಭಾಗದ ಬಂಪರ್ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಉರುಸ್ ಎಸ್ ನ ಇಂಟೀರಿಯರ್‌ ಲಂಬೋರ್ಗಿನಿ ಉರುಸ್ ಪರ್ಫಾರ್ಮೆಂಟ್‌ಗೆ ಬಹುತೇಕ ಹೋಲುತ್ತವೆ.

ಭಾರತದಲ್ಲಿ ಲ್ಯಾಂಬೋರ್ಘಿನಿ ಉರುಸ್‌ನ ಕಾರ್ಯಕ್ಷಮತೆ :

ಕಳೆದ ವರ್ಷ ಜುಲೈನಲ್ಲಿ ಕಂಪನಿಯು ಉರುಸ್‌ನ 200 ನೇ ಯುನಿಟ್‌ಗಳನ್ನು ವಿತರಣೆ ಮಾಡಿದೆ. 2022 ರಲ್ಲಿ, ಕಂಪನಿಯು ವಾರ್ಷಿಕ 33 ಶೇಕಡಾ ಹೆಚ್ಚಳದೊಂದಿಗೆ 92 ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯು ದೇಶದಲ್ಲಿ ಹುರಾಕನ್‌ನ ಏಳು ರೂಪಾಂತರಗಳನ್ನು ಮಾರಾಟ ಮಾಡುತ್ತದೆ.

ಇದನ್ನೂ ಓದಿ : Honda Shine 100: ಹೊಂಡಾ ಶೈನ್‌ 100 ಬೈಕ್‌ನ 5 ವಿಶೇಷತೆಗಳು

ಇದನ್ನೂ ಓದಿ : Jio New Plans For IPL 2023 : ಮೊಬೈಲ್‌ನಲ್ಲಿ IPL ನೋಡುವವರಿಗೆ ಗುಡ್‌ ನ್ಯೂಸ್‌; ಕಡಿಮೆ ಬೆಲೆಯ ಡಾಟಾ ಪ್ಲಾನ್‌ ಲಾಂಚ್‌ ಮಾಡಿದ ಜಿಯೋ

(Lamborghini Urus S will be launch in India on April 13th)

Comments are closed.