Maruti Suzuki Fronx : ಮಾರುತಿ ಸುಜುಕಿಯ ಹೊಸ ಕಾಂಪಾಕ್ಟ್‌ SUV ಕಾರು ಫ್ರಾಂಕ್ಸ್‌ನ ವೈಶಿಷ್ಟ್ಯಗಳು

ಈ ವರ್ಷದ ಆಟೋ ಎಕ್ಪೋದಲ್ಲಿ ಮೊದಲ ಬಾರಿಗೆ ಮಾರುತಿ ಸುಜುಕಿಯ ಫ್ರಾಂಕ್ಸ್‌ ಈಗ SUVಗಳ ಲೈನ್‌–ಅಪ್‌ನಲ್ಲಿದೆ. ಇದು ಮಾರುತಿ ಸುಜುಕಿ ಫ್ಯಾಮಲಿಯಲ್ಲಿ ಬಲೆನೊ ಮತ್ತು ಬ್ರೀಜಾದ ನಡುವಿನ ಆವೃತ್ತಿ ಎಂದು ಹೇಳಲಾಗುತ್ತಿದೆ. ಭಾರತದ ವಾಹನ ಮಾರುಕಟ್ಟೆಯಲ್ಲಿ ಈಗ SUV ಕಾರುಗಳ ಅಬ್ಬರ ಹೆಚ್ಚಾಗಿದೆ. ಅದರಲ್ಲೂ ಕ್ಯಾಪಾಕ್ಟ್‌ SUV ಗಳು ಹೆಚ್ಚು ಹೆಸರುಗಳಿಸಿವೆ. ಮೊದಲ ಸಲ ಕಾರು ಖರೀದಿಸುವವರೂ ಹ್ಯಾಚ್‌ಬ್ಯಾಕ್‌, ಸೆಡಾನ್‌ ಕಾರುಗಳಿಗಿಂತ SUV ಗಳನ್ನೇ ಆರಿಸಿಕೊಳ್ಳುತ್ತಿದ್ದಾರೆ. ಈ ಟ್ರೆಂಡ್‌ನಿಂದಾಗಿ ವಾಹನ ತಯಾರಕರೂ ಈ ಸೆಗ್ಮೆಂಟ್‌ಗಳ ಬಗ್ಗೆಯೇ ಯೋಚಿಸುವಂತಾಗಿದೆ. ಹಾಗಾಗಿ ಮಾರುತಿ ಸುಜುಕಿ ಫ್ರಾಂಕ್ಸ್‌ (Maruti Suzuki Fronx) ಅನ್ನು ಹೊರತಂದಿದೆ. ಇದು ಹುಂಡೈನ ಎಕ್ಸಟರ್‌ ಮತ್ತು ಟಾಟಾದ ಪಂಚ್‌ಗಳಿಗೆ ನೇರ ಸ್ಪರ್ಧೆ ನೀಡಲಿದೆ.

ಬೆಲೆ :
ಮಾರುತಿ ಸುಜುಕಿ ಫ್ರಾಂಕ್ಸ್‌ ಐದು ಆವೃತ್ತಿಗಳಲ್ಲಿ ದೊರೆಯಲಿದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝಿಟಾ, ಮತ್ತು ಆಲ್ಫಾ ಗಳಾಗಿವೆ. ಕಾರಿನ ಬೆಲೆಯನ್ನು ಆವೃತ್ತಿಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಹಾಗಾಗಿ ಇದರ ಆರಂಭಿಕ ಎಕ್ಸ್‌ ಶೋ ರೂಂ ಬೆಲೆ 7,46,500 ರೂ ದಿಂದ ಪ್ರಾರಂಭವಾಗಿ 13,13,500 ರೂ. ಗಳವರೆಗೆ ಇರಲಿದೆ.

ಮಾರುತಿ ಸುಜುಕಿ ಫ್ರಾಂಕ್ಸ್‌ ಬಣ್ಣಗಳ ಆಯ್ಕೆ:
ಮಾರುತಿ ಸುಜುಕಿಯ ಕ್ಯಾಪಾಕ್ಟ್‌ SUV ಕಾರಾದ ಫ್ರಾಂಕ್ಸ್‌ 10 ಮೊನೋಟೋನ್‌ ಮತ್ತು ಡ್ಯುಯಲ್‌ ಟೋನ್‌ ಬಣ್ಣಗಳ ಆಯ್ಕೆ ನೀಡಿದೆ.

ಇದನ್ನೂ ಓದಿ : Best E-Scooters : ಇಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುವ ಯೋಚನೆ ಇದ್ದರೆ ಈ ಮಾಡೆಲ್‌ಗಳನ್ನೊಮ್ಮೆ ಗಮನಿಸಿ

ವಿನ್ಯಾಸ ಮತ್ತು ವೈಶಿಷ್ಟ್ಯ:
ಗ್ರಾಂಡ್‌ ವಿಟಾರಾ ಮತ್ತು ಬಲೆನೊಗಳ ವಿನ್ಯಾಸಗಳಿಂದ ಪ್ರೇರಿತವಾಗಿ ಫ್ರಾಂಕ್ಸ್‌, ಕ್ರೋಮ್‌ ಬಾರ್‌ಗಳಿಂದ ಬೇರ್ಪಟ್ಟ ಹೆಕ್ಸಾಗೋನಲ್‌ ಗ್ರಿಲ್‌ ಹೊಂದಿದೆ. ಇದು ಸ್ಲೀಕರ್‌ ಲುಕ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು DRL ಗಳನ್ನು ಹೊಂದಿದೆ. 16 ಇಂಚಿನ ಆಲಾಯ್‌ ವೀಲ್‌ ಪಡೆದುಕೊಂಡಿದೆ. 1.0 ಲೀಟರ್‌ನ ಕೆ–ಸರಣಿಯ ಟರ್ಬೋ ಬೂಸ್ಟರ್‌ಜೆಟ್‌ ಪೆಟ್ರೋಲ್‌ ಇಂಜಿನ್‌ ಹೊಂದಿದ್ದು, ಹೈಬ್ರಿಡ್‌ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದು 99 hp ಪವರ್‌ ಮತ್ತು 147 Nm ಟಾರ್ಕ್‌ ಉತ್ಪಾದಿಸಲಿದೆ. ಇದರಲ್ಲಿ 1.2 ಲೀಟರ್‌ನ ಇಂಜಿನ್‌ ಆಯ್ಕೆ ಸಹ ಲಭ್ಯವಿದೆ. ಮ್ಯಾನ್ಯುವಲ್‌ ಟ್ರಾನ್ಸಮಿಷನ್‌ನ ಈ ಕಾರನ್ನು 5 ಸ್ಪೀಡ್‌ ಗೇರ್‌ ಬಾಕ್ಸ್‌ಗೆ ಜೋಡಿಸಲಾಗಿದೆ.
ಇದರಲ್ಲಿ 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಫ್ರಾಂಕ್ಸ್‌ನಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಹಿಲ್‌ ಹೋಲ್ಡ್‌ ಅಸಿಸ್ಟ್‌, ರೋಲ್‌ ಓವರ್‌ ಮಿಟಿಗೇಷನ್‌, ABS ಟೆಕ್ನಾಲಿಜಿ ಮತ್ತು ISOFIX ಚೈಲ್ಡ್‌ ಸೀಟ್‌ ಆಂಕ್ರೋಜಸ್‌ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ : Best Electric Bikes : 1.5 ಲಕ್ಷದ ಒಳಗೆ ಖರೀದಿಸಬಹುದಾದ 5 ಎಲೆಕ್ಷ್ರಿಕ್‌ ಬೈಕ್‌ಗಳು

(Maruti Suzuki’s news compact SUV car Fronx. Know the price and specifications)

Comments are closed.