Maruti Suzuki : ಭಾರತದಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿಯ ಎರಡು CNG ಕಾರುಗಳು; ಬೆಲೆನೊ S ಮತ್ತು XL6-S

ಮಾರುತಿ ಸುಜುಕಿಯು (Maruti Suzuki) CNG ಮಾದರಿಯ ಎರಡು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಮಾರುತಿ ಸುಜುಕಿ ಬಲೆನೊ S -ಸಿಎನ್‌ಜಿ ಮತ್ತು ಮಾರುತಿ ಸುಜುಕಿ XL6 -S ಸಿಎನ್‌ಜಿ (Baleno S-CNG and XL6 S-CNG) , ನೆಕ್ಸಾ ಬ್ರಾಂಡ್‌ನಲ್ಲಿ ಮಾರಾಟವಾಗುವ ಮೊದಲ ಸಿಎನ್‌ಜಿ ಕಾರುಗಳಾಗಿವೆ. ಈ ಎರಡೂ ಕಾರುಗಳು ಹೊಸ ತಂತ್ರಜ್ಞಾನ, ಸುರಕ್ಷತೆ ಮತ್ತು ಅನುಕೂಲತೆಗಳನ್ನು ಹೊಂದಿದೆ. ಇದು 6 ಏರ್‌ಬ್ಯಾಗ್‌ಗಳನ್ನು ನೀಡುವ ಏಕೈಕ ಪ್ರೀಮಿಯಂ ಸಿಎನ್‌ಜಿ ಹ್ಯಾಚ್‌ಬ್ಯಾಕ್‌ ವಾಹನವಾಗಿದೆ. ಈ ಎರಡೂ ಕಾರಿನ ವೈಶಿಷ್ಟ್ಯಗಳನ್ನು ಕೆಳಗೆ ವಿವಿರವಾಗಿ ನೀಡಲಾಗಿದೆ.

ಮಾರುತಿ ಸುಜುಕಿ ಬೆಲೆನೊ S–ಸಿಎನ್‌ಜಿ:
ಈಗ ಬಿಡುಗಡೆಯಾಗಿರುವ ಮಾರುತಿ ಸುಜುಕಿಯ ಬಲೆನೊ S-ಸಿಎನ್‌ಜಿ ಕಾರು ಹಲವಾರು ಹೊಸ ತಂತ್ರಜ್ಞಾನ, ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಪ್ರತಿ ಕೆಜಿಗೆ 30.61 ಕಿಮೀ ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು ಗ್ರಾಹಕರಿಗೆ ಸುರಕ್ಷತೆಯ ದೃಷ್ಟಿಯಲ್ಲಿ ಹೆಚ್ಚಿನ ಭರವಸೆಯನ್ನು ನೀಡುತ್ತದೆ. ಏಕೆಂದರೆ, 6-ಏರ್‌ಬ್ಯಾಗ್‌ಗಳನ್ನು ನೀಡುವ ಏಕೈಕ ಪ್ರೀಮಿಯಂ CNG ಹ್ಯಾಚ್‌ಬ್ಯಾಕ್ ರೂಪಾಂತರದ ಕಾರ್‌ ಇದಾಗಿದೆ. ಬೆಲೆನೊ 40+ ಇನ್‌ಬಿಲ್ಟ್‌ ವೈಶಿಷ್ಟ್ಯಗಳನ್ನು ನೀಡಲಿದೆ. ಆನ್-ಬೋರ್ಡ್ ಧ್ವನಿ ಸಹಾಯದೊಂದಿಗೆ 17.78cm ಸ್ಮಾರ್ಟ್ ಪ್ಲೇ ಪ್ರೊ ಟಚ್-ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್‌ ಆಟೊ ಮತ್ತು ಆ್ಯಪಲ್‌ ಕಾರ್‌ ಪ್ಲೇ ಸಂಪರ್ಕ, CNG ಬಳಕೆ ತೋರಿಸುವ ನಿರ್ದಿಷ್ಟ ಪರದೆ ಹೊಂದಿರುವ MID ಡಿಸ್ಪ್ಲೇ, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದಲ್ಲದೇ 60:40 ರಲ್ಲಿ ವಿಭನೆಯಾದ ಹಿಂದಿನ ಸೀಟುಗಳು ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಬೆಲೆನೊ S– ಸಿಎನ್‌ಜಿ ಯು ಕೇವಲ ಎರಡು ರೂಪಾಂತರಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಮೊದಲನೆಯದು ಡೆಲ್ಟಾ (MT) ಮತ್ತು ಎರಡನೆಯದು Zeta (MT) ಆಗಿದೆ. ಇದರ ಬೆಲೆಗಳು ಕ್ರಮಾವಾಗಿ 8.28 ಲಕ್ಷ ರೂ.ಗಳು (ಎಕ್ಸ್-ಶೋರೂಂ ಬೆಲೆ) ಮತ್ತು ರೂ 9.21 ಲಕ್ಷ ರೂ. (ಎಕ್ಸ್ ಶೋ ರೂಂ) ಗಳಾಗಿದೆ.

ಮಾರುತಿ ಸುಜುಕಿ XL6 S-ಸಿಎನ್‌ಜಿ:
ಮಾರುತಿ ಸುಜುಕಿ XL6 S- ಸಿಎನ್‌ಜಿ ಪ್ರತಿ ಕೆಜಿಗೆ 26.32 ಕಿಮಿ ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು 40+ ಇನ್‌ಬಿಲ್ಟ್‌ ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ. ಸುಜುಕಿ ಕನೆಕ್ಟ್, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸಂಪರ್ಕ ಹೊಂದಿದೆ. ಸಿಎನ್‌ಜಿಯ ಹೊಸ ಕಾರು 17.78ಸೆಂ.ಮಿ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್, ಕ್ರೂಸ್ ಕಂಟ್ರೋಲ್, ಎಲ್‌ಇಡಿ ಡಿಆರ್‌ಎಲ್‌ ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು XL6 ಪ್ರೀಮಿಯಂ ಕೊಡುಗೆಯಾಗಿದೆ. ಸುರಕ್ಷತೆಯ ದೃಷ್ಟಿಯಲ್ಲಿ XL6 S– ಸಿಎನ್‌ಜಿಯು ನಾಲ್ಕು ಏರ್‌ಬ್ಯಾಗ್‌ಗಳನ್ನು ಗ್ರಾಹಕರಿಗೆ ನೀಡುತ್ತದೆ. ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ESP ಜೊತೆಗೆ ಹಿಲ್ ಹೋಲ್ಡ್, LED ಫ್ರಂಟ್ ಫಾಗ್ ಲ್ಯಾಂಪ್‌ಗಳು, ಬಲವಾದ HEARTECT ಪ್ಲಾಟ್‌ಫಾರ್ಮ್ ಮತ್ತು ಮುಂತಾದ ಸುರಕ್ಷತಾ ವೈಶಿಷ್ಟ್ಯಗಳು ಈ ಶ್ರೇಣಿಯ ಕಾರಿನಲ್ಲಿದೆ.

ಮಾರುತಿ ಸುಜುಕಿ XL6 S-ಸಿಎನ್‌ಜಿಯು ಒಂದೇ ಝೀಟಾ (MT) ರೂಪಾಂತರದಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ರೂಪಾಂತರ ಕಾರಿನ ಬೆಲೆಯು 12.24 ಲಕ್ಷ ರೂ (ಎಕ್ಸ್-ಶೋರೂಮ್) ಆಗಿದೆ.

ಮಾರುತಿ ಸುಜುಕಿ ಸಬ್‌ಸ್ಕ್ರೈಬ್‌ನ ಅಡಿಯಲ್ಲಿ ಹೊಸ ಮಾರುತಿ ಸುಜುಕಿ ಬೆಲೆನೊ S- ಸಿಎನ್‌ಜಿ ಮತ್ತು ಮಾರುತಿ ಸುಜುಕಿ XL6 S-ಸಿಎನ್‌ಜಿಯನ್ನು ಕ್ರಮವಾಗಿ 18, 403 ರೂ. ಮತ್ತು 30,821 ರೂ. ಗಳಿಂದ ಪ್ರಾರಂಭವಾಗುವ ಮಾಸಿಕ ಚಂದಾದಾರಿಕೆ ಶುಲ್ಕದಲ್ಲಿ ಗ್ರಾಹಕರಿಗೆ ನೀಡುತ್ತದೆ ಎಂದು ಹೇಳಲಾಗಿದೆ.
(ಆಧಾರ ಡಿಎನ್‌ಎ)

ಇದನ್ನೂ ಓದಿ : Fire accident in Narela : ಪಾದರಕ್ಷೆ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ :ಇಬ್ಬರು ಸಾವು

ಇದನ್ನೂ ಓದಿ : Kannada Rojyotsava : ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಆರ್‌ಸಿಬಿ, ಬೆಂಗಳೂರು ಬುಲ್ಸ್

(Maruti Suzuki Baleno S-CNG and XL6 S-CNG launched in India)

Comments are closed.