Mahindra Bolero Neo : ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ : ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ…!

ಪ್ರಖ್ಯಾತ ಕಾರು ತಯಾರಿಯಾ ಕಂಪೆನಿ ಮಹೀಂದ್ರಾ ಹೊಸ ವಿನ್ಯಾಸದ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ಮೂರನೇ ತಲೆಮಾರಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಹೊಸ ಮಹೀಂದ್ರಾ ಬೊಲೆರೊ ನಿಯೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮಹೀಂದ್ರಾ ಸ್ಕಾರ್ಪಿಯೋ, ಮಹೀಂದ್ರಾ ಥಾರ್, ಮಹೀಂದ್ರಾ ಟಿಯುವಿ 300 ಕಾರುಗಳು ಜನರ ಮನಗೆದ್ದಿದೆ. ಇದೀಗ ಮಹೀಂದ್ರಾ ಬೊಲೆರೊ ನಿಯೋ ಹೊಸ ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಂಡಿದೆ. ಪ್ರಮುಖವಾಗಿ ಮಹೀಂದ್ರಾ ಬೊಲೆರೊ ನಿಯೋವನ್ನು ಎನ್ 4, ಎನ್ 8 ಮತ್ತು ಎನ್ 10 ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಮಹೀಂದ್ರಾ ಮತ್ತು ಮಹೀಂದ್ರಾ ನಾಲ್ಕನೇ ರೂಪಾಂತರ – ಎನ್ 10 (ಒ) ವೇರಿಯಂಟ್‌ ನ್ನು ಬಿಡುಗಡೆ ಮಾಡಲಿದೆ.

ಮಹೇಂದ್ರ ಬೊಲೆರೋ ನಿಯೋ ಕಾರು ಇತರ ಕಂಪೆನಿಯ ಕಾರುಗಳಿಗೆ ಪ್ರಬಲ ಪೈಪೋಟಿಯನ್ನು ನೀಡುವುದು ಖಚಿತ. ಅತ್ಯುತ್ತಮ ವಿನ್ಯಾಸ, ತಂತ್ರಜ್ಞಾನದೊಂದಿಗೆ ಕಡಿಮೆ ಬೆಲೆಯಲ್ಲಿ ಕಾರು ಲಭ್ಯವಿದೆ. ದೆಹಲಿಯಲ್ಲಿ ಎಕ್ಸ್‌ಶೋ ರೂಮ್‌ ಬೆಲೆ ಬೊಲೆರೊ ನಿಯೋ ಎನ್ 4 – 8.48 ಲಕ್ಷ ರೂಪಾಯಿದೆ. ಇದೆ. ಇನ್ನು ಬೊಲೆರೊ ನಿಯೋ ಎನ್ 8 – 9.48 ಲಕ್ಷ ರೂ. ಹಾಗೂ ಬೊಲೆರೊ ನಿಯೋ ಎನ್ 10 – 10 ಲಕ್ಷ ರೂ. ಇದೆ.

ಮಹೀಂದ್ರಾ ಬೊಲೆರೊ ನಿಯೋ ಲ್ಯಾಡರ್-ಆನ್-ಫ್ರೇಮ್ ಅಳವಡಿಸಲಾಗಿದೆ. ಅಲ್ಲದೇ ಆರು ಲಂಬ ಕ್ರೋಮ್ ಸ್ಲ್ಯಾಟ್‌ಗಳನ್ನು ಹೊಂದಿರುವ ಜೇನುಗೂಡು ಮೆಶ್ ಗ್ರಿಲ್ ಹೊಸ ಮೆರುಗು ನೀಡಿದೆ. ಇನ್ನು ಡಿಆರ್‌ಎಲ್‌ಗಳೊಂದಿಗೆ ಸ್ಥಿರ ಬಾಗುವ ಹೆಡ್‌ಲ್ಯಾಂಪ್‌ಗಳು, ಮಂಜು ದೀಪಗಳು, ಡ್ಯುಯಲ್-ಟೋನ್ ಒಆರ್‌ವಿಎಂಗಳು, ಅಡ್ಡ ಹೆಜ್ಜೆಗಳು, 15 ಇಂಚಿನ ಅಲಾಯ್ ವೀಲ್‌ಗಳು ಗ್ರಾಹಕರಿಗೆ ಇಷ್ಟವಾಗುತ್ತೆ.

ಬೊಲೆರೊ ನಿಯೋ ಒಟ್ಟು ಆರು ಬಣ್ಣಗಳಲ್ಲಿ ಲಭ್ಯವಿದೆ. ರಾಕಿ ಬೀಜ್, ಮೆಜೆಸ್ಟಿಕ್ ಸಿಲ್ವರ್, ಹೆದ್ದಾರಿ ಕೆಂಪು, ಪರ್ಲ್ ವೈಟ್, ಡೈಮಂಡ್ ವೈಟ್ ಮತ್ತು ನಾಪೋಲಿ ಬ್ಲ್ಯಾಕ್ ಬಣ್ಣದ ಕಾರುಗಳನ್ನು ಗ್ರಾಹಕರು ಆಯ್ಕೆ ಮಾಡಬಹುದಾಗಿದೆ. ಅದ್ರಲ್ಲೂ ರಾಯಲ್‌ ಗೋಲ್ಡ್‌ ಬಣ್ಣದ ಕಾರು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ.

ಕೇವಲ ಹೊರಗಿನ ವಿನ್ಯಾಸ ಮಾಡತ್ರವಲ್ಲದೇ ಇಂಟಿರಿಯರ್‌ ಕೂಡ ಖುಷಿ ಕೊಡ್ತಿದೆ. ಬೊಲೆರೊ ನಿಯೋ ಬಳಭಾಗದಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ವ್ಯ ವಸ್ಥೆಯನ್ನುಅಳವಡಿಸಲಾಗಿದೆ. ಕ್ಯಾಬಿನ್‌ನಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 3.5 ಇಂಚಿನ ಎಂಐಡಿ ಹೊಂದಿರುವ ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಹೊಂದಿದೆ. ಅಲ್ಲದೇ ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಭಾಗ ಹಾಗೂ ಮಧ್ಯದ ಸಾಲುಗಳಲ್ಲಿ ಆರ್ಮ್‌ಸ್ಟ್ರೆಸ್ಟ್‌, ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯವೂ ಲಭ್ಯವಿದೆ. ಮಹೀಂದ್ರಾ ಬೊಲೆರೋ ನಿಯೋ ಏಳು ಆಸನಗಳ ಸಾಮರ್ಥ್ಯವನ್ನು ಹೊಂದಿದೆ.

ಬೊಲೆರೋ ನಿಯೋ ಕೇವಲ ಅತ್ಯಾಧುನಿಕ ತಂತ್ರಜ್ಞಾನ, ವಿನ್ಯಾಸ ಮಾತ್ರವಲ್ಲ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಸ್ಪೀಡ್ ಅಲರ್ಟ್ ಸಿಸ್ಟಮ್, ಸೀಟ್‌ಬೆಲ್ಟ್ ರಿಮೈಂಡರ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಮತ್ತು ಐಸೊಫಿಕ್ಸ್ ಚೈಲ್ಡ್ ಸೀಟ್ ಅಳವಡಿಸಲಾಗಿತ್ತು. ಹತ್ತಿರ ಹಾಗೂ ದೂರ ಪ್ರಯಾಣಕ್ಕೂ ಕೂಡ ಮಹೀಂದ್ರ ಬೊಲೆರೋ ನಿಯೋ ಹೇಳಿ ಮಾಡಿಸಿದಂತಿದೆ. ಹೆಚ್ಚಿನ ಮಾಹಿತಿಗಾಗಿ ಮಹೀಂದ್ರಾ ಕಂಪೆನಿಯ ಅಧಿಕೃತ ವೆಬ್‌ ಸೈಟ್‌ : https://www.mahindra.com/ ಸಂಪರ್ಕ ಮಾಡಬಹುದಾಗಿದೆ.

https://www.youtube.com/watch?v=_w6rnj2X1c0

Comments are closed.