Rakshit Shetty : ರಕ್ಷಿತ್‌ ಶೆಟ್ಟಿ ನಿರ್ಮಾಣದಲ್ಲಿ “ಹಚ್ಚೇವು ಕನ್ನಡದ ದೀಪ” ಹಾಡು ರೀ ಕ್ರಿಯೆಟ್‌

Rakshit Shetty : ನವೆಂಬರ್‌ ತಿಂಗಳೆಂದರೆ ಕನ್ನಡಿಗರಿಗೆ ಹಬ್ಬದ ವಾತಾವರಣ . ಎಲ್ಲಿ ನೋಡಿದರು ಕೆಂಪು ಹಳದಿ ಬಾವುಟಗಳ ಹಾರಾಟ. ಕರ್ನಾಟಕದ ಎಲ್ಲಾ ಕಡೆಗಳಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ . ಎಲ್ಲಿ ನೋಡಿದರೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ನಾವು ಕಾಣಬಹುದು .

ಕನ್ನಡಿಗರ ಹಬ್ಬವಾದ ಕರ್ನಾಟಕ ರಾಜ್ಯೋತ್ಸವಕ್ಕೆ ರಾಜಕಾರಣಿಗಳಿಂದ ಹಿಡಿದು , ಸಿನಿಮಾ ಕಲಾವಿದರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ . ಅನೇಕರು ಕನ್ನಡದ ಕಂಪನ್ನು ಪಸರಿಸುವ ಹಾಡಿನ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ . ನಟ ರಕ್ಷಿತ್‌ ಶೆಟ್ಟಿ(Rakshit Shetty) ಕೂಡ ಹಲವು ವರ್ಷಗಳಿಂದ ಕನ್ನಡದ ಕಂಪನ್ನು ಪಸರಿಸುತ್ತಿರುವ “ಹಚ್ಚೇವು ಕನ್ನಡದ ದೀಪ ..” ಹಾಡನ್ನು ನಿರ್ಮಿಸಿ ಬಿಡುಗಡೆ ಮಾಡುವ ಮೂಲಕ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯವನ್ನು ಕೋರಿದ್ದಾರೆ .

ಪ್ರಸಿದ್ಧ ಗೀತೆಗಳಲ್ಲಿ ಒಂದಾದ ಡಿ. ಎಸ್‌. ಕರ್ಕಿ ಅವರು ರಚಿಸಿದ “ಹಚ್ಚೇವು ಕನ್ನಡದ ದೀಪ ..” ಹಾಡನ್ನು ರಕ್ಷಿತ್‌ ಶೆಟ್ಟಿ (Rakshit Shetty) ರೀ ಕ್ರಿಯೇಟ್‌ ಮಾಡಿದ್ದಾರೆ . ಖ್ಯಾತ ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಸಾರಥ್ಯದಲ್ಲಿ ಹಚ್ಚೇವು ಕನ್ನಡದ ದೀಪ ಹಾಡನ್ನು ರೀ ಕ್ರಿಯೇಟ್‌ ಮಾಡಿದ್ದು , ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಮತ್ತು ಹರ್ಷಿಕಾ ದೇವನಾಥ್‌ ಅವರು ಧ್ವನಿಯಾಗಿದ್ದಾರೆ .

ಇದನ್ನೂ ಓದಿ : Rambha and her children injured:ಬಹುಭಾಷಾ ನಟಿ ರಂಭಾ ಕಾರು ಅಪಘಾತ : ನನ್ನ ಮಗಳಿಗಾಗಿ ನೀವೆಲ್ಲ ಪ್ರಾರ್ಥಿಸಿ ಎಂದು ಬೇಡಿದ ನಟಿ

ಖ್ಯಾತ ಸಂಗೀತ ನಿರ್ದೇಶಕ ಸಿ . ಅಶ್ವತ್‌ ನಾರಾಯಣ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡನ್ನು ಇದೀಗ ಅಜನೀಶ್‌ ಲೋಕನಾಥ್‌ ಅವರು ಹೊಸ ವರ್ಷನ್‌ ಅಲ್ಲಿ ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ .

ಇದನ್ನೂ ಓದಿ : Mansore:ತೆರೆಗೆ ಬರಲು ಸಜ್ಜಾಯ್ತು ಮಂಸೋರೆ ನಿರ್ದೇಶನದ ‘19.20.21’

ಸಮಸ್ತ ಕನ್ನಡದ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುವ ಮೂಲಕ ಈ ಹಾಡನ್ನು ರಕ್ಷಿತ್‌ ಶೆಟ್ಟಿ ಅವರ ಪರಂವಃ ಮ್ಯೂಸಿಕ್‌ ನಲ್ಲಿ ಬಿಡುಗಡೆ ಮಾಡಿದ್ದಾರೆ . ಅದರ ಜೊತೆಗೆ ” ಹಲವಾರು ವರ್ಷಗಳಿಂದ ಕನ್ನಡದ ಕಂಪನ್ನು ಹರಡುತ್ತಿರುವ ಹಚ್ಚೇವು ಕನ್ನಡದ ದೀಪ ನಮ್ಮ ಪರಂವಃ ಪ್ರೀತಿಯ ಪ್ರಯತ್ನದಲ್ಲಿ ” ಎಂದು ಹೇಳಿದ್ದಾರೆ .

ಇದನ್ನೂ ಓದಿ : Kannada Rajyotsava 2022 : ಪುನೀತ್‌ ರಾಜ್‌ಕುಮಾರ್‌ಗೆ ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಡಿ. ಎಸ್.‌ ಕರ್ಕಿ ಅವರ ಈ ಹಾಡನ್ನು ರಕ್ಷಿತ್‌ ಶೆಟ್ಟಿ ಮತ್ತು ತಂಡದಿಂದ ಕರ್ನಾಟಕದ ಕಡಲತೀರ , ಪರ್ವತ ಶ್ರೇಣಿ , ಬುಡಕಟ್ಟು ಭಾಗಗಳು ಹಾಗೂ ಐತಿಹಾಸಿಕ ತಾಣಗಳನ್ನು ಸುತ್ತಿ ಸೆರೆಹಿಡಿಯಲಾಗಿದೆ . ಪರಂವಃ ಮ್ಯೂಸಿಕಲ್‌ ನಲ್ಲಿ ಬಿಡುಗಡೆಯಾದ ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮವಾದ ಪ್ರತಿಕ್ರೀಯೆ ಕೂಡ ಸಿಗುತ್ತಿದೆ .

777 ಚಾರ್ಲಿ ಸಕ್ಸಸ್‌ ನಲ್ಲಿರುವ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಇದೀಗ ಹಲವು ಸಿನಿಮಾಗಳಲ್ಲಿ ಕಾರ್ಯನಿರತರಾಗಿದ್ದಾರೆ . ಸಪ್ತಸಾಗರದಾಚೆ ಎಲ್ಲೋ ಚಿತ್ರದ ಶೂಟಿಂಗ್‌ ಮುಗಿಸಿದ ರಕ್ಷಿತ್‌ ಶೆಟ್ಟಿ ಇದೀಗ ರಿಚರ್ಡ್‌ ಆಂಟೋನಿಯ ಚಿತ್ರದ ತಯಾರಿಯಲ್ಲಿ ನಿರತರಾಗಿದ್ದರೆ .

Rakshit Shetty: November is a festive season for Kannadigas. Where did you see the red and yellow flags flying? A festive atmosphere has been created in all parts of Karnataka. Wherever we look, we can find Karnataka Rajyotsava wishes.

Comments are closed.