Consuming Curd With Raisins: ಒಣದ್ರಾಕ್ಷಿಯೊಂದಿಗೆ ಮೊಸರು ಸೇವನೆಯ ಪ್ರಯೋಜನಗಳೇನು ಗೊತ್ತಾ? ತಿಳಿದಿಲ್ಲವಾದರೆ ಒಮ್ಮೆ ಇದನ್ನು ಓದಿ

(Consuming Curd With Raisins) ನಿಮ್ಮ ಊಟದಲ್ಲಿ ಪ್ರೋಬಯಾಟಿಕ್ ಅನ್ನು ಸೇರಿಸುವುದರಿಂದ ನಿಮಗೆ ಉತ್ತಮ ಪ್ರಮಾಣದ ಕರುಳಿನ ಬ್ಯಾಕ್ಟೀರಿಯಾವನ್ನು ಒದಗಿಸಬಹುದು ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ನಿಯಂತ್ರಣದಲ್ಲಿಡಬಹುದು.ಡೈರಿ ಉತ್ಪನ್ನವನ್ನು ಮತ್ತೊಂದು ಆರೋಗ್ಯ ಸ್ನೇಹಿ ಘಟಕಾಂಶವಾದ ಒಣದ್ರಾಕ್ಷಿಯೊಂದಿಗೆ ಸೇರಿಸಿ ತಿನ್ನುವುದರಿಂದ ಪರಿಣಾಮಕಾರಿಯಾದ ಪರಿಹಾರವನ್ನು ಕಂಡುಕೊಳ್ಳಬಹುದು ಮತ್ತುಇದು ಕರುಳು ಮತ್ತು ಹೊಟ್ಟೆಯ ಕಾಳಜಿಯನ್ನು ವಹಿಸುತ್ತದೆ.

ಇಲ್ಲಿ ಮೊಸರಿನ ಜೊತೆ ಒಣದ್ರಾಕ್ಷಿಯನ್ನು ಸೇರಿಸುವ ವಿಧಾನ ಹಾಗೂ ಪ್ರೋಬಯಾಟಿಕ್‌ ಮತ್ತು ಪ್ರಿಬಯಾಟಿಕ್ ಮಿಶ್ರಣದ ಪ್ರಯೋಜನಗಳನ್ನು ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು;
ಬೆಚ್ಚಗಿನ ಹಾಲು ಒಂದು ಬೌಲ್‌
ಒಣದ್ರಾಕ್ಷಿ 4-5
ಮೊಸರು ಅಥವಾ ಮಜ್ಜಿಗೆ

ಮೊಸರಿನ ಜೊತೆ ಒಣದ್ರಾಕ್ಷಿ(Consuming Curd With Raisins)ಯನ್ನು ಸೇರಿಸುವ ವಿಧಾನ
ಮೊದಲಿಗೆ ಒಂದು ಬೌಲ್ ತಾಜಾ ಹಾಗೂ ಕೊಬ್ಬು ಬರಿತ ಬೆಚ್ಚಗಿನ ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ 4-5 ಒಣದ್ರಾಕ್ಷಿ ಸೇರಿಸಿ.ನಂತರ ಒಂದು ಚಮಚವನ್ನು ಬಳಸಿ ಸ್ವಲ್ಪ ಮೊಸರು ಅಥವಾ ಮಜ್ಜಿಗೆಯನ್ನು ಹಾಲಿಗೆ ಸೇರಿಸಿ. ನಂತರ ಅದನ್ನು ಚೆನ್ನಾಗಿ ಕಲಸಿ, ಬೌಲ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಅದನ್ನು 8-12 ಗಂಟೆಗಳವರೆಗೆ ಪಕ್ಕಕ್ಕೆ ಇರಿಸಿ. 8-12 ಗಂಟೆಗಳ ನಂತರ ಒಣದ್ರಾಕ್ಷಿಯೊಂದಿಗೆ ಮೊಸರು ತಿನ್ನಲು ಸಿದ್ಧವಾಗಿದೆ

ನೀವು ಇದನ್ನು ಊಟದ ಜೊತೆಗೆ ಅಥವಾ ಮಧ್ಯಾಹ್ನ 3-4 ಗಂಟೆಯ ಲಘು ಉಪಾಹಾರವಾಗಿ ಸೇವಿಸಬಹುದು.

ಇದರ ಆರೋಗ್ಯ ಪ್ರಯೋಜನಗಳು;
ಮೊಸರು “ಪ್ರೋಬಯಾಟಿಕ್” ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಒಣದ್ರಾಕ್ಷಿಗಳು ಕರಗಬಲ್ಲ ಫೈಬರ್ನ ಹೆಚ್ಚಿನ ಅಂಶದೊಂದಿಗೆ “ಪ್ರಿಬಯಾಟಿಕ್” ಆಗಿ ಕಾರ್ಯನಿರ್ವಹಿಸುತ್ತವೆ.ಪ್ರೋಬಯಾಟಿಕ್‌ಗಳು ಮತ್ತು ಪ್ರಿಬಯಾಟಿಕ್‌ಗಳ ಮಿಶ್ರಣವು ಕೆಟ್ಟ ಬ್ಯಾಕ್ಟೀರಿಯಾವನ್ನು ತಟಸ್ಥಗೊಳಿಸುತ್ತದೆ ಮತ್ತು ಕರುಳು ಹಾಗೂ ಹೊಟ್ಟೆಯನ್ನು ಆರೋಗ್ಯವಾಗಿಡುತ್ತದೆ. ಇದು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.ಜೊತೆಗೆ ಕರುಳಿನಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಲ್ಲು ಮತ್ತು ಒಸಡುಗಳನ್ನು ಆರೋಗ್ಯಕರವಾಗಿರಿಸುವುದರ ಜೊತೆಗೆ ಇದು ಮೂಳೆಗಳು ಮತ್ತು ಕೀಲುಗಳಿಗೆ ಸಹ ಒಳ್ಳೆಯದು.

ಇದನ್ನೂ ಓದಿ : Home Remedies For Heartburn : ಊಟವಾದ ತಕ್ಷಣ ಕಾಣಿಸಿಕೊಳ್ಳುವ ಎದೆಯುರಿಗೆ ಇಲ್ಲಿದೆ ಮನೆಮದ್ದುಗಳು

ಇದನ್ನೂ ಓದಿ : ಅಧಿಕ ಕೊಲೆಸ್ಟ್ರಾಲ್‌ ಚಿಂತೆಯೇ ? ನಿಮ್ಮ ಸಮಸ್ಯೆಗೆ ಹಸಿ ಪಪ್ಪಾಯಿ ರಸ ರಾಮಬಾಣ

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ತೂಕ ನಷ್ಟವನ್ನು ಉತ್ತೇಜಿಸಲು ಮೊಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ಮಲಬದ್ಧತೆಯನ್ನು ತಡೆಗಟ್ಟುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

Consuming Curd With Raisins: Do you know the benefits of consuming curd with raisins? If you don’t know read this once

Comments are closed.